See also 1help
2help ಹೆಲ್ಪ್‍
ನಾಮವಾಚಕ
  1. ಸಹಾಯ; ನೆರವು; ಒತ್ತಾಸೆ; ಉಪಕಾರ: we need your help ನಮಗೆ ನಿಮ್ಮ ಸಹಾಯ ಬೇಕುcame to our help ನಮ್ಮ ನೆರವಿಗೆ ಬಂದ.
  2. ನೆರವಿಗೆ ಯಾ ಸಹಾಯಕ್ಕೆ ಒದಗುವ ವ್ಯಕ್ತಿ ಯಾ ವಸ್ತು.
  3. (ಮನೆಕೆಲಸದ) ಆಳು; ಸೇವಕ; ಜವಾನ:our domestic help has given us notice ನಮ್ಮ ಮನೆಗೆಲಸದವಳು ಬಿಟ್ಟುಹೋಗುವುದಾಗಿ ತಿಳಿಸಿದ್ದಾಳೆ.
  4. ನೌಕರರು; ಜಈನಿಗೆ ಯಾ ಕುಟುಂಬಕ್ಕೆ ಸೇರಿದ ಆಳುಗಳು; ಸೇವಕರು: scarcity of help ಆಳುಗಳ ಅಭಾವ.
  5. ಉಪಾಯ; ಪರಿಹಾರ; ನಿವಾರಣೆ:there is no help for it ಅದಕ್ಕೇನೂ ಪರಿಹಾರವಿಲ್ಲ, ಉಪಾಯವಿಲ್ಲ.
  6. (ಆಹಾರ) ಬಡಿಸುವುದು; ಬಡಿಸಿದ ಪ್ರಮಾಣ:he asked her for a second help of pie ಅವನು ಕಡುಬನ್ನು ಎರಡನೇ ಸಾರಿ ಬಡಿಸುವಂತೆ ಅವಳನ್ನು ಕೇಳಿದನು.
ಪದಗುಚ್ಛ
  1. be of help (to somebody) (ಯಾರಿಗಾದರೂ) ಸಹಾಯಕವಾಗಿರು; ಉಪಯುಕ್ತವಾಗಿರು: can I be of any (or some) help to you? ನಾನು ನಿಮಗೆ ಏನಾದರೂ (ಯಾ ಸ್ವಲ್ಪ) ಸಹಾಯ ಮಾಡಬಹುದೇ? it wasn’t (of) much help ಅದರಿಂದ ಅಂಥದೇನೂ ಸಹಾಯವಾಗಲಿಲ್ಲ.
  2. by help of ಸಹಾಯದಿಂದ; ನೆರವಿನಿಂದ.
  3. home help (ಬ್ರಿಟಿಷ್‍ ಪ್ರಯೋಗ) ಮನೆಗೆಲಸದಲ್ಲಿ ನೆರವಾಗುವವನು(ಳು).
  4. lady help (ಬ್ರಿಟಿಷ್‍ ಪ್ರಯೋಗ) ಮನೆಯೊಡತಿಯ ಸಹಾಯಕಿ ಮತ್ತು ಸಂಗಾತಿ.
  5. mother’s helpಹಿರಿಯ ದಾದಿ.