See also 2drift
1drift ಡ್ರಿಹ್ಟ್‍
ನಾಮವಾಚಕ
  1. ಬಳಿತ; ಅಪವಾಹ:
    1. ಪ್ರವಾಹದಲ್ಲಿ ಕೊಚ್ಚಿಹೋಗುವುದು.
    2. ಗಾಳಿಯ ಬೀಸಿಗೆ ಸಿಕ್ಕಿ ಸಾಗುವುದು.
  2. ನಿಧಾನವಾದ ಹರಿವು; ಮಂದಪ್ರವಾಹ.
  3. ದಿಕ್ಚ್ಯುತಿ; ಪಥಚ್ಯುತಿ:
    1. (ನೌಕಾಯಾನ) (ಸೆಳವುಗಳಿಂದ ಯಾ ಪ್ರವಾಹಗಳಿಂದ ಹಡಗಿನ) ದಿಕ್ಕು ಬದಲಿಕೆ; ದಾರಿ ಬದಲಾಯಿಸುವುದು.
    2. ಸುತುಳಿಗೋವಿಯಿಂದ ಹಾರಿಸಿದ ಕ್ಷಿಪಣಿಗುಂಡು ತನ್ನ ಭ್ರಮಣದಿಂದ ಯಾ ಗಾಳಿಯೊತ್ತಡದಿಂದ ದಿಕ್ಕುತಪ್ಪುವುದು.
    3. ವಾಯುವಿನ ಚಲನ ಮತ್ತು ಒತ್ತಡಗಳಿಂದ ವಿಮಾನ ದಿಕ್ಕುತಪ್ಪುವುದು.
  4. (ಬ್ರಿಟಿಷ್‍ ಪ್ರಯೋಗ) (ಅರಣ್ಯದ ಕಾಯಿದೆ) ದನಗಳ ಶೇಖರಣೆ; ದನಗಳನ್ನು ಒಂದು ಗೊತ್ತಾದ ದಿನ ಕಾಡಿನ ಒಂದು ಗೊತ್ತಾದ ಸ್ಥಳಕ್ಕೆ, ಒಡೆತನದ ನಿರ್ಣಯ ಮೊದಲಾದವಕ್ಕಾಗಿ ಅಟ್ಟಿಕೊಂಡು ಹೋಗುವುದು.
  5. ಸಹಜ ಪ್ರತ್ತಿ; ಅಪ್ರಜ್ಞ ಒಲವು; ಸ್ವಾಭಾವಿಕವಾದ ಯಾ ಅರಿವಿಗೆ ಬಾರದ ಪ್ರತ್ತಿ, ಒಲವು.
  6. ನಿಷ್ಕ್ರಿಯತೆ; ಘಟನೆಗಳಿಗಾಗಿ ಕಾದು ಕೂರುವ ಮನೋತ್ತಿ; ಘಟನಾ ಪ್ರವಾಹದಲ್ಲಿ ತೇಲಿಕೊಂಡು ಹೋಗುವುದು; ಏನೂ ಮಾಡಲು ತೋರದೆ ಸುಮ್ಮನಿರುವುದು: the policy of drift ನಿಷ್ಕ್ರಿಯ ನೀತಿ.
  7. (ವ್ಯಕ್ತಿಯ ಯಾ ಆತನ ಮಾತಿನ) ಗುರಿ; ಉದ್ದೇಶ; ಧಾಟಿ; ಧೋರಣೆ; ವ್ಯಾಪ್ತಿ; ಆಶಯ; ಇಂಗಿತ.
  8. ಸುರಿಯುವ ಮಳೆ; ವರ್ಷಧಾರೆ.
  9. ಕೊಚ್ಚಿಕೊಂಡು ಹೋಗುವ ರಾಶಿ.
  10. ಗಾಳಿಯೊಟ್ಟಿಲು; ಗಾಳಿಯ ಹೊಡೆತದಿಂದ ಒಟ್ಟುಗೂಡಿದ ಹಿಮರಾಶಿ, ಮರಳು, ಮೊದಲಾದವು.
  11. ಪ್ರವಾಹದ ಒಟ್ಟಿಲು; ನೀರಿನ ಪ್ರವಾಹದಿಂದ ಕೊಚ್ಚಿಕೊಂಡು ಬಂದ ರಾಶಿ.
  12. (ಭೂವಿಜ್ಞಾನ) ಸಂಹತಿ; ನಿಕ್ಷೇಪ; ಪ್ರವಾಹನಿಕ್ಷೇಪ ಯಾ ವಾಯುನಿಕ್ಷೇಪ; ನೀರಿನ ಪ್ರವಾಹ, ಗಾಳಿಯ ಹೊಡೆತ, ಮೊದಲಾದವುಗಳಿಂದ ನೆಲದ ಮೇಲೆ ಸೇರಿದ ಒಟ್ಟಿಲು.
  13. (Drift). ಒಡ್ಡು; ಒಟ್ಟಿಲು; ಪ್ಲೈಸ್ಟಸೀನ್‍ ಕಾಲದಲ್ಲಿ ಮಂಜುಗಡ್ಡೆಗಳಿಂದಾದ ಜೇಡಿ, ಕಲ್ಲು, ಮೊದಲಾದವುಗಳ ರಾಶಿ.
  14. ಕೊಚ್ಚುಬಲೆ; ತೇಲುಬಲೆ; (ಹೆರಿಂಗ್‍ ಮೊದಲಾದ ಈನುಗಳನ್ನು ಹಿಡಿಯಲು) ಸಮುದ್ರದ ಉಬ್ಬರವಿಳಿತಗಳು ಹೊಡೆದುಕೊಂಡು ಹೋಗುವಂತೆ ತೇಲಿಬಿಟ್ಟ ದೊಡ್ಡ ಬಲೆ.
  15. (ಗಣಿಗಾರಿಕೆ) ಧಾರಾಸುರಂಗ; ಅಡ್ಡಸುರಂಗ; ಖನಿಜದ ಎಳೆಯನ್ನು ಅನುಸರಿಸಿ ಹೋಗುವ ಸಮತಲ ಸುರಂಗ ಮಾರ್ಗ.
  16. (ದಕ್ಷಿಣ ಆಹಿಕದಲ್ಲಿ) ಹಾಯಿಗಡ; ಹೊಳೆ ಹಾಯುವ ಸ್ಥಳ; ಕಡವು.
  17. ಲೋಹ ಬೈರಿಗೆ; ಲೋಹಗಳಲ್ಲಿ ಕಂಡಿ ಕೊರೆಯಲು ಯಾ ಕಂಡಿಗಳನ್ನು ಅಗಲ ಮಾಡಲು ಬಳಸುವ ಸಾಧನ.
  18. ಸರಿತ; ಡ್ರಿಹ್ಟು; ವಿಮಾನದ ಹೊರಮೈ ಮೇಲೆ ಪ್ರಯೋಗವಾಗುವ ಒಟ್ಟು ಅನಿಲ ಒತ್ತಡದ ಕ್ಷಿತಿಜೀಯ ಘಟಕ.
  19. (ಪ್ರಾಂತೀಯ ಪ್ರಯೋಗ) ಪ್ರಾಣಿಗಳ ಹಿಂಡು; ಪ್ರಾಣಿಸಮೂಹ.
  20. ಪಕ್ಷಿಸಂಕುಲ; ಹಕ್ಕಿಗಳ – ಗುಂಪು, ಸಮೂಹ.
  21. (ರೇಸಿಂಗ್‍ ಕಾರು ಮೊದಲಾದವುಗಳ) ನಿಯಂತ್ರಿತ ಜಾರಿಕೆ; ಹತೋಟಿಯಲ್ಲಿರುವಂತೆ ಜಾರುವುದು, ಜಾರಿಸುವುದು.
  22. ಹೂಗಿಡಗಳ – ಗುಂಪು, ಸಮೂಹ.