See also 2hatch  3hatch  4hatch  5hatch
1hatch ಹ್ಯಾಚ್‍
ನಾಮವಾಚಕ
  1. ಎರಡು ಭಾಗ ಮಾಡಿರುವ ಕದದ ಕೆಳ ಅರ್ಧ; ಅರೆಕದ; ಕೆಳಕದ.
  2. (ಕದ, ಗೋಡೆ, ನೆಲ ಯಾ ಹಡಗಿನ ದಕ್ಕ ಮೊದಲಾದವುಗಳಲ್ಲಿ ಮಾಡಿರುವ) ಕಂಡಿ; ದ್ವಾರ.
  3. (ನೌಕಾಯಾನ) ಹಡಗಿನಲ್ಲಿ ಸರಕಿಳಿಸುವ – ಕಂಡಿ, ದ್ವಾರ.
  4. (ನೌಕಾಯಾನ) ಸರಕಿಳಿಸುವ – ಕಂಡಿಯನ್ನು ಮುಚ್ಚುವ ನೆಲಬಾಗಿಲು, ಕಳ್ಳ ಬಾಗಿಲು.
  5. (ಕೆರೆಕಟ್ಟೆ ಮೊದಲಾದವುಗಳ) ತೂಬಿನ ಬಾಗಿಲು; ದ್ವಾರ.
  6. (ವಿಮಾನ ಯಾ ಆಕಾಶ ನೌಕೆಯ):
    1. ಕದ; ಬಾಗಿಲು; ದ್ವಾರ.
    2. ಕಂಡಿ.
  7. ಎರಡೂ ಕೊಠಡಿಗಳ ನಡುವೆ ಇರುವ ತೆರಪು, ಕಂಡಿ, ಅವಕಾಶ; ಮುಖ್ಯವಾಗಿ ಅಡಿಗೆಮನೆ ಮತ್ತು ಊಟದ ಮನೆಗಳ ನಡುವೆ ಆಹಾರ ಪದಾರ್ಥಗಳನ್ನು ಒದಗಿಸಲು ಮಡಿರುವ ತೆರಪು.
ಪದಗುಚ್ಛ
  1. down the hatch (ಅಶಿಷ್ಟ) (ಕುಡಿತದಲ್ಲಿ) ಗಂಟಲೊಳಗೆ; ಗಂಟಲೊಳಕ್ಕೆ.
  2. under hatches:
    1. (ಹಡಗಿನಲ್ಲಿ) ದಕ್ಕದ ಕೆಳಗೆ.
    2. (ರೂಪಕವಾಗಿ) ಕೆಳಗೆ ಹುದುಗಿ ಕಣ್ಮರೆಯಾಗಿ.
    3. ಹೀನಸ್ಥಿತಿಗೆ ಬಿದ್ದು, ಇಳಿದು.
    4. ಮೃತನಾಗಿ; ಸತ್ತು.