See also 2halcyon
1halcyon ಹ್ಯಾಲ್‍ಸಿಅನ್‍
ನಾಮವಾಚಕ
  1. ಹ್ಯಾಲ್ಸಿಯನ್‍; ಉತ್ತರಾಯಣ ಸಂಕ್ರಮಣ ದಿನಗಳಲ್ಲಿ ಸಮುದ್ರದ ಮೇಲೆ ತೇಲುವ ಗೂಡಿನಲ್ಲಿ ಮರಿ ಮಾಡುವುದೆಂದೂ, ಅದಕ್ಕಾಗಿ ಮಂತ್ರಶಕ್ತಿಯಿಂದ ಗಾಳಿ ಮತ್ತು ಅಲೆಗಳನ್ನು ಶಾಂತಗೊಳಿಸಬಲ್ಲದೆಂದೂ ಹಿಂದಿನವರು ಹೇಳುತ್ತಿದ್ದ ಒಂದು ಪಕ್ಷಿ.
  2. (ಜೀವವಿಜ್ಞಾನ) ಆಸ್ತ್ರೇಲಿಯದ ಮೀಂಚುಳ್ಳಿ, ಜಾಲಗಾರ ಹಕ್ಕಿ.
See also 1halcyon
2halcyon ಹ್ಯಾಲ್‍ಸಿಅನ್‍
ಗುಣವಾಚಕ

ಪ್ರಶಾಂತ; ಉಪಶಾಂತ; ಸಮಾಧಾನಕರವಾದ; ನಿರಾಕುಲ.

ಪದಗುಚ್ಛ

halcyon days

  1. ಪ್ರಶಾಂತಕಾಲ; (ಹಿಂದೆ) ಉತ್ತರಾಯಣದ ಆಚೆ ಈಚೆಯ 14 ದಿನಗಳು ಹ್ಯಾಲ್ಸಿಯನ್‍ ಪಕ್ಷಿ ಮರಿಮಾಡುತ್ತಿರುವ ಕಾಲದಲ್ಲಿ, ಸಮುದ್ರವೂ ಗಾಳಿಯೂ ಪ್ರಶಾಂತವಾಗಿರುವುದೆಂದು ನಂಬಲಾಗಿದ್ದ ಕಾಲ.
  2. ಸುಖದ, ಏಳಿಗೆಯ ಕಾಲ; ಸುಖಸಂತೋಷದ, ಉಚ್ಫ್ರಾಯದ ಕಾಲ.