See also 2hang
1hang ಹ್ಯಾಂಗ್‍
ಕ್ರಿಯಾಪದ

(ಭೂತರೂಪ & ಭೂತಕೃದಂತ hung; ಗಲ್ಲಿಗೇರಿಸುವ ಅರ್ಥದಲ್ಲಿ ಯಾ ಪ್ರಾಚೀನ ಪ್ರಯೋಗ hanged).

ಸಕರ್ಮಕ ಕ್ರಿಯಾಪದ
  1. (ಮೇಲಿರುವ ಕೊಕ್ಕೆಯಿಂದ, ಕೊಕ್ಕೆಗೆ ಯಾ ಇತರ ವಸ್ತುವಿನಿಂದ, ವಸ್ತುವಿಗೆ) ತೂಗಹಾಕು; ತೂಗಕಟ್ಟು; ತೂಗಬಿಡು; ತಗಲುಹಾಕು; ಇಳಿಯಬಿಡು.
  2. (ಬೇಟೆ, ಮೃಗ, ಹಕ್ಕಿ, ದನ, ಮೊದಲಾದವುಗಳ ಮಾಂಸವನ್ನು):
    1. ಹದಮಾಡಲು – ತೂಗಹಾಕು, ತೂಗಕಟ್ಟು, ನೇತುಹಾಕು: hung beef ತೂಗಹಾಕಿ ಒಣಗಿಸಿ ಹದಮಾಡಿದ ದನದ ಮಾಂಸ.
    2. (ಮೃದುವಾಗಲು ಯಾ ಸ್ವಲ್ಪ ಹಳಸಲು) ತೂಗಬಿಡು; ತೂಗಕಟ್ಟು.
  3. (ಚಿತ್ರಪಟಗಳನ್ನು) ಗೋಡೆಗೆ ತೂಗಹಾಕು; ನೇತುಹಾಕು: pictures hung on the line ನೋಟಕ್ಕೆ ಅನುಕೂಲವಾದ ಎತ್ತರದಲ್ಲಿ ತೂಗಕಟ್ಟಿದ ಪಟಗಳು.
  4. (ಚಿತ್ತಾರದ ಕಾಗದವನ್ನು) ಗೋಡೆಗೆ ಅಂಟಿಸು.
  5. (ಗಂಟೆ ಗೋಪುರದಲ್ಲಿ ಗಂಟೆಗಳನ್ನು) ಕಟ್ಟು; ಜೋಡಿಸು; ಅಳವಡಿಸು; ಹೊಂದಿಸು.
  6. (ಕದದ ಕೀಲುಗಳ ಮೇಲೆ ಬಾಗಿಲನ್ನು, ಸ್ಪ್ರಿಂಗುಗಳ ಮೇಲೆ ಗಾಡಿಯನ್ನು ಸಲೀಸಾಗಿ ತಿರುಗುವಂತೆ) ಇರಿಸು; ಕೂರಿಸು; ನಿಲ್ಲಿಸು: door hangs on hinges ಕದ ಕೀಲುಗಳ ಮೇಲೆ ತಿರುಗುತ್ತದೆ. coach hangs on springs ಗಾಡಿ ಸ್ಪ್ರಿಂಗುಗಳ ಮೇಲೆ ಕೂತಿದೆ.
  7. (ಭೂತರೂಪ ಮತ್ತು ಭೂತಕೃದಂತ hanged)ಗಲ್ಲಿಗೇರಿಸು; ನೇಣುಹಾಕು; ಹಾಸಿಗೆ ಹಾಕು; ಶೂಲಕ್ಕೇರಿಸು.
  8. ನೇಣು ಹಾಕಿಕೊ.
  9. (ಶಾಪದ ಮಾತಾಗಿ) ಹಾಳಾಗ! ನಾಶವಾಗಲಿ: hang! ಹಾಳಾಗ! hang it! ನಾಶವಾಗ! hang you ಹಾಳಾಗು! I will be hanged if (ಅದು ಹಾಗಾದಲ್ಲಿ) ನನ್ನನ್ನು ಗಲ್ಲಿಗೆ ಹಾಕಲಿ: ನಾನು ತಲೆ ಒಪ್ಪಿಸುತ್ತೇನೆ. do it and hand the expense ಅದನ್ನು ಮಾಡು, ಖರ್ಚಿನ ವಿಷಯ ಹಾಳಾಗಲಿ.
  10. ತಗ್ಗಿಸು; ಬಗ್ಗಿಸು: hang the head (ನಾಚಿಕೆ, ಅವಮಾನ, ಮೊದಲಾದವುಗಳಿಂದ) ತಲೆತಗ್ಗಿಸು.
  11. ಬಾಗಿಸು; ಬಾಗುವಂತೆ ಮಾಡು.
  12. ತೊಂಗಿಸು; ಜೋಲುಬೀಳಿಸು.
  13. ತೂಗಲಂಕಾರ ಮಾಡು; ತೂಗುವ ಬಾವುಟಗಳು, ಇಳಿಬಿಟ್ಟ ಹಾರಗಳು, ತೂಗುಬಿಟ್ಟ ಪರದೆಗಳು, ಮೊದಲಾದವುಗಳಿಂದ ಅಲಂಕರಿಸು, ಸಿಂಗರಿಸು: the heavens hung with stars ನಕ್ಷತ್ರಗಳಿಂದ ತೂಗಕಟ್ಟಿದ ಆಕಾಶ.
  14. (ಅಮೆರಿಕನ್‍ ಪ್ರಯೋಗ) (ಪರಸ್ಪರ ಭಿನ್ನಾಭಿಪ್ರಾಯಗಳಿಂದ) ನ್ಯಾಯದರ್ಶಿ ಮಂಡಲಿಯು ನಿರ್ಣಯಕ್ಕೆ ಬರದಂತೆ ಮಾಡು, ನಿರ್ಧಾರ ಎಗೆದುಕೊಳ್ಳುವಲ್ಲಿ ತೂಗಾಡುತ್ತಿರುವಂತೆ ಮಾಡು.
ಅಕರ್ಮಕ ಕ್ರಿಯಾಪದ
  1. ತೂಗು; ತೊಂಗು; ಜೋಲು; ಇಳಿಯಬೀಳು
  2. ತೂಗಾಡು; ಜೋಲಾಡು; ಜೋಲುಬಿದ್ದಿರು; ನೇಲಾಡು; ನೇತಾಡು (ರೂಪಕವಾಗಿ ಸಹ): dress hangs badly ಉಡುಪು ಅವಲಕ್ಷಣವಾಗಿ ಜೋಲಾಡುತ್ತಿದೆ curtain hangs folds ಪರದೆ ನಿರಿಗೆನಿರಿಗೆಯಾಗಿ ಇಳಿಬಿದ್ದಿದೆ punishment hangs over him ಅವನಿಗೆ ಶಿಕ್ಷೆ ಕಾದಿದೆ. sword hangs over him ಅವನ ತಲೆಯ ಮೇಲೆ ಕತ್ತಿ ತೂಗಿದೆ; ಅವನಿಗೆ ತಲೆ ಹೋಗುವ ಸಂಭವವಿದೆ.
ನುಡಿಗಟ್ಟು
  1. hang about ಅಲೆದಾಡು; ಸುಳಿದಾಡು; ಠಳಾಯಿಸು: men hanging about at street corners for the theatres to open ಚಿತ್ರ (ನಾಟಕ) ಮಂದಿರಗಳು ತೆರೆಯಲೆಂದು ಬೀದಿಮೂಲೆಗಳಲ್ಲಿ ಸುಳಿದಾಡುತ್ತಿದ್ದ ಜನ.
  2. hang back (ಕೆಲಸ ಕೈಗೊಳ್ಳಲು ಯಾ ಚಲಿಸಲು) ಹಿಂಜರಿ; ಇಚ್ಛೆಪಡದಿರು; ಹಿಂದೇಟು ಹಾಕು; ಹಿಂದುಮುಂದು ನೋಡು: when the officer asked for volunteers,not a single man hung back ಅಧಿಕಾರಿಯು ಸ್ವಯಂಸೇವಕರು ಬೇಕೆಂದು ಕೇಳಿದಾಗ ಒಬಬ ಮನುಷ್ಯನೂ ಹಿಂದೇಟು ಹಾಕಲಿಲ್ಲ.
  3. hang behind ಹಿಂದೆ ಬೀಳು.
  4. hang fire:
    1. (ಬಂದೂಕು) ಹಾರುವುದು ಸಾವಕಾಶವಾಗು, ತಡವಾಗು.
    2. (ರೂಪಕವಾಗಿ) ನಿಧಾನವಾಗು; ಸಾವಕಾಶವಾಗು; ತಡವಾಗು: the new project is hanging fire because of strong opposition ಪ್ರಬಲ ವಿರೋಧದ ಪರಿಣಾಮವಾಗಿ ಹೊಸ ಯೋಜನೆ ನಿಧಾನವಾಗಿದೆ.
  5. hang heavily (or heavy) (ಹೊತ್ತು, ಕಾಲ) ಹೋಗದಿರು; ಭಾರವಾಗು; ನಿಧಾನವಾಗಿ ಸಾಗು: do you ever find time hanging heavily on your hands? ನಿನಗೆ ಯಾವಾಗಲಾದರೂ ಕಾಲ ಕಳೆಯುವುದು ಕಷ್ಟವಾಗಿದೆಯೆ?
  6. hang in the balance ಅನಿಶ್ಚಿತವಾಗಿರು; ತೀರ್ಮಾನವಾಗದೆ ಇರು; ಸಂದೇಹದಲ್ಲಿರು; ಅತ್ತಇತ್ತ ತೂಗುತ್ತಿರು: the wounded man’s life hung in the balance ಗಾಯಗೊಂಡವನ ಜೀವ ಅತ್ತ ಇತ್ತ ತೂಗಾಡುತ್ತಿತ್ತು; ಗಾಯಗೊಂಡವನ ಪ್ರಾಣ ಹೀಗೋ ಹಾಗೋ ಅನ್ನುವಂತಿತ್ತು.
  7. hang off = ನುಡಿಗಟ್ಟು \((2)\).
  8. hang on:
    1. ನಂಬಿರು; ನೆಚ್ಚಿರು; ನೆಚ್ಚು; ನೆಚ್ಚಿಕೊಂಡಿರು; ಅವಲಂಬಿಸು.
    2. ಗಮನವಿಟ್ಟು ಕೇಳು; ಮನಸ್ಸು ಕೊಟ್ಟುಕೇಳು; ಆಸಕ್ತಿಯಿಂದ ಆಲಿಸು: hung on every word of his ಅವನ ಪ್ರತಿಯೊಂದು ಮಾತನ್ನು ಗಮನವಿಟ್ಟು ಕೇಳಿದ.
    3. ಬಿಗಿಯಾಗಿ ಅಂಟಿಕೊ; ಭದ್ರವಾಗಿ ಹಿಡಿದುಕೊ; ಗಟ್ಟಿಯಾಗಿ ಕಚ್ಚಿಕೊ: lawyers hung on to the courts ವಕೀಲರು ನ್ಯಾಯಾಲಯಗಳಿಗೆ ಬಿಗಿಯಾಗಿ ಅಂಟಿಕೊಂಡಿರು. hang on to the rope ಹಗ್ಗವನ್ನು ಭದ್ರವಾಗಿ ಹಿಡಿದುಕೊ.
    4. ಅಧಿಕಾರದ ಸ್ಥಾನಕ್ಕೆ ಕಚ್ಚಿಕೊಂಡಿರು; ಹುದ್ದೆಗೆ, ಪದವಿಗೆ ಅಂಟುಬೀಳು, ಜೊತುಬೀಳು; ಅಧಿಕಾರದಲ್ಲಿ ಉಳಿ.
    5. (ಕರ್ತವ್ಯ ಮೊದಲಾದವಕ್ಕೆ) ಅಂಟಿಕೊ; ಜೋತುಬೀಳು.
    6. (ಟೆಲಿಹೋನ್‍ ಮಾಡುವಾಗ) ಸಂಪರ್ಕ ಕಡಿಯದಿರು; ಹಾಗೆಯೇ ಹಿಡಿದುಕೋ, ಇಟ್ಟುಕೋ; ಮುಗಿಸದಿರು: hang on a minute ಒಂದು ನಿಮಿಷ ಹಾಗೆಯೇ ಹಿಡಿದುಕೊ, ಸಂಪರ್ಕ ಕಡಿಯಬೇಡ.
    7. (ಅಶಿಷ್ಟ) (ಯಾವುದಕ್ಕಾದರೂ ಒಂದನ್ನು) ದೂರು; ಶಪಿಸು; ತಪ್ಪಿಗೆ ಗುರಿಮಾಡು.
  9. hang one on (ಅಶಿಷ್ಟ):
    1. (ಯಾರಿಗಾದರೂ) ಏಟು ಕೊಡು; ಹೊಡೆ: he hung one on the ruffian and knocked him down ಅವನು ಆ ತಂಟೆಖೋರನಿಗೆ ಒಂದು ಬಿಗಿದು ಉರುಳಿಸಿದನು.
    2. ಅತಿಯಾಗಿ ಕುಡಿದು ಅಮಲೇರು: every pay-day he hangs one on ಪ್ರತಿ ಸಂಬಳದ ದಿನವೂ ಅವನು ಅತಿಯಾಗಿ ಕುಡಿಯುತ್ತಾನೆ.
  10. hang on to (ಆಡುಮಾತು) (ಅಧಿಕಾರ ಮೊದಲಾದವನ್ನು) ಪಟ್ಟಾಗಿ ಹಿಡಿದುಕೊಂಡಿರು; ಬಿಡದಿರು; ಉಳಿಸಿಕೊಂಡಿರು.
  11. hang out:
    1. (ಕಿಟಕಿ, ಹಗ್ಗ, ಮೊದಲಾದವುಗಳಿಂದ) ತೂಗಕಟ್ಟು; ತೂಗಹಾಕು; ತೂಗಬಿಡು: when she was hanging out the clothes ಆಕೆ ಬಟ್ಟೆಗಳನ್ನು ತೂಗಹಾಕುತ್ತಿರುವಾಗ.
    2. ಕೆಳಕ್ಕೆ ಚಾಚಿರು ಯಾ ಚಾಚುವಂತೆ ಮಾಡು: the canine teeth hang out very long ಕೋರೆಹಲ್ಲುಗಳು ಬಹಳ ಉದ್ದವಾಗಿ ಕೆಳಕ್ಕೆ ಚಾಚಿರುತ್ತವೆ.
    3. (ಅಶಿಷ್ಟ) ವಾಸಿಸು; ತಂಗು; ಬಿಡಾರಮಾಡು: where are you hanging out now ಈಗ ನೀನು ಎಲ್ಲಿ ತಂಗಿದ್ದೀಯೆ?
  12. hang together:
    1. ಹೊಂದಿಕೊಂಡಿರು; ಸುಸಂಗತವಾಗಿರು; ಸುಬದ್ಧವಾಗಿರು: how can these two stories hang together? ಈ ಎರಡು ಕಥೆಗಳು ಹೇಗೆ ಹೊಂದಿಕೊಳ್ಳಬಲ್ಲವು?
    2. ಒಟ್ಟಿಗಿರು; ಕೂಡಿಕೊಂಡಿರು; ಒಗ್ಗಟ್ಟಾಗಿರು: we must all hang together in this matter ನಾವೆಲ್ಲಾ ಈ ವಿಷಯದಲ್ಲಿ ಒಗ್ಗಟ್ಟಾಗಿರಬೇಕು.
  13. hang up:
    1. ತಳ್ಳಿಡು; ಬದಿಗಿಡು; ಅನಿರ್ದಿಷ್ಟಕಾಲ ಮುಂದಕ್ಕೆ ಹಾಕು: the plan has been hung up ಆ ಯೋಜನೆ ಅನಿರ್ದಿಷ್ಟಕಾಲ ಮುಂದೆ ಹಾಕಲ್ಪಟ್ಟಿದೆ.
    2. (ಕೊಕ್ಕೆ ಮೊದಲಾದವುಗಳಿಂದ) ಜೋತು ಬಿದ್ದಿರು; ತೂಗುಬಿದ್ದಿರು.
    3. (ದೂರವಾಣಿಯ) ಸಂಭಾಷಣೆಯನ್ನು ಮುಗಿಸು; ಸಂಭಾಷಣೆ ಮುಗಿದ ಮೇಲೆ ರಿಸೀವರನ್ನು ಅದರ ಸ್ಥಾನದಲ್ಲಿರಿಸು.
    4. ತಡವಾಗುವಂತೆ ಮಾಡು; ನಿಧಾನಗೊಳಿಸು.
    5. ಅಡ್ಡಿಪಡಿಸು; ತೊಂದರೆಯುಂಟುಮಾಡು.
    6. (ಅಶಿಷ್ಟ) (ಯಾವುದೇ ಒಂದರ ವಿಷಯದಲ್ಲಿ) ಗೀಳು ಹುಟ್ಟಿಸು; ಭ್ರಾಂತಿ ಹತ್ತಿಸು; ಗಿಲಿ ಹಿಡಿಸು.
See also 1hang
2hang ಹ್ಯಾಂಗ್‍
ನಾಮವಾಚಕ
  1. ಜೋಲು; (ಕೆಳ) ಓಲುವೆ, ಬಾಗು.
  2. ಜೋಲಿಕೆ; ಜೋಲಿರುವ, ಓಲಿರುವ, ಬಾಗಿರುವ, ತೂಗಬಿದ್ದಿರುವ – ರೀತಿ.
ನುಡಿಗಟ್ಟು
  1. do not care a hang ಸ್ವಲ್ಪವೂ ಲಕ್ಷ್ಯ ಮಾಡುವುದಿಲ್ಲ; ಸುತರಾಂ ಲೆಕ್ಕಿಸುವುದಿಲ್ಲ; ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ: she doesn’t care a hang what anybody says of her ಅವಳ ಬಗ್ಗೆ ಯಾರಾದರೂ ಏನು ಹೇಳುತ್ತಾರೆಂದು ಅವಳು ಸ್ವಲ್ಪವೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.
  2. get the hang of:
    1. ಪ್ರಯೋಗದ ರೀತಿ ತಿಳಿ; ಚಳಕ ಕಲಿ; ಕೌಶಲ ಪಡೆದುಕೊ; ನಿಪುಣತೆ ಗಳಿಸು; ಯಾವುದೇ ಉಪಕರಣವನ್ನು ಉಪಯೋಗಿಸುವ ರೀತಿಯನ್ನು ಕಲಿ: took some time to get the hang of driving the tractor ಟ್ರ್ಯಾಕ್ಟರನ್ನು ನಡೆಸುವ ರೀತಿಯನ್ನು ಕಲಿತುಕೊಳ್ಳಲು ಸ್ವಲ್ಪಕಾಲ ಹಿಡಿಯಿತು.
    2. ಅರ್ಥ ಮಾಡಿಕೊ; ಗ್ರಹಿಸು; ತಿಳಿದುಕೊ; ಅರಿತುಕೊ: can’t get the hang of the lecture ಆ ಉಪನ್ಯಾಸವನ್ನು ಅರ್ಥಮಾಡಿಕೊಳ್ಳಲಾರೆ.