See also 2halt  3halt  4halt  5halt  6halt
1halt ಹಾಲ್ಟ್‍
ನಾಮವಾಚಕ
  1. (ನಡಗೆಯಲ್ಲಿ ಯಾ ಪ್ರಯಾಣದಲ್ಲಿ) ಸ್ವಲ್ಪ ಕಾಲ ನಿಲ್ಲುವುದು, ತಂಗುವುದು.
  2. (ಚಲನೆಯ, ಪ್ರಗತಿಯ) ತಾತ್ಕಾಲಿಕ ಯಾ ಪೂರ್ಣ ನಿಲುಗಡೆ, ಸ್ತಂಭನ, ತಡೆ: the train came to a halt ರೈಲು ನಿಂತಿತು.
  3. (ಬ್ರಿಟಿಷ್‍ ಪ್ರಯೋಗ) (ಸ್ಟೇಷನ್‍ ಕಟ್ಟಡ ಮೊದಲಾದವುಗಳಿಲ್ಲದ, ಸ್ಥಳೀಯ ರೈಲುಗಳು ಮಾತ್ರ ನಿಲ್ಲುವ) ರೈಲು – ನಿಲ್ಲುವ, ನಿಲ್ಲೆಡೆ.
ಪದಗುಚ್ಛ
  1. call a halt to:
    1. ಸ್ವಲ್ಪಕಾಲ ನಿಲ್ಲಿಸು, ತಡೆಹಿಡಿ.
    2. (ರೂಪಕವಾಗಿ) (ಮುಂದುವರಿಕೆಯನ್ನು) ಕೊನೆಗೊಳಿಸು; ನಿಲ್ಲಿಸು; ಮುಕ್ತಾಯ ಮಾಡು; ಅಂತ್ಯಗೊಳಿಸು: cry a halt to vandalism ಗೂಂಡಾಗಿರಿಯನ್ನು ಅಂತ್ಯಗೊಳಿಸು.
  2. come to a halt ತಾತ್ಕಾಲಿಕವಾಗಿ ಯಾ ಪೂರ್ಣವಾಗಿ ನಿಲ್ಲು, ನಿಲುಗಡೆಗೆ ಬರು.
  3. grind to a halt ನಿಧಾನವಾಗಿ, ತ್ರಾಸದಿಂದ ನಿಲುಗಡೆಗೆ ಬರು.
See also 1halt  3halt  4halt  5halt  6halt
2halt ಹಾಲ್ಟ್‍
ಸಕರ್ಮಕ ಕ್ರಿಯಾಪದ

(ಪಡೆಗಳು ಮೊದಲಾದವನ್ನು ನಡಗೆಯಲ್ಲಿ ಯಾ ಪ್ರಯಾಣದಲ್ಲಿ ಸ್ವಲ್ಪ) ನಿಲ್ಲಿಸು; ತಂಗಿಸು.

ಅಕರ್ಮಕ ಕ್ರಿಯಾಪದ

(ನಡಗೆಯಲ್ಲಿ ಯಾ ಪ್ರಯಾಣದಲ್ಲಿ ಸ್ವಲ್ಪ) ನಿಲ್ಲು.

See also 1halt  2halt  4halt  5halt  6halt
3halt ಹಾಲ್ಟ್‍
ಭಾವಸೂಚಕ ಅವ್ಯಯ

ನಿಲ್ಲು! (ಚಲಿಸುತಿರುವ ಪಡೆಗಳನ್ನು ಯಾ ಓಡಿಹೋಗುತ್ತಿರುವ ವ್ಯಕ್ತಿಗಳನ್ನು ನಿಲ್ಲುವಂತೆ ಹೇಳುವ ಆಜ್ಞಾಪದ).

See also 1halt  2halt  3halt  5halt  6halt
4halt ಹಾಲ್ಟ್‍
ಗುಣವಾಚಕ

(ಪ್ರಾಚೀನ ಪ್ರಯೋಗ) ಕುಂಟುಕುಂಟಾದ; ಕುಂಟುತ್ತಿರುವ (ರೂಪಕವಾಗಿ ಸಹ).

See also 1halt  2halt  3halt  4halt  6halt
5halt ಹಾಲ್ಟ್‍
ಅಕರ್ಮಕ ಕ್ರಿಯಾಪದ
  1. ಹಿಂದುಮುಂದು ನೋಡುತ್ತ ನಡೆ; ಅನುಮಾನಿಸುತ್ತ ಕಾಲು ಹಾಕು.
  2. ಹಿಂದು ಮುಂದು ನೋಡು; ಅನುಮಾನಿಸು: halt between two opinions ಎರಡು ಅಭಿಪ್ರಾಯಗಳ ನಡುವೆ ಸಿಕ್ಕಿ ಹಿಂದುಮುಂದು ನೋಡುತ್ತಿರು.
  3. (ವಾದ, ಪದ್ಯ, ಶ್ಲೋಕ, ಮೊದಲಾದವುಗಳ ವಿಷಯದಲ್ಲಿ) (ಮುಖ್ಯವಾಗಿ ವರ್ತಮಾನ ಕೃದಂತರೂಪದಲ್ಲಿ) ಕುಂಟುತ್ತಿರು; ತಡೆದು ತಡೆದು ಸಾಗು; ಸುಲಭವಾಗಿ – ಓಡದಿರು, ಹರಿಯದಿರು.
  4. (ಪ್ರಾಚೀನ ಪ್ರಯೋಗ) ಕುಂಟಾಗಿರು.
See also 1halt  2halt  3halt  4halt  5halt
6halt ಹಾಲ್ಟ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ಕುಂಟುವಿಕೆ; ಕುಂಟುತನ; ಪಂಗುತ್ವ.