ಹ್ಯಾಟು; (ತಲೆಗೆ ಹಾಕಿಕೊಳ್ಳುವ, ಸಾಮಾನ್ಯವಾಗಿ ಚಾಚಿದ ಏಣಿರುವ) ಪರಂಗಿ ಟೋಪಿ.
ಹ್ಯಾಟು; ಒಬ್ಬ ವ್ಯಕ್ತಿಯ ವೃತ್ತಿ ಯಾ ಸಾಮರ್ಥ್ಯ, ಸ್ಥಾನ, ಮುಖ್ಯವಾಗಿ ಅನೇಕ ಸಾಮರ್ಥ್ಯಗಳಲ್ಲಿ ಒಂದು: wearing his managerial hat ತನ್ನ ಮ್ಯಾನೇಜರನ ಹ್ಯಾಟು ತೊಟ್ಟು; ಮ್ಯಾನೇಜರನ ಸ್ಥಾನ ವಹಿಸಿ.
(ಯಾವುದೋ ಸಂದರ್ಭ ಯಾ ಸಂಗತಿ ಸಂಭವಿಸುವುದಿಲ್ಲ ಎಂದು ಖಾತರಿಯಾಗಿ ಹೇಳುವಲ್ಲಿ ಬಳಸುವ ಮಾತಾಗಿ) ಹಾಗಾದ ಪಕ್ಷಕ್ಕೆ ನನ್ನ ಹ್ಯಾಟನ್ನೇ ನುಂಗಿ ಬಿಡುತ್ತೇನೆ; ನನ್ನ ನಾಲಗೆಯನ್ನೇ ತಿಂದುಬಿಡುತ್ತೇನೆ.
hang up one’s hat ಮನೆ ಮಾಡು; ವಸತಿಯನ್ನು ವಾಸಕ್ಕೆ ತೆಗೆದುಕೊ.
hat in hand:
ಗುಲಾಮೀ ಮನೋಭಾವದಿಂದ; ದಾಸ್ಯಭಾವದಿಂದ.
ಗುಲಾಮೀ ಮನೋಭಾವದ; ದಾಸ್ಯಭಾವದ.
keep it under one’s hat ಗುಟ್ಟಾಗಿ, ರಹಸ್ಯವಾಗಿ – ಇಡು.
my hat! ವಿಸ್ಮಯವನ್ನು ಸೂಚಿಸುವ ಉದ್ಗಾರ.
old hat (ಆಡುಮಾತು) (ಬೇಸರಗೊಳಿಸುವಷ್ಟು) ಹಳಸಿದ ಮಾತು, ವಿಷಯ; ಚಿಟ್ಟು ಹಿಡಿಸುವಷ್ಟು ಪರಿಚಿತವಾದದ್ದು.
out of a hat ತೋಚಿದಂತೆ ಯಾ ಸಿಕ್ಕಾಬಟ್ಟೆ ಆಯ್ಕೆ ಮಾಡಿದ ಯಾ ಯಕ್ಷಿಣಿಯಲ್ಲಿ ಮಾಡುವಂತೆ ಮಾಡಿದ.
pass the hat round ಚಂದಾ ಬೇಡಲು ಕಳುಹಿಸು; ಚಂದಾ ಬೇಡು; ವಂತಿಗೆ ಎತ್ತು.
take off one’s hat to ಮೆಚ್ಚುಗೆ ಸೂಸು, ತೋರಿಸು; ಮೆಚ್ಚುವಂಥದೆಂದು ಶ್ಲಾಘಿಸು, ಹೊಗಳು.
talk through one’s hat (ಅಶಿಷ್ಟ):
ಜಂಬ ಕೊಚ್ಚು.
ಗೊಡ್ಡು ಬೆದರಿಕೆ ಹಾಕು.
ಉತ್ಪ್ರೇಕ್ಷಿಸು ಯಾ ಸೃಷ್ಟಿಸಿಕೊಂಡು ಹೇಳು.
ಹುಚ್ಚುಹುಚ್ಚಾಗಿ, ವಿಷಯ ತಿಳಿಯದೆ, ಅರ್ಥರಹಿತವಾಗಿ ಯಾ ಅಸಂಬದ್ಧವಾಗಿ – ಮಾತನಾಡು.
throw one’s hat in the ring ಸವಾಲನ್ನು ಸ್ವೀಕರಿಸು; ಸ್ಪರ್ಧೆಗೆ ಯಾ ಹೋರಾಟಕ್ಕೆ ಇಳಿ.
under one’s hat ಗುಟ್ಟಾಗಿ.
wear one’s hat ನಿರ್ದಿಷ್ಟವಾದ ಪಾತ್ರದಲ್ಲಿ ತನ್ನನ್ನು ಪ್ರದರ್ಶಿಸಿಕೊ.
wear two hats ಏಕಕಾಲದಲ್ಲಿ ಭಿನ್ನಭಿನ್ನ ಪಾತ್ರಗಳಲ್ಲಿ ತನ್ನನ್ನು ಪ್ರದರ್ಶಿಸಿಕೊ.