See also 2hatch  3hatch  4hatch  5hatch
1hatch ಹ್ಯಾಚ್‍
ನಾಮವಾಚಕ
  1. ಎರಡು ಭಾಗ ಮಾಡಿರುವ ಕದದ ಕೆಳ ಅರ್ಧ; ಅರೆಕದ; ಕೆಳಕದ.
  2. (ಕದ, ಗೋಡೆ, ನೆಲ ಯಾ ಹಡಗಿನ ದಕ್ಕ ಮೊದಲಾದವುಗಳಲ್ಲಿ ಮಾಡಿರುವ) ಕಂಡಿ; ದ್ವಾರ.
  3. (ನೌಕಾಯಾನ) ಹಡಗಿನಲ್ಲಿ ಸರಕಿಳಿಸುವ – ಕಂಡಿ, ದ್ವಾರ.
  4. (ನೌಕಾಯಾನ) ಸರಕಿಳಿಸುವ – ಕಂಡಿಯನ್ನು ಮುಚ್ಚುವ ನೆಲಬಾಗಿಲು, ಕಳ್ಳ ಬಾಗಿಲು.
  5. (ಕೆರೆಕಟ್ಟೆ ಮೊದಲಾದವುಗಳ) ತೂಬಿನ ಬಾಗಿಲು; ದ್ವಾರ.
  6. (ವಿಮಾನ ಯಾ ಆಕಾಶ ನೌಕೆಯ):
    1. ಕದ; ಬಾಗಿಲು; ದ್ವಾರ.
    2. ಕಂಡಿ.
  7. ಎರಡೂ ಕೊಠಡಿಗಳ ನಡುವೆ ಇರುವ ತೆರಪು, ಕಂಡಿ, ಅವಕಾಶ; ಮುಖ್ಯವಾಗಿ ಅಡಿಗೆಮನೆ ಮತ್ತು ಊಟದ ಮನೆಗಳ ನಡುವೆ ಆಹಾರ ಪದಾರ್ಥಗಳನ್ನು ಒದಗಿಸಲು ಮಡಿರುವ ತೆರಪು.
ಪದಗುಚ್ಛ
  1. down the hatch (ಅಶಿಷ್ಟ) (ಕುಡಿತದಲ್ಲಿ) ಗಂಟಲೊಳಗೆ; ಗಂಟಲೊಳಕ್ಕೆ.
  2. under hatches:
    1. (ಹಡಗಿನಲ್ಲಿ) ದಕ್ಕದ ಕೆಳಗೆ.
    2. (ರೂಪಕವಾಗಿ) ಕೆಳಗೆ ಹುದುಗಿ ಕಣ್ಮರೆಯಾಗಿ.
    3. ಹೀನಸ್ಥಿತಿಗೆ ಬಿದ್ದು, ಇಳಿದು.
    4. ಮೃತನಾಗಿ; ಸತ್ತು.
See also 1hatch  3hatch  4hatch  5hatch
2hatch ಹ್ಯಾಚ್‍
ಸಕರ್ಮಕ ಕ್ರಿಯಾಪದ
  1. (ಮರಿ ಪಕ್ಷಿಗಳನ್ನು) ಮೊಟ್ಟೆಯಿಂದ ಹೊರತರು, ಹೊರಬರಿಸು; ಮೊಟ್ಟೆಯೊಡೆದು ಮರಿಮಾಡು.
  2. (ಮೊಟ್ಟೆಗೆ) ಕಾವುಕೊಡು.
  3. (ಮೊಟ್ಟೆಯ ವಿಷಯದಲ್ಲಿ) ಮರಿ ಮಾಡು.
  4. (ಪಿತೂರಿ, ಒಳಸಂಚು, ಮೊದಲಾದವುಗಳನ್ನು) ಯೋಜಿಸಿ ಬೆಳೆಸು; ಪಿತೂರಿ ಮಾಡು; ಒಳಸಂಚು ಮಾಡು; ತಂತ್ರ ಮಾಡು.
ಅಕರ್ಮಕ ಕ್ರಿಯಾಪದ
  1. ಮೊಟ್ಟೆಯೊಡೆದುಕೊಂಡು ಹೊರಬರು.
  2. (ಮೊಟ್ಟೆಯ ವಿಷಯದಲ್ಲಿ) ಮರಿ – ಮಾಡು, ಈಯು, ಹೊರತರು.
ಪದಗುಚ್ಛ
See also 1hatch  2hatch  4hatch  5hatch
3hatch ಹ್ಯಾಚ್‍
ನಾಮವಾಚಕ
  1. ( ಮೊಟ್ಟೆಯೊಡೆದು) ಮರಿಮಾಡುವುದು ಯಾ ಮರಿ ಬರುವುದು.
  2. ಮೊಟ್ಟೆಯೊಡೆದು ಬಂದ ಮರಿಗಳ ತಂಡ, ಗುಂಪು.
ಪದಗುಚ್ಛ

hatches, catches, matches, and dispatches (ವೃತ್ತಪತ್ರಿಕೆಯಲ್ಲಿ ಪ್ರಕಟಿಸುವ) ಜನನಗಳ, (ಮದುವೆಯ) ನಿಶ್ಚಿತಾರ್ಥಗಳ, ವಿವಾಹಗಳ ಮತ್ತು ಮರಣಗಳ ಪಟ್ಟಿ.

See also 1hatch  2hatch  3hatch  5hatch
4hatch ಹ್ಯಾಚ್‍
ಸಕರ್ಮಕ ಕ್ರಿಯಾಪದ

(ಹೊರ ಮೈಮೇಲೆ ಒತ್ತಾಗಿರುವ, ಸಾಮಾನ್ಯವಾಗಿ ಸಮಾನಾಂತರ) ರೇಖೆಗಳನ್ನು ಕೊರೆ; ಗೆರೆಗಳನ್ನು ಎಳೆ.

ಪದಗುಚ್ಛ

hatched moulding (ವಾಸ್ತುಶಿಲ್ಪ) ರೇಖಾಲಂಕಾರ; ಗೆರೆಯಲಂಕಾರ; ಸಮಾನಾಂತರ ಸರಳ ರೇಖೆಗಳ ಎರಡು ಶ್ರೇಣಿಗಳು ಪರಸ್ಪರ ಅಡ್ಡಹಾಯುವಂತೆ ಕೊರೆದ ಅಲಂಕಾರ.

See also 1hatch  2hatch  3hatch  4hatch
5hatch ಹ್ಯಾಚ್‍
ನಾಮವಾಚಕ

(ಹೊರ ಮೈಮೇಲೆ ಒತ್ತಾಗಿ ಕೊರೆದ, ಸಾಮಾನ್ಯವಾಗಿ ಸಮಾನಾಂತರ) ಗೆರೆ; ರೇಖೆ (ಗಳಲ್ಲೊಂದು).