See also 2hammer
1hammer ಹ್ಯಾಮರ್‍
ನಾಮವಾಚಕ
  1. (ಬಡಿಯುವುದು, ಒಡೆಯುವುದು, ಮೊಳೆಯನ್ನು ನಾಟಿಸುವುದು, ಮೊದಲಾದವಗಳಿಗಾಗಿ ಬಳಸುವ) ಸುತ್ತಿಗೆ; ಬಡಿಗೆ; ಕೊಡತಿ. Figure: hammers1
  2. (ಇದೇ ರೀತಿ ಕೆಲಸ ಮಾಡುವ ಲೋಹದ ದಿಮ್ಮಿಯುಳ್ಳ) ಬಡಿಯಂತ್ರ; ಯಾಂತ್ರಿಕ ಸುತ್ತಿಗೆ.
  3. ಬಂದೂಕು – ಕುದುರೆ, ಚಾಪು; ಬಂದೂಕಿನಲ್ಲಿ ಮದ್ದು ಹಾರಿಸುವ ಸುತ್ತಿಗೆಯಂಥ ಸಾಧನ.
  4. (ಪಿಯಾನೋ ಮೊದಲಾದ ವಾದ್ಯಗಳಲ್ಲಿ) ತಂತಿ ಬಡಿಗೆ; ಸ್ಫಾಲಕ; ತಂತಿ ಮಿಡಿಯುವ ಸುತ್ತಿಗೆಯಂಥ ಸಲಕರಣೆ.
  5. (ಮಾಲು ಬಿಕರಿ ಆಗಿಹೋಯಿತೆಂದು ಸೂಚಿಸಲು ಹರಾಜುದಾರ ಯಾ ಏಲಂದಾರನು ಬಡಿಯುವ) ಹರಾಜುದಾರನ ಕೊಡತಿ.
  6. (ಅಂಗರಚನಾಶಾಸ್ತ್ರ) ನಡುಕಿವಿಯ (ಮ್ಯಾಲಿಯಸ್‍) ಮೂಳೆ.
  7. ಬೀಸುಗುಂಡು; (‘ತ್ರೋಯಿಂಗ್‍ ದಿ ಬಾಲ್‍’ ಆಟದಲ್ಲಿ ಬಳಸುವ), ಸುಮಾರು7 ಕೆ.ಜಿತೂಕದ, ತಂತಿಯೊಂದಕ್ಕೆ ತಗುಲಿಸಿದ ಲೋಹದ ಚೆಂಡು, ಗುಂಡು. Figure: hammer-7
ಪದಗುಚ್ಛ
  1. hammer and sickle ಕೊಡತಿ ಮತ್ತು ಕುಡುಗೋಲು:
    1. ಕಾರ್ಮಿಕ ಹಾಗೂ ರೈತನನ್ನು ಪ್ರತಿನಿಧಿಸುವ ಸಂಕೇತ.
    2. ಸೋವಿಯಟ್‍ ರಷ್ಯದ ರಾಷ್ಟ್ರೀಯ ದ್ವಜದ ಮೇಲಿರುವ ಚಿಹ್ನೆ.
    3. ಅಂತರರಾಷ್ಟೀಯ ಸಾಮ್ಯವಾದದ ಸಂಕೇತ.
  2. knight of the hammer ಕಮ್ಮಾರ.
  3. throwing the hammer ಸುತ್ತಿಗೆ ಎಸೆತ; ಕೊಡತಿ ಎಸೆತ; ತಂತಿಗೆ ತಗುಲಿಸಿದ ಸುಮಾರು 7 ಕೆಜಿತೂಕದ ಲೋಹದ ಗುಂಡನ್ನು ಎಸೆಯುವ ವ್ಯಾಯಾಮ ಸ್ಪರ್ಧೆ.
ನುಡಿಗಟ್ಟು
  1. come under the hammer ಹರಾಜಿಗೆ ಬರು; ಹರಾಜಿನಲ್ಲಿ ಮಾರಾಟವಾಗು.
  2. hammer and tongs (ಆರ್ಭಟಪೂರ್ವಕವಾಗಿ) ಶಕ್ತಿಯನ್ನೆಲ್ಲ ಉಪಯೋಗಿಸಿ; ಬಲವಾಗಿ: to go at it hammer and tongs ಎಲ್ಲ ಶಕ್ತಿಯನ್ನು ಉಪಯೋಗಿಸಿ ಯಾವುದೇ ಕೆಲಸದಲ್ಲಿ ತೊಡಗು.
See also 1hammer
2hammer ಹ್ಯಾಮರ್‍
ಸಕರ್ಮಕ ಕ್ರಿಯಾಪದ
  1. (ಸುತ್ತಿಗೆಯಿಂದ ಯಾ ಅದರಿಂದ ಹೇಗೋ ಹಾಗೆ) ಬಡಿ; ನಾಟಿಸು; ಒಳಹೊಗಿಸು.
  2. (ಆಡುಮಾತು) (ಯುದ್ಧ, ಆಟ, ಮೊದಲಾದವಗಳಲ್ಲಿ) ಬಡಿದು ಹಾಕು; ಚಚ್ಚಿ ಬಿಡು; ಸಂಪೂರ್ಣವಾಗಿ ಸೋಲುವಂತೆ ಹೊಡೆ.
  3. (ಸ್ಟಾಕ್‍ ಎಕ್ಸ್‍ಚೇಂಜ್‍ನಲ್ಲಿ) ಒಬಬ್ಬ ಸದಸ್ಯನು ಬಾಕಿ ತೀರಿಸಲು ತಪ್ಪಿದವನೆಂದು (ಕೊಡತಿಯಿಂದ ಮೂರು ಸಲ ಕುಟ್ಟಿ) ಘೋಷಿಸು.
  4. (ಸ್ಟಾಕ್‍ ಎಕ್ಸೆಚೇಂಜ್‍ನಲ್ಲಿ) ಷೇರುಬೆಲೆಯನ್ನು ಕೆಳಕ್ಕೆ ತಳ್ಳು, ಇಳಿಸು, ಉರುಳಿಸು.
  5. (ಹಳೆಯ ಭಿನ್ನಾಭಿಪ್ರಾಯಗಳು, ವಿವಾದಗಳು, ಮೊದಲಾದವನ್ನು) ನಿವಾರಿಸಿಕೊ; ಸರಿಹೊಂದಿಸು; ಬಗೆಹರಿಸು: they hammed out their differences over a glass of beer ಒಂದು ಗ್ಲಾಸ್‍ ಬಿಯರು ಕುಡಿಯುತ್ತಾ ಅವರು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡರು.
  6. (ಲೋಹಕ್ಕೆ) ಬಡಿದು ಆಕಾರ – ಕೊಡು, ರೂಪ ಕೊಡು.
ಅಕರ್ಮಕ ಕ್ರಿಯಾಪದ
  1. (ಸುತ್ತಿಗೆಯಲ್ಲಿ ಬಡಿದಂತೆ) ಬಡಿ; ಕುಟ್ಟು: hammer at the door ಕೋಲಿನಿಂದ ಯಾ ಮುಷ್ಠಿಯಿಂದ ಬಾಗಿಲು ಬಡಿ. hammer at the keys (ಪಿಯಾನೋದ) ಕೀಲಿಗಳನ್ನು ಕುಟ್ಟು; ಪಿಯಾನೋವನ್ನು ಗಟ್ಟಿಯಾಗಿ, ಭಾವಶೂನ್ಯವಾಗಿ ನುಡಿಸು.
  2. (ರೂಪಕವಾಗಿ) (ಯಾವುದನ್ನೇ ಪೂರ್ಣಗೊಳಿಸಲು) ಹೆಣಗು; ಪ್ರಯಾಸಪಡು; ಬಹುಕಷ್ಟದಿಂದ ದುಡಿ, ಶ್ರಮಿಸು: he hammed away at his speech for hours ಅವನು ತನ್ನ ಭಾಷಣಕ್ಕೆ ಒಂದು ರೂಪ ಕೊಡಲು ಗಂಟೆಗಟ್ಟಲೆ ಹೆಣಗಿದ.
  3. (ರೂಪಕವಾಗಿ) ಪುನಃ ಪುನಃ, ಮತ್ತೆ ಮತ್ತೆ – ಒತ್ತಿ ಹೇಳು; ಹೇಳಿದ್ದೇ ಹೇಳು: the teacher hammed away at the multiplication table ಮೇಷ್ಟರು ಮಗ್ಗಿ ಕೋಷ್ಟಕವನ್ನು ಮತ್ತೆ ಮತ್ತೆ ಹೇಳಿದರು.
ಪದಗುಚ್ಛ
  1. hammer idea into (person’s) head ಯಾವುದೇ ಭಾವನೆಯನ್ನು ಒಬ್ಬನ ತಲೆಗೆ ನಾಟಿಸು, ಇಳಿಸು; ಒತ್ತಿ ಒತ್ತಿ ಹೇಳಿ ತಲೆಗೆ ತುರುಕು.
  2. hammer out (ಉಪಾಯ, ಹಂಚಿಕೆ, ಮೊದಲಾದವನ್ನು) ಕಷ್ಟಪಟ್ಟು ಯೋಜಿಸು; ಶ್ರಮವಹಿಸಿ ಕಲ್ಪಿಸು; ಹೆಣಗಿ ರೂಪಿಸು.