1hammer
ನಾಮವಾಚಕ
- (ಬಡಿಯುವುದು, ಒಡೆಯುವುದು, ಮೊಳೆಯನ್ನು ನಾಟಿಸುವುದು, ಮೊದಲಾದವಗಳಿಗಾಗಿ ಬಳಸುವ) ಸುತ್ತಿಗೆ; ಬಡಿಗೆ; ಕೊಡತಿ.
- (ಇದೇ ರೀತಿ ಕೆಲಸ ಮಾಡುವ ಲೋಹದ ದಿಮ್ಮಿಯುಳ್ಳ) ಬಡಿಯಂತ್ರ; ಯಾಂತ್ರಿಕ ಸುತ್ತಿಗೆ.
- ಬಂದೂಕು – ಕುದುರೆ, ಚಾಪು; ಬಂದೂಕಿನಲ್ಲಿ ಮದ್ದು ಹಾರಿಸುವ ಸುತ್ತಿಗೆಯಂಥ ಸಾಧನ.
- (ಪಿಯಾನೋ ಮೊದಲಾದ ವಾದ್ಯಗಳಲ್ಲಿ) ತಂತಿ ಬಡಿಗೆ; ಸ್ಫಾಲಕ; ತಂತಿ ಮಿಡಿಯುವ ಸುತ್ತಿಗೆಯಂಥ ಸಲಕರಣೆ.
- (ಮಾಲು ಬಿಕರಿ ಆಗಿಹೋಯಿತೆಂದು ಸೂಚಿಸಲು ಹರಾಜುದಾರ ಯಾ ಏಲಂದಾರನು ಬಡಿಯುವ) ಹರಾಜುದಾರನ ಕೊಡತಿ.
- (ಅಂಗರಚನಾಶಾಸ್ತ್ರ) ನಡುಕಿವಿಯ (ಮ್ಯಾಲಿಯಸ್) ಮೂಳೆ.
- ಬೀಸುಗುಂಡು; (‘ತ್ರೋಯಿಂಗ್ ದಿ ಬಾಲ್’ ಆಟದಲ್ಲಿ ಬಳಸುವ), ಸುಮಾರು7 ಕೆ.ಜಿತೂಕದ, ತಂತಿಯೊಂದಕ್ಕೆ ತಗುಲಿಸಿದ ಲೋಹದ ಚೆಂಡು, ಗುಂಡು.
ಪದಗುಚ್ಛ
- hammer and sickle ಕೊಡತಿ ಮತ್ತು ಕುಡುಗೋಲು:
- ಕಾರ್ಮಿಕ ಹಾಗೂ ರೈತನನ್ನು ಪ್ರತಿನಿಧಿಸುವ ಸಂಕೇತ.
- ಸೋವಿಯಟ್ ರಷ್ಯದ ರಾಷ್ಟ್ರೀಯ ದ್ವಜದ ಮೇಲಿರುವ ಚಿಹ್ನೆ.
- ಅಂತರರಾಷ್ಟೀಯ ಸಾಮ್ಯವಾದದ ಸಂಕೇತ.
- knight of the hammer ಕಮ್ಮಾರ.
- throwing the hammer ಸುತ್ತಿಗೆ ಎಸೆತ; ಕೊಡತಿ ಎಸೆತ; ತಂತಿಗೆ ತಗುಲಿಸಿದ ಸುಮಾರು 7 ಕೆಜಿತೂಕದ ಲೋಹದ ಗುಂಡನ್ನು ಎಸೆಯುವ ವ್ಯಾಯಾಮ ಸ್ಪರ್ಧೆ.
ನುಡಿಗಟ್ಟು
- come under the hammer ಹರಾಜಿಗೆ ಬರು; ಹರಾಜಿನಲ್ಲಿ ಮಾರಾಟವಾಗು.
- hammer and tongs (ಆರ್ಭಟಪೂರ್ವಕವಾಗಿ) ಶಕ್ತಿಯನ್ನೆಲ್ಲ ಉಪಯೋಗಿಸಿ; ಬಲವಾಗಿ: to go at it hammer and tongs ಎಲ್ಲ ಶಕ್ತಿಯನ್ನು ಉಪಯೋಗಿಸಿ ಯಾವುದೇ ಕೆಲಸದಲ್ಲಿ ತೊಡಗು.