See also 2hedge
1hedge ಹೆಜ್‍
ನಾಮವಾಚಕ
  1. (ಪೊದೆ, ಕುರುಚಲು ಗಿಡ, ಹಸಿ ಯಾ ಒಣಗಿದ ದಡಿ, ಮೊದಲಾದವುಗಳ) ಬೇಲಿ.
  2. (ತಡೆಗಟ್ಟಾಗಿ ನಿಲ್ಲಿಸಿದ ವಸ್ತುಗಳ ಯಾ ಮನುಷ್ಯರ) ಸಾಲು; ಪಂಕ್ತಿ.
  3. (ರೂಪಕವಾಗಿ) ಅಡ್ಡಿ; ಆಡಚಣೆ; ತಡೆ.
  4. (ಪಂದ್ಯ ಒಡ್ಡುವುದರಲ್ಲಿ ತನಗೆ ಒದಗಬಹುದಾದ ನಷ್ಟವನ್ನು ಸರಿದೂಗಿಸಲು ಎದುರು ಕಡೆಯೂ ಪಣವೊಡ್ಡಿ) ಭದ್ರಪಡಿಸಿಕೊಳ್ಳುವುದು; ಸಂಭವನೀಯ ನಷ್ಟದ ವಿರುದ್ಧ ರಕ್ಷಣೆ, ರಕ್ಷಣೋಪಾಯ: buy gold as a hedge against inflation ಹಣದುಬ್ಬರದ ವಿರುದ್ಧ ರಕ್ಷಣೆಯಾಗಿ ಚಿನ್ನವನ್ನು ಕೊಂಡುಕೊ.
ಪದಗುಚ್ಛ
  1. dead hedge ಒಣಬೇಲಿ.
  2. quickset hedge ಹಸುರು ಬೇಲಿ; ಹಸಿಬೇಲಿ.