See also 2halt  3halt  4halt  5halt  6halt
1halt ಹಾಲ್ಟ್‍
ನಾಮವಾಚಕ
  1. (ನಡಗೆಯಲ್ಲಿ ಯಾ ಪ್ರಯಾಣದಲ್ಲಿ) ಸ್ವಲ್ಪ ಕಾಲ ನಿಲ್ಲುವುದು, ತಂಗುವುದು.
  2. (ಚಲನೆಯ, ಪ್ರಗತಿಯ) ತಾತ್ಕಾಲಿಕ ಯಾ ಪೂರ್ಣ ನಿಲುಗಡೆ, ಸ್ತಂಭನ, ತಡೆ: the train came to a halt ರೈಲು ನಿಂತಿತು.
  3. (ಬ್ರಿಟಿಷ್‍ ಪ್ರಯೋಗ) (ಸ್ಟೇಷನ್‍ ಕಟ್ಟಡ ಮೊದಲಾದವುಗಳಿಲ್ಲದ, ಸ್ಥಳೀಯ ರೈಲುಗಳು ಮಾತ್ರ ನಿಲ್ಲುವ) ರೈಲು – ನಿಲ್ಲುವ, ನಿಲ್ಲೆಡೆ.
ಪದಗುಚ್ಛ
  1. call a halt to:
    1. ಸ್ವಲ್ಪಕಾಲ ನಿಲ್ಲಿಸು, ತಡೆಹಿಡಿ.
    2. (ರೂಪಕವಾಗಿ) (ಮುಂದುವರಿಕೆಯನ್ನು) ಕೊನೆಗೊಳಿಸು; ನಿಲ್ಲಿಸು; ಮುಕ್ತಾಯ ಮಾಡು; ಅಂತ್ಯಗೊಳಿಸು: cry a halt to vandalism ಗೂಂಡಾಗಿರಿಯನ್ನು ಅಂತ್ಯಗೊಳಿಸು.
  2. come to a halt ತಾತ್ಕಾಲಿಕವಾಗಿ ಯಾ ಪೂರ್ಣವಾಗಿ ನಿಲ್ಲು, ನಿಲುಗಡೆಗೆ ಬರು.
  3. grind to a halt ನಿಧಾನವಾಗಿ, ತ್ರಾಸದಿಂದ ನಿಲುಗಡೆಗೆ ಬರು.