See also 2heel  3heel  4heel  5heel
1heel ಹೀಲ್‍
ನಾಮವಾಚಕ
  1. (ಮನುಷ್ಯನ) ಹಿಮ್ಮಡಿ; ಪಾರ್ಷ್ಣಿ.
  2. (ಅಂಗರಚನಾಶಾಸ್ತ್ರ) ಚತುಷ್ಪಾದಿಯ ಯಾ ಕಶೇರುಕಗಳ (ಅನೇಕ ವೇಳೆ ನೆಲದಿಂದ ಮೇಲಕ್ಕೆತ್ತಿದ) ಹಿಂಗಾಲ ಹಿಮ್ಮಡಿ.
  3. ಕಾಲಚೀಲದ ಹಿಮ್ಮಡಿ; ಹಿಮ್ಮಡಿ ಮುಚ್ಚುವ ಕಾಲುಚೀಲದ ಭಾಗ.
  4. ಜೋಡಿನ, ಬೂಟಿನ – ಹಿಮ್ಮಡಿ; ಹಿಮ್ಮಡಿಗೆ ಆಸರೆಯಾದ ಜೋಡಿನ ಭಾಗ.
  5. ಹಿಮ್ಮಡಿಯಾಕಾರದ ಯಾ ಹಿಮ್ಮಡಿ ಸ್ಥಾನದ ವಸ್ತು (ಉದಾಹರಣೆಗೆ ಪಿಟೀಲು ಕಮಾನಿನ ಹಿಡಿ, ಗಾಲ್‍ ದಾಂಡಿನ ಕೊಕ್ಕೆ, ಹಡಗಿನ ಅಡಿಗಟ್ಟಿನ ಹಿಂಭಾಗದ ಕೊನೆ, ಮಣಿಕಟ್ಟಿನ ಮಗ್ಗುಲಲ್ಲಿರುವ ಅಂಗೈಯ ಕೆಳಭಾಗ).
  6. ಬ್ರೆಡ್‍ ತುಂಡಿನ ಅಡಿಭಾಗ, ಕೆಳಗಿನ ಗಟ್ಟಿ ಪದರ.
  7. (ಆಡುಮಾತು) ಕೀಳು ವ್ಯಕ್ತಿ; ತುಚ್ಛ ಮನುಷ್ಯ; ಹೀನವ್ಯಕ್ತಿ; ಹಲ್ಕಾ.
  8. ನಾಯಿಯು ಮಾಲೀಕನ ಹಿಮ್ಮಡಿಗೆ ಹತ್ತಿರವಾಗಿ ಹೆಜ್ಜೆ ಹಾಕಿ ನಡೆಯಬೇಕೆಂದು ಅದಕ್ಕೆ ಕೊಡುವ ಆಜ್ಞೆ.
  9. (ಬಹುವಚನದಲ್ಲಿ) ಹಿಂಗಾಲುಗಳು; ಹಿಂಪಾದಗಳು; ಹಿಂಭಾಗದ ಪಾದಗಳು.
  10. (ತೋಟಗಾರಿಕೆ) ಬೇರೆ ಸಸ್ಯದ ಕೊಯ್ದ ಭಾಗಕ್ಕೆ ಅಂಟಿಸಿದ ಸರಿಯಾದ ಆಕಾರವಿಲ್ಲದ, ಓರೆಕೋರೆಯಾದ ಸಸ್ಯಭಾಗ.
  11. ನಂಬಿಕಸ್ತನಲ್ಲದ, ಅವಿಶ್ವಾಸಾರ್ಹ ವ್ಯಕ್ತಿ.
  12. ನೀರ್ಗಲ್ಲ ಹಾವುಗೆಯ (ಸ್ಕೀ) ಹಿಂಭಾಗ, ಹಿಮ್ಮಡಿ.
ಪದಗುಚ್ಛ
  1. heel and toe walking (ಓಟದಲ್ಲಿರದಂತೆ, ಹೆಜ್ಜೆ ಯಾ ಪಾದ) ಪೂರ್ತಿ ಊರುವ ನಡಗೆ; ಹಿಮ್ಮಡಿ ಮತ್ತು ಕಾಲ್ಬೆರಳಿನ ನಡಗೆ.
  2. his heels (ಇಸ್ಪಿಟಾಟ) ಎಲೆ ಹಂಚುವವನಿಂದ ಮಗುಚಿದ ಎಲೆ ತೆಗೆಯಲ್ಪಟ್ಟರೆ ಎರಡು ಅಂಕ ಗಳಿಸುವ ‘ಗುಲಾಮ’.
ನುಡಿಗಟ್ಟು
  1. at heel:
    1. (ನಾಯಿಯ ವಿಷಯದಲ್ಲಿ) ಹಿಂದೆಯೇ; ಹಿಂಬಾಲಿಸಿ; ಬೆನ್ನ ಹಿಂದೆಯೇ.
    2. (ವ್ಯಕ್ತಿಯ ವಿಷಯದಲ್ಲಿ) ಹತೋಟಿಯಲ್ಲಿ; ನಿಯಂತ್ರಣದಲ್ಲಿ; ವಶದಲ್ಲಿ.
  2. at the heels of (ವ್ಯಕ್ತಿ, ಘಟನೆ, ಮೊದಲಾದವುಗಳ ವಿಷಯದಲ್ಲಿ) ಹಿಂದೆಯೇ; ಬೆನ್ನ ಹಿಂದೆಯೇ; ಬೆನ್ನಿಗೇ; ಹಿಂಬಾಲಿಸಿಕೊಂಡೇ: a crowd at his heels ಅವನ ಬೆನ್ನ ಹಿಂದೆಯೇ ಒಂದು ಗುಂಪು.
  3. back on one’s heels:
    1. (ಎದುರಾಳಿಯಿಂದ) ಹಿಮ್ಮೆಟ್ಟಿಸಲ್ಪಟ್ಟು; ಹಿಂದಕ್ಕೆ – ಸರಿಸಲ್ಪಟ್ಟು, ದೂಡಲ್ಪಟ್ಟು.
    2. ಕಕ್ಕಾಬಿಕ್ಕಿಯಾಗಿ; ಗೊಂದಲಕ್ಕೆ ಬಿದ್ದು; ಗಾಬರಿಯಾಗಿ ಯಾ ಆಶ್ಚರ್ಯಗೊಂಡು.
  4. be carried with the heels foremost ಹೆಣದಂತೆ ಸಾಗಿಸು; ಚಟ್ಟದ ಮೇಲೆ ಒಯ್ಯಲ್ಪಡು.
  5. clap by the heels ಬಂಧಿಸು; ಸೆರೆಯಲ್ಲಿಡು; ಕಾಲಿಗೆ ಕೋಳ ತೊಡಿಸು: when they had seized upon him and clapped him by the heels ಅವರು ಅವನನ್ನು ತುಡುಕಿ ಸೆರೆಯಲ್ಲಿಟ್ಟಾಗ.
  6. cool one’s heels (ಮುಖ್ಯವಾಗಿ ಇನ್ನೊಬ್ಬನ ಅನಾದರದಿಂದ) ಕಾಯಿಸಲ್ಪಡು: the producer let the actors cool their heels in the office ಆ ನಿರ್ಮಾಪಕನು ನಟರನ್ನು ಕಚೇರಿಯಲ್ಲಿ ಕಾಯಿಸಿದನು.
  7. down at heel:
    1. (ಪಾದರಕ್ಷೆಯ ವಿಷಯದಲ್ಲಿ) ಹಿಮ್ಮಡಿ ಭಾಗ ಸವೆದು ಹೋಗಿ, ಜೀರ್ಣವಾಗಿ.
    2. (ವ್ಯಕ್ತಿಯ ವಿಷಯದಲ್ಲಿ) ಕೊಳಕಾಗಿ; ಹೊಲಸಾಗಿ; ಚೊಕ್ಕಟವಿಲ್ಲದೆ; ಅಚ್ಚುಕಟ್ಟಿಲ್ಲದೆ: very down at the heel in appearance ನೋಡುವುದಕ್ಕೆ ಬಹಳ ಕೊಳಕಾಗಿ.
  8. heels over head = 1head over heels.
  9. kick one’s heels ಕಾಯುವಂತಾಗು; ಕಾಯುತ್ತಾ ನಿಂತಿರು: do not keep me here kicking my heels ನಾನು ಇಲ್ಲಿ ಸುಮ್ಮನೆ ಕಾಯುತ್ತಾ ನಿಂತಿರುವಂತೆ ಮಾಡಬೇಡ.
  10. kick up one’s heels ವಿನೋದವಾಗಿರು; ವಿನೋದವಾಗಿ ಕಾಲಕಳೆ; ಕುಣಿದಾಡು; ನೆಗೆದಾಡು: grand father could still kick up his heels now and then ತಾತ ಇನ್ನೂ ಆಗಾಗ ಕುಣಿದಾಡಬಲ್ಲವನಾಗಿದ್ದ.
  11. lay by the heels:
    1. ದಸ್ತಗಿರಿ ಮಾಡು; ಕೋಳ ತೊಡಿಸು.
    2. (ಎದುರಾಳಿಯನ್ನು) ಕಾಲು ಹಿಡಿದು ಎತ್ತಿ ಎಸೆ.
  12. on the heels of = ನುಡಿಗಟ್ಟು \((1)\): famine often follows on the heels of war ಅನೇಕ ವೇಳೆ ಕ್ಷಾಮ ಯುದ್ಧವನ್ನು ಹಿಂಬಾಲಿಸಿಕೊಂಡೇ ಬರುತ್ತದೆ.
  13. out at the heels = ನುಡಿಗಟ್ಟು \((7)\).
  14. show a clean pair of heels ಓಡಿ ಹೋಗು; ಪರಾರಿಯಾಗು; ಕಂಬಿಕೀಳು; ಕಾಲಿಗೆ ಬುದ್ಧಿಹೇಳು; ಓಟಕೀಳು; ಪಲಾಯನ ಮಾಡು: the thief showed a clean pair of heels ಕಳ್ಳನು ಓಟಕಿತ್ತ.
  15. take to one’s heels = ನುಡಿಗಟ್ಟು \((14)\).
  16. to heel:
    1. (ನಾಯಿಯ ವಿಷಯದಲ್ಲಿ) ಹಿಂದೆಯೇ; ಹಿಂಬಾಲಿಸುತ್ತಾ:at a word from his owner the dog moved to heel ಯಜಮಾನನ ಒಂದು ಮಾತಿಗೇ ನಾಯಿ ಅವನ ಹಿಂದೆಯೇ ಹೋಯಿತು.
    2. (ವ್ಯಕ್ತಿಯ ವಿಷಯದಲ್ಲಿ) ಅಂಕೆಯಲ್ಲಿ; ಹತೋಟಿಯಲ್ಲಿ; ಹಿಡಿತದಲ್ಲಿ; ನಿಯಂತ್ರಣದಲ್ಲಿ: it is hard to bring the eye to heel ಕಣ್ಣನ್ನು ಹತೋಟಿಗೆ ತರುವುದು ಕಷ್ಟ.
  17. tread on one’s heel ಹಿಂದೆ ನುಗ್ಗಿಕೊಂಡು ಬರು; ಗುಂಪುಗುಂಪಾಗಿ ಹಿಂದೆಬರು.
  18. trip up one’s heels ಕೆಳಕ್ಕೆ ಕೆಡವು; ಕೆಡವಿ ಹಾಕು; ಬೀಳಿಸು.
  19. turn on one’s heel ಗಿರಕ್ಕನೆ ತಿರುಗು; ತಟಕ್ಕನೆ ಹಿಂದಕ್ಕೆ ತಿರುಗು: he turned upon his heel ಅವನು ತಟಕ್ಕನೆ ತಿರುಗಿಕೊಂಡ.
  20. under the heel ಅಧೀನದಲ್ಲಿ; ಕಾಲಡಿಯಲ್ಲಿ; ತುಳಿಯಲ್ಪಟ್ಟು; ದಮನಕ್ಕೊಳಗಾಗಿ; ತುಳಿತಕ್ಕೊಳಗಾಗಿ; ಅದುಮಿಡಲ್ಪಟ್ಟು; ದಬ್ಬಾಳಿಕೆಗೆ ಈಡಾಗಿ: under the heel of a cruel invader ಕ್ರೂರ ದಾಳಿಕಾರನ ಕಾಲಡಿಯಲ್ಲಿ, ದಬ್ಬಾಳಿಕೆಯಲ್ಲಿ.
  21. upon one’s heels = ನುಡಿಗಟ್ಟು \((12)\).
See also 1heel  3heel  4heel  5heel
2heel ಹೀಲ್‍
ಸಕರ್ಮಕ ಕ್ರಿಯಾಪದ
  1. (ಜೋಡು ಮೊದಲಾದವುಗಳಿಗೆ) ಹಿಮ್ಮಡಿ – ಕಟ್ಟು, ಹಾಕು.
  2. ಬೆನ್ನಟ್ಟಿಹೋಗು; ಹಿಂಬಾಲಿಸಿಕೊಂಡು ಹೋಗು: dogs were heeling his horses ನಾಯಿಗಳು ಅವನ ಕುದುರೆಗಳನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದುವು.
  3. (ಗಾಲ್‍ ಆಟ) ದಾಂಡಿನ ಹಿಮ್ಮಡಿಯಿಂದ (ಚೆಂಡನ್ನು) ಹೊಡೆ.
ಅಕರ್ಮಕ ಕ್ರಿಯಾಪದ
  1. (ನೃತ್ಯದಲ್ಲಿ ಮಾಡುವಂತೆ) ನೆಲಕ್ಕೆ ಹಿಮ್ಮಡಿ ಸೋಕಿಸು, ತಾಗಿಸು.
  2. (ರಗ್ಬಿ ಕಾಲ್ಚೆಂಡಾಟ) (ನೆಲದ ಮೇಲೆ ಬಿದ್ದ ಚೆಂಡನ್ನು ಪಡೆಯುವ ನೂಕುನುಗ್ಗಲಿನಲ್ಲಿ) ಚೆಂಡನ್ನು ಹಿಂದಕ್ಕೆ ತನ್ನ ಕಡೆಯವರಿಗೆ ಹಿಮ್ಮಡಿಯಿಂದ ತಳ್ಳಿ ಕಳುಹಿಸು.
See also 1heel  2heel  4heel  5heel
3heel ಹೀಲ್‍
ಸಕರ್ಮಕ ಕ್ರಿಯಾಪದ

(ಹಡಗನ್ನು) ಓಲಿಸು; ವಾಲಿಸು; ಓಲುವಂತೆ ಮಾಡು: here we heeled our ships and scraped them ನಾವು ನಮ್ಮ ಹಡಗುಗಳನ್ನು ಓಲುವಂತೆ ಮಾಡಿ ಕೊಳೆಯನ್ನು ಉಜ್ಜಿಹಾಕಿದೆವು.

ಅಕರ್ಮಕ ಕ್ರಿಯಾಪದ

(ಹಡಗು ಮೊದಲಾದವುಗಳ ವಿಷಯದಲ್ಲಿ) (ಗಾಳಿಯ ಒತ್ತಡದಿಂದಲೋ, ಭಾರದ ಹೆಚ್ಚುಕಡಮೆಯಿಂದಲೋ) ಓಲು; ವಾಲು; ಮಾಲು; ಒಂದು ಕಡೆಗೆ – ಬಾಗು, ತೊಂಗು: in such a strong wind the sailboat kept heeling to the left ಅಂಥ ಬಿರುಗಾಳಿಯಲ್ಲಿ ಹಾಯಿದೋಣಿಯು ಎಡಕ್ಕೆ ಓಲಿಕೊಂಡೇ ಸಾಗಿತು.

See also 1heel  2heel  3heel  5heel
4heel ಹೀಲ್‍
ನಾಮವಾಚಕ

(ನೌಕಾಯಾನ) ಹಡಗಿನ ಓಲುವೆ; ಓಲುವೆ; ಹಡಗಿನ ಭಾಗ.

See also 1heel  2heel  3heel  4heel
5heel ಹೀಲ್‍
ಸಕರ್ಮಕ ಕ್ರಿಯಾಪದ

= hele.