See also 2hall-mark
1hall-mark ಹಾಲ್‍ಮಾರ್ಕ್‍
ನಾಮವಾಚಕ
  1. ಪ್ರಮಾಣಕ ಮುದ್ರೆ; ಚೊಕ್ಕಮುದ್ರೆ; ಇಂಗ್ಲೆಂಡಿನಲ್ಲಿ ಅಕ್ಕಸಾಲಿಗರ ಸಂಸ್ಥೆಯವರೂ ಸರ್ಕಾರದ ಲೋಹ ಪರೀಕ್ಷಣ ಕಚೇರಿಯವರೂ ಚಿನ್ನ, ಬೆಳ್ಳಿ, ಪ್ಲಾಟಿನಮ್‍ಗಳ ಚೊಕ್ಕತನವನ್ನು ನಿಗದಿಮಾಡಿ ಹಾಕುವ ಠಸ್ಸೆ, ಮುದ್ರೆ, ವೈಶಿಷ್ಟ್ಯ ಚಿಹ್ನೆ; ಚೊಕ್ಕತನದ, ಸಾಚಾತನದ — ಗುರುತು.
  2. (ರೂಪಕವಾಗಿ) ಸಾಚಾತನ, ಸದ್ವರ್ತನೆ, ಯಾ ಮೇಲ್ತನದ – ಕುರುಹು; ಉತ್ಕೃಷ್ಟತೆಯ ಲಾಂಛನ, ಚಿಹ್ನೆ, ಲಕ್ಷಣ.
See also 1hall-mark
2hall-mark ಹಾಲ್‍ಮಾರ್ಕ್‍
ಸಕರ್ಮಕ ಕ್ರಿಯಾಪದ

ಸಾಚಾತನದ ಯಾ ಪ್ರಮಾಣಕ – ಮುದ್ರೆಯನ್ನು ಹಾಕು; ಚೊಕ್ಕ ಮುದ್ರೆ ಒತ್ತು.