heading ಹೆಡಿಂಗ್‍
ನಾಮವಾಚಕ
  1. (ಪುಟ, ಅಧ್ಯಾಯ, ಮೊದಲಾದವುಗಳ ನೆತ್ತಿಯಲ್ಲಿನ) ಶೀರ್ಷಿಕೆ; ಶಿರೋನಾಮೆ; ತಲೆಬರಹ.
  2. (ಒಂದು ವಸ್ತು, ಪ್ರಬಂಧ, ಮೊದಲಾದವುಗಳ ಒಂದು) ವಿಭಾಗ.
  3. (ಸುರಂಗ ಮಾರ್ಗ ಕೊರೆಯಲು ಪೂರ್ವಸಿದ್ಧತೆಯಾಗಿ ಹಾಕುವ) ಸಮತಲದ ದಾರಿ.
  4. (ಗಣಿಗಾರಿಕೆ) = $^1$drift(15).
  5. ಪೀಪಾಯಿಗಳ ತಲೆಭಾಗವನ್ನು ಮಾಡಲು ಬಳಸುವ ಸಾಮಗ್ರಿ.
  6. ಪರದೆಯ ನೇತುಹಾಕುವ ಕೊಕ್ಕೆಗಳನ್ನು ಸೇರಿಸಿರುವ ಪಟ್ಟಿಯ ವಿಸ್ತೃತ ಭಾಗ.
  7. (ಯಾವುದೇ ವಸ್ತುವಿನ) ತಲೆ; ಶಿರ; ತುದಿ; ಅಗ್ರ; ಮೇಲುಭಾಗ.
  8. (ಯಾವುದೇ ವಸ್ತುವಿನ) ಮುಖ; ಮುಂಭಾಗ; ಅಂಚು; ಮುಂತುದಿ.
  9. (ಮುಖ್ಯವಾಗಿ ಕಾಲ್ಚೆಂಡಾಟದಲ್ಲಿ) ತಲೆಹೊಡೆತ; ಚೆಂಡನ್ನು ತಲೆಯಿಂದ ಹೊಡೆಯುವುದು.
  10. ಗುರಿ; ಚಲಿಸುತ್ತಿರುವ ಹಡಗು ಯಾ ವಿಮಾನವು ಯಾವುದೇ ಕ್ಷಣದಲ್ಲಿ ತಿರುಗಿಕೊಂಡಿರುವ ದಿಕ್ಕು.
  11. ನಿರ್ದಿಷ್ಟ ದಿಕ್ಕಿಗೆ ತಿರುಗುವುದು, ಅಭಿಮುಖವಾಗುವುದು ಯಾ ಆ ದಿಕ್ಕಿನಲ್ಲಿ ಹೋಗುವುದು, ಸಾಗುವುದು, ಚಲಿಸುವುದು.