See also 1herd  2herd
3herd ಹರ್ಡ್‍
ಸಕರ್ಮಕ ಕ್ರಿಯಾಪದ
  1. (ಕುರಿ, ದನಗಳನ್ನು) ಕಾಯು ಯಾ ಅಟ್ಟು:dogs are often trained to herd sheep ಕುರಿಗಳನ್ನು ಕಾಯಲು ಅನೇಕ ವೇಳೆ ನಾಯಿಗಳಿಗೆ ತಯಾರಿ ಕೊಡಲಾಗುವುದು.
  2. ಒಟ್ಟುಗೂಡಿಸು; ಗುಂಪು ಗೂಡಿಸು; ಒಂದುಗೂಡಿಸು: he herded everyone together to sing folk-songs ಜನಪದ ಗೀತೆಗಳನ್ನು ಹಾಡಲು ಅವನು ಎಲ್ಲರನ್ನೂ ಗುಂಪುಗೂಡಿಸಿದ.
  3. ಹಿಂಡಾಗಿ ಹೋಗುವಂತೆ ನಡೆಸು ಯಾ ಮಾಡು; ಗುಂಪಿನಲ್ಲಿ ಹೋಗುವಂತೆ ಒಯ್ಯು ಯಾ ಮಾಡು: the teacher herded the children into the classroom ಉಪಾಧ್ಯಾಯನು ಮಕ್ಕಳನ್ನು ತರಗತಿಯೊಳಕ್ಕೆ ಗುಂಪಾಗಿ ಒಯ್ದ ಯಾ ಹೋಗುವಂತೆ ಮಾಡಿದ.
ಅಕರ್ಮಕ ಕ್ರಿಯಾಪದ
  1. ಮಂದೆಯಾಗಿ, ಮಂದೆಗಟ್ಟಿಕೊಂಡು – ಹೋಗು; ಹಿಂಡಾಗಿ ಹೋಗು (ವ್ಯಕ್ತಿಗಳ ವಿಷಯದಲ್ಲಿರೂಪಕವಾಗಿ ಸಹ): when the bell rang they herded together ಗಂಟೆ ಬಾರಿಸಿದಾಗ ಅವರು ಹಿಂಡುಗಟ್ಟಿಕೊಂಡು ಒಟ್ಟಿಗೆ ಒಳಗೆ ಹೋದರು.
  2. ಮಂದೆಯಾಗು; ಹಿಂಡಾಗು; ಹಿಂಡುಗಟ್ಟು; ಹಿಂಡುಗೂಡು; ಗುಂಪಾಗು.