See also 2hedge
1hedge ಹೆಜ್‍
ನಾಮವಾಚಕ
  1. (ಪೊದೆ, ಕುರುಚಲು ಗಿಡ, ಹಸಿ ಯಾ ಒಣಗಿದ ದಡಿ, ಮೊದಲಾದವುಗಳ) ಬೇಲಿ.
  2. (ತಡೆಗಟ್ಟಾಗಿ ನಿಲ್ಲಿಸಿದ ವಸ್ತುಗಳ ಯಾ ಮನುಷ್ಯರ) ಸಾಲು; ಪಂಕ್ತಿ.
  3. (ರೂಪಕವಾಗಿ) ಅಡ್ಡಿ; ಆಡಚಣೆ; ತಡೆ.
  4. (ಪಂದ್ಯ ಒಡ್ಡುವುದರಲ್ಲಿ ತನಗೆ ಒದಗಬಹುದಾದ ನಷ್ಟವನ್ನು ಸರಿದೂಗಿಸಲು ಎದುರು ಕಡೆಯೂ ಪಣವೊಡ್ಡಿ) ಭದ್ರಪಡಿಸಿಕೊಳ್ಳುವುದು; ಸಂಭವನೀಯ ನಷ್ಟದ ವಿರುದ್ಧ ರಕ್ಷಣೆ, ರಕ್ಷಣೋಪಾಯ: buy gold as a hedge against inflation ಹಣದುಬ್ಬರದ ವಿರುದ್ಧ ರಕ್ಷಣೆಯಾಗಿ ಚಿನ್ನವನ್ನು ಕೊಂಡುಕೊ.
ಪದಗುಚ್ಛ
  1. dead hedge ಒಣಬೇಲಿ.
  2. quickset hedge ಹಸುರು ಬೇಲಿ; ಹಸಿಬೇಲಿ.
See also 1hedge
2hedge ಹೆಜ್‍
ಸಕರ್ಮಕ ಕ್ರಿಯಾಪದ
  1. (ಬೇಲಿ ಮೊದಲಾದವುಗಳಿಂದ) ಸುತ್ತುಗಟ್ಟು; ಆವರಣಹಾಕು.
  2. (ರೂಪಕವಾಗಿ) ಸುತ್ತುವರಿ; ಸುತ್ತುಗಟ್ಟು; ಆವರಿಸು.
  3. ಬೇಲಿಹಾಕು; ಬೇಲಿ ನೆಡು; ಬೇಲಿ ಹಾಕಿ ಪ್ರತ್ಯೇಕಿಸು.
  4. (ಜೂಜು, ಸಟ್ಟಾ ವ್ಯಾಪಾರ, ಮೊದಲಾದವುಗಳಲ್ಲಿ, ಎರಡು ಕಡೆಯೂ ಪಣವೊಡ್ಡಿ ವ್ಯಾಪಾರ ನಡೆಸಿ) ನಷ್ಟವಾಗದಂತೆ – ರಕ್ಷಿಸಿಕೊ, ಭದ್ರಪಡಿಸಿಕೊ.
ಅಕರ್ಮಕ ಕ್ರಿಯಾಪದ
  1. (ಯಾವುದಕ್ಕೂ) ಸಿಕ್ಕಿಕೊಳ್ಳದಿರು; ಕಟ್ಟುಬೀಳದಿರು.
  2. ಬೇಲಿಯನ್ನು ಮಟ್ಟಕ್ಕೆ ಸರಿಯಾಗಿ ಕತ್ತರಿಸು, ಸವರು.
  3. ಬೇಲಿ ನೆಡು; ಬೇಲಿಕಟ್ಟು.