See also 2hat
1hat ಹ್ಯಾಟ್‍
ನಾಮವಾಚಕ
  1. ಹ್ಯಾಟು; (ತಲೆಗೆ ಹಾಕಿಕೊಳ್ಳುವ, ಸಾಮಾನ್ಯವಾಗಿ ಚಾಚಿದ ಏಣಿರುವ) ಪರಂಗಿ ಟೋಪಿ.
  2. ಹ್ಯಾಟು; ಒಬ್ಬ ವ್ಯಕ್ತಿಯ ವೃತ್ತಿ ಯಾ ಸಾಮರ್ಥ್ಯ, ಸ್ಥಾನ, ಮುಖ್ಯವಾಗಿ ಅನೇಕ ಸಾಮರ್ಥ್ಯಗಳಲ್ಲಿ ಒಂದು: wearing his managerial hat ತನ್ನ ಮ್ಯಾನೇಜರನ ಹ್ಯಾಟು ತೊಟ್ಟು; ಮ್ಯಾನೇಜರನ ಸ್ಥಾನ ವಹಿಸಿ.
ಪದಗುಚ್ಛ
  1. cardinal’s hat ಕಾರ್ಡಿನಲ್‍ (ಪದವಿಯ) ಪಾದ್ರಿಯ ಹ್ಯಾಟು.
  2. opera hat ಮಡಿಸಬಹುದಾದ ಕೊಳಗದಾಕಾರದ ಹ್ಯಾಟು.
  3. red hat = ಪದಗುಚ್ಛ \((1)\).
  4. top hat ಕೊಳಗದಾಕಾರದ ರೇಷ್ಮೆಯ ಹ್ಯಾಟು.
ನುಡಿಗಟ್ಟು
  1. (as) black as my hat ತೀರ ಕಪ್ಪು; ಕಗ್ಗಪ್ಪು.
  2. at the drop of a hat ಕೂಡಲೇ; ತಕ್ಷಣವೇ.
  3. bad hat (ಅಶಿಷ್ಟ):
    1. ಕೆಟ್ಟ ವ್ಯಕ್ತಿ; ನೀತಿಗೆಟ್ಟವನು; ಮಾನಮರ್ಯಾದೆ ಇಲ್ಲದವನು.
    2. ಮೋಸಗಾರ; ವಂಚಕ.
  4. eat one’s hat:
    1. ಹಿಡಿಸದ, ಹಿತವಲ್ಲದ, ಅಸಹ್ಯವಾದ ಕೆಲಸ ಮಾಡು.
    2. (ಯಾವುದೋ ಸಂದರ್ಭ ಯಾ ಸಂಗತಿ ಸಂಭವಿಸುವುದಿಲ್ಲ ಎಂದು ಖಾತರಿಯಾಗಿ ಹೇಳುವಲ್ಲಿ ಬಳಸುವ ಮಾತಾಗಿ) ಹಾಗಾದ ಪಕ್ಷಕ್ಕೆ ನನ್ನ ಹ್ಯಾಟನ್ನೇ ನುಂಗಿ ಬಿಡುತ್ತೇನೆ; ನನ್ನ ನಾಲಗೆಯನ್ನೇ ತಿಂದುಬಿಡುತ್ತೇನೆ.
  5. hang up one’s hat ಮನೆ ಮಾಡು; ವಸತಿಯನ್ನು ವಾಸಕ್ಕೆ ತೆಗೆದುಕೊ.
  6. hat in hand:
    1. ಗುಲಾಮೀ ಮನೋಭಾವದಿಂದ; ದಾಸ್ಯಭಾವದಿಂದ.
    2. ಗುಲಾಮೀ ಮನೋಭಾವದ; ದಾಸ್ಯಭಾವದ.
  7. keep it under one’s hat ಗುಟ್ಟಾಗಿ, ರಹಸ್ಯವಾಗಿ – ಇಡು.
  8. my hat! ವಿಸ್ಮಯವನ್ನು ಸೂಚಿಸುವ ಉದ್ಗಾರ.
  9. old hat (ಆಡುಮಾತು) (ಬೇಸರಗೊಳಿಸುವಷ್ಟು) ಹಳಸಿದ ಮಾತು, ವಿಷಯ; ಚಿಟ್ಟು ಹಿಡಿಸುವಷ್ಟು ಪರಿಚಿತವಾದದ್ದು.
  10. out of a hat ತೋಚಿದಂತೆ ಯಾ ಸಿಕ್ಕಾಬಟ್ಟೆ ಆಯ್ಕೆ ಮಾಡಿದ ಯಾ ಯಕ್ಷಿಣಿಯಲ್ಲಿ ಮಾಡುವಂತೆ ಮಾಡಿದ.
  11. pass the hat round ಚಂದಾ ಬೇಡಲು ಕಳುಹಿಸು; ಚಂದಾ ಬೇಡು; ವಂತಿಗೆ ಎತ್ತು.
  12. take off one’s hat to ಮೆಚ್ಚುಗೆ ಸೂಸು, ತೋರಿಸು; ಮೆಚ್ಚುವಂಥದೆಂದು ಶ್ಲಾಘಿಸು, ಹೊಗಳು.
  13. talk through one’s hat (ಅಶಿಷ್ಟ):
    1. ಜಂಬ ಕೊಚ್ಚು.
    2. ಗೊಡ್ಡು ಬೆದರಿಕೆ ಹಾಕು.
    3. ಉತ್ಪ್ರೇಕ್ಷಿಸು ಯಾ ಸೃಷ್ಟಿಸಿಕೊಂಡು ಹೇಳು.
    4. ಹುಚ್ಚುಹುಚ್ಚಾಗಿ, ವಿಷಯ ತಿಳಿಯದೆ, ಅರ್ಥರಹಿತವಾಗಿ ಯಾ ಅಸಂಬದ್ಧವಾಗಿ – ಮಾತನಾಡು.
  14. throw one’s hat in the ring ಸವಾಲನ್ನು ಸ್ವೀಕರಿಸು; ಸ್ಪರ್ಧೆಗೆ ಯಾ ಹೋರಾಟಕ್ಕೆ ಇಳಿ.
  15. under one’s hat ಗುಟ್ಟಾಗಿ.
  16. wear one’s hat ನಿರ್ದಿಷ್ಟವಾದ ಪಾತ್ರದಲ್ಲಿ ತನ್ನನ್ನು ಪ್ರದರ್ಶಿಸಿಕೊ.
  17. wear two hats ಏಕಕಾಲದಲ್ಲಿ ಭಿನ್ನಭಿನ್ನ ಪಾತ್ರಗಳಲ್ಲಿ ತನ್ನನ್ನು ಪ್ರದರ್ಶಿಸಿಕೊ.