See also 2hardy
1hardy ಹಾರ್ಡಿ
ಗುಣವಾಚಕ
( ತರರೂಪ hardier, ತಮರೂಪ hardiest)
  1. ಧೈರ್ಯದ; ಕೆಚ್ಚಿನ; ದಿಟ್ಟ: hardiest explores ದಿಟ್ಟ ಪರಿಶೋಧಕರು.
  2. ಗಟ್ಟಿಮುಟ್ಟಾದ; ದೇಹದಾರ್ಢ್ಯವುಳ್ಳ; ಕಟ್ಟುಮಸ್ತಾದ; ಕಷ್ಟಸಹಿಷ್ಣುವಾದ; ಶ್ರಮ, ಆಯಾಸ, ಮೊದಲಾದವನ್ನು ಸಹಿಸಬಲ್ಲ: the hardy mountaineers ಗಟ್ಟಿಮುಟ್ಟಾದ ಬೆಟ್ಟಗಾಡಿನವರು.
  3. (ತೋಟಗಾರಿಕೆ) (ಸಸ್ಯಗಳು) ವರ್ಷದುದ್ದಕ್ಕೂ ಬಯಲಿನಲ್ಲಿ ಬೆಳೆಯಬಲ್ಲ: many of the hardy annuals are weedy ಬಯಲಿನಲ್ಲಿ ಬೆಳೆಯಬಲ್ಲ ವರ್ಷಾಯು ಸಸ್ಯಗಳಲ್ಲಿ ಅನೇಕವು ಕಳೆಗಳಂತಿರುತ್ತವೆ.
See also 1hardy
2hardy ಹಾರ್ಡಿ
ನಾಮವಾಚಕ

ಕಮ್ಮಾರನ ಉಳಿ; (ಲೋಹ ಮೊದಲಾದವನ್ನು ಅಡಿಗಲ್ಲಿನ ಮೇಲಿಟ್ಟು ಕತ್ತರಿಸುವ) ಕಮ್ಮಾರನ, ಗಟ್ಟಿ ಕಬ್ಬಿಣದ, ಮೊನಚು ಉಳಿ.