See also 2help
1help ಹೆಲ್ಪ್‍
ಕ್ರಿಯಾಪದ
[ಪ್ರಾಚೀನ ಪ್ರಯೋಗ ಭೂತರೂಪ holp, ಭೂತಕೃದಂತ holpen: (ಈಗ) ಭೂತರೂಪ ಮತ್ತು

ಭೂತಕೃದಂತ helped]

ಸಕರ್ಮಕ ಕ್ರಿಯಾಪದ
  1. ಸಹಾಯಮಾಡು; ನೆರವಾಗು; ಉಪಕಾರ ಮಾಡು: help me (to) lift it ಅದನ್ನು ಎತ್ತಲು ಸಹಾಯಮಾಡು help me to an answer ಒಂದು ಉತ್ತರ ಹೇಳಲು ನನಗೆ ಸಹಾಯಮಾಡುhelp the work on or forward ಕೆಲಸ ಮುಂದುವರಿಸಲು ನೆರವಾಗು help me over the stile ತಡಮೆಯನ್ನು ದಾಟಲು ನನಗೆ ಸಹಾಯಮಾಡು help me out (of a difficulty) ನನ್ನನ್ನು ಕಷ್ಟದಿಂದ ಪಾರುಮಾಡು; ಕಷ್ಟ ಪರಿಹರಿಸಲು ನೆರವಾಗು.
  2. (ವ್ಯಕ್ತಿಗೆ ನಡೆಯಲು, ಏರಲು, ಇಳಿಯಲು, ಮೊದಲಾದವಕ್ಕೆ) ನೆರವಾಗು; ಸಹಾಯಮಾಡು: helped her into her chair ಕರೆದುಕೊಂಡು ಹೋಗಿ ಅವಳನ್ನು ಕುರ್ಚಿಯಲ್ಲಿ ಕುಳ್ಳಿರಿಸಿದ.
  3. (ನೋವು ಯಾ ಕಷ್ಟವನ್ನು ಪರಿಹರಿಸಲು) ನೆರವಾಗು; ಸಹಾಯಮಾಡು
  4. ತಡೆಹಿಡಿ; ಪರಿಹರಿಸು; ತಪ್ಪಿಸು; ಬಿಡಿಸು; ನಿವಾರಿಸು: it can’t be help ಅದನ್ನು ತಪ್ಪಿಸಲಾಗುವುದಿಲ್ಲ I can’t helped that ನಾನು ಅದನ್ನು ಸರಿಪಡಿಸಲಾರೆ; ಅದನ್ನು ನಿವಾರಿಸಲು ನನಗೆ ಸಾಧ್ಯವಿಲ್ಲdon’t tell him more than you can help ಹೇಳಲೇಬೇಕಾದುದಕ್ಕಿಂತ ಹೆಚ್ಚೇನೂ ಅವನಿಗೆ ಹೇಳಬೇಡ.
  5. (ನಿಷೇಧಾರ್ಥಕದೊಡನೆ) ಮಾಡದಿರು; ಮಾಡದೆ ಬಿಡು: I cannot help hoping that...ಎಂಬ ಆಸೆಯಿಟ್ಟುಕೊಳ್ಳದಿರಲಾರೆcannot help but admire her ಅವಳನ್ನು ಮೆಚ್ಚದೆ ಇರಲಾರೆcannot help laughing ನಗದಿರಲಾರೆ.
  6. (ಊಟಕ್ಕೆ ಕುಳಿತಾಗ ಆಹಾರವನ್ನು) ಬಡಿಸು; ಇಕ್ಕು; ಹಾಕು: I want a spoon to help the gravy with ಮಾಂಸರಸ ಬಡಿಸಲು ನನಗೆ ಒಂದು ಚಮಚ ಬೇಕುshall I help you to greens? ನಾನು ಸೊಪ್ಪು ಬಡಿಸಲೆ?
  7. ರಕ್ಷಿಸು; ಕಾಪಾಡು: help me, I am falling ನಾನು ಬೀಳುತ್ತಿದ್ದೇನೆ, ನನ್ನನ್ನು ರಕ್ಷಿಸು.
  8. ಸುಲಭಮಾಡು; ಸಹಾಯಮಾಡು; ಅನುಕೂಲ ಮಾಡು; ಸುಗಮಗೊಳಿಸು: the exercise of restraint helps the achievement of peace ಸಂಯಮದ ವರ್ತನೆ ಶಾಂತಿಸಾಧನೆಯನ್ನು ಸುಲಭಗೊಳಿಸುತ್ತದೆ.
  9. ಪ್ರಯೋಜನವಾಗು; ಸಹಾಯಕವಾಗು; ಉಪಯುಕ್ತವಾಗು; ಅನುಕೂಲವಾಗು; ಲಾಭಕರವಾಗು: her good looks helped her career ಅವಳ ಸ್ಫುರದ್ರೂಪ ಅವಳ ವೃತ್ತಿಜೀವನಕ್ಕೆ ಅನುಕೂಲವಾಯಿತು.
ಅಕರ್ಮಕ ಕ್ರಿಯಾಪದ

ನೆರವಾಗು; ಸಹಾಯಮಾಡು; ಸಹಾಯಕನಾಗು; ಪ್ರಯೋಜನಕ್ಕೆ, ಉಪಯೋಗಕ್ಕೆ ಬರು: every little bit helps ಪ್ರತಿ ತುಣುಕೂ ಪ್ರಯೋಜನಕ್ಕೆ ಬರುತ್ತದೆ, ಸಹಾಯಕವಾಗುತ್ತದೆ.

ಪದಗುಚ್ಛ

so help me (God)(ಪ್ರಾರ್ಥನೆಯಲ್ಲಿ ಯಾ ಪ್ರಮಾಣ ಮಾಡುವಾಗ ಹೇಳುವ ಮಾತು) (ನಾನು ಸತ್ಯ ಹೇಳುತ್ತಿರುವುದರಿಂದ, ಭಾಷೆಗೆ ತಪ್ಪದಿರುವುದರಿಂದ) ದೇವರು ನನ್ನನ್ನು (ಅಂತೆ) ರಕ್ಷಿಸಲಿ, ಕಾಪಾಡಲಿ:that’s all that happened, so help me (God) ನಡೆದದ್ದೆಲ್ಲಾ ಅಷ್ಟೇ, ನಾನು ನಿಜ ಹೇಳುತ್ತಿದ್ದೇನೆ, ನನ್ನಾಣೆಯಾಗಿ, ಆದ್ದರಿಂದ ದೇವರು ನನ್ನನ್ನು ಕಾಪಾಡಲಿ.

ನುಡಿಗಟ್ಟು
  1. help oneself:
    1. (ಆಹಾರ) ತಾನೇ ಬಡಿಸಿಕೊ.
    2. (ಇನ್ನೊಬ್ಬನ ನೆರವನ್ನು ಯಾ ಅನುಮತಿಯನ್ನು ಕೋರದೆ) ಸ್ವತಃ ತೆಗೆದುಕೊ:help yourself to the fruits ಹಣ್ಣುಗಳನ್ನು (ಎಷ್ಟು ಬೇಕೋ ಅಷ್ಟು) ನೀನೇ ತೆಗೆದುಕೊ.
  2. help out (ಮುಖ್ಯವಾಗಿ ಪ್ರಯತ್ನ, ವಿಷಮಸ್ಥಿತಿಗಳಲ್ಲಿ) ಸಹಾಯಮಾಡು; ನೆರವಾಗು; ನೆರವು ನೀಡು: her friends helped her out when she lost her job ಅವಳು ಕೆಲಸ ಕಳೆದುಕೊಂಡಾಗ ಅವಳ ಸ್ನೇಹಿತರು ಅವಳಿಗೆ ನೆರವು ನೀಡಿದರು.
  3. more than (one) can help ಅನಿವಾರ್ಯವಾದುದಕಿಂತ ಹೆಚ್ಚಾಗಿ:don’t be longer than you can help ಅನಿವಾರ್ಯವಾದುದಕ್ಕಿಂತ ಹೆಚ್ಚು ಕಾಲ ತೆಗೆದುಕೊಳ್ಳಬೇಡ.
See also 1help
2help ಹೆಲ್ಪ್‍
ನಾಮವಾಚಕ
  1. ಸಹಾಯ; ನೆರವು; ಒತ್ತಾಸೆ; ಉಪಕಾರ: we need your help ನಮಗೆ ನಿಮ್ಮ ಸಹಾಯ ಬೇಕುcame to our help ನಮ್ಮ ನೆರವಿಗೆ ಬಂದ.
  2. ನೆರವಿಗೆ ಯಾ ಸಹಾಯಕ್ಕೆ ಒದಗುವ ವ್ಯಕ್ತಿ ಯಾ ವಸ್ತು.
  3. (ಮನೆಕೆಲಸದ) ಆಳು; ಸೇವಕ; ಜವಾನ:our domestic help has given us notice ನಮ್ಮ ಮನೆಗೆಲಸದವಳು ಬಿಟ್ಟುಹೋಗುವುದಾಗಿ ತಿಳಿಸಿದ್ದಾಳೆ.
  4. ನೌಕರರು; ಜಈನಿಗೆ ಯಾ ಕುಟುಂಬಕ್ಕೆ ಸೇರಿದ ಆಳುಗಳು; ಸೇವಕರು: scarcity of help ಆಳುಗಳ ಅಭಾವ.
  5. ಉಪಾಯ; ಪರಿಹಾರ; ನಿವಾರಣೆ:there is no help for it ಅದಕ್ಕೇನೂ ಪರಿಹಾರವಿಲ್ಲ, ಉಪಾಯವಿಲ್ಲ.
  6. (ಆಹಾರ) ಬಡಿಸುವುದು; ಬಡಿಸಿದ ಪ್ರಮಾಣ:he asked her for a second help of pie ಅವನು ಕಡುಬನ್ನು ಎರಡನೇ ಸಾರಿ ಬಡಿಸುವಂತೆ ಅವಳನ್ನು ಕೇಳಿದನು.
ಪದಗುಚ್ಛ
  1. be of help (to somebody) (ಯಾರಿಗಾದರೂ) ಸಹಾಯಕವಾಗಿರು; ಉಪಯುಕ್ತವಾಗಿರು: can I be of any (or some) help to you? ನಾನು ನಿಮಗೆ ಏನಾದರೂ (ಯಾ ಸ್ವಲ್ಪ) ಸಹಾಯ ಮಾಡಬಹುದೇ? it wasn’t (of) much help ಅದರಿಂದ ಅಂಥದೇನೂ ಸಹಾಯವಾಗಲಿಲ್ಲ.
  2. by help of ಸಹಾಯದಿಂದ; ನೆರವಿನಿಂದ.
  3. home help (ಬ್ರಿಟಿಷ್‍ ಪ್ರಯೋಗ) ಮನೆಗೆಲಸದಲ್ಲಿ ನೆರವಾಗುವವನು(ಳು).
  4. lady help (ಬ್ರಿಟಿಷ್‍ ಪ್ರಯೋಗ) ಮನೆಯೊಡತಿಯ ಸಹಾಯಕಿ ಮತ್ತು ಸಂಗಾತಿ.
  5. mother’s helpಹಿರಿಯ ದಾದಿ.