See also 2halo
1halo ಹೇಲೋ
ನಾಮವಾಚಕ
(ಬಹುವಚನ haloes).
  1. ಗುಡಿ; ಪರಿವೇಷ; ಪ್ರಭಾವಲಯ; ತೇಜೋಮಂಡಲ; ಪ್ರಭಾಮಯವಾದ ಒಂದು ಕಾಯದ (ಮುಖ್ಯವಾಗಿ ಸೂರ್ಯನ ಯಾ ಚಂದ್ರನ) ಸುತ್ತಲೂ ಕಾಣುವ ಬಿಳಿಯ ಯಾ ಬಣ್ಣದ ಬೆಳಕಿನ ವೃತ್ತ.
  2. ವೃತ್ತ; ಚಕ್ರ; ವಲಯ; ಮಂಡಲ.
  3. ಸಾಧುಸಂತರ ಶಿರಸ್ಸಿನ ಸುತ್ತಲೂ ಹರಡಿರುವ ಪ್ರಭಾವಲಯತೇಜೋಮಂಡಲ.
  4. (ರೂಪಕವಾಗಿ) (ಆದರ್ಶೀಕರಿಸಿದ ವ್ಯಕ್ತಿ ಮೊದಲಾದವರ ಸುತ್ತಲಿನ) ತೇಜಸ್ಸು; ಪ್ರಭೆ; ಕಾಂತಿ; ಪ್ರಕಾಶ.
See also 1halo
2halo ಹೇಲೋ
ಸಕರ್ಮಕ ಕ್ರಿಯಾಪದ

(ಸುತ್ತಲೂ) ಗುಡಿ ಕಟ್ಟು; ಪರಿವೇಷ, ತೇಜೋಮಂಡಲ – ರಚಿಸು.