See also 2hack  3hack  4hack  5hack  6hack
1hack ಹ್ಯಾಕ್‍
ನಾಮವಾಚಕ
  1. (ಒಂದು ಕೊನೆ ಎಲೆಗುದ್ದಲಿಯಂತೆಯೂ ಇನ್ನೊಂದು ಕೊನೆ ಮೊನಚಾಗಿಯೂ ಇರುವ) ವ್ಯವಸಾಯದ ಗುದ್ದಲಿ.
  2. (ಗಣಿಗಾರನ) ಪಿಕಾಸಿ.
  3. ಬೂಟಿನ ಮೂತಿಯಿಂದ ಕೊಟ್ಟ ಒದೆತ.
  4. (ಮುಖ್ಯವಾಗಿ ಬೂಟಿನ ಮೂತಿಯಿಂದ ಒದ್ದಾಗ ಆಗುವ) ಆಳವಾದ ಸೀಳುಗಾಯ.
See also 1hack  3hack  4hack  5hack  6hack
2hack ಹ್ಯಾಕ್‍
ಸಕರ್ಮಕ ಕ್ರಿಯಾಪದ
  1. ಕಡಿ; ತರಿ.
  2. ಕೊಚ್ಚು; ಕಚ್ಚುಕಚ್ಚು ಮಾಡು.
  3. ಒರಟೊರಟಾಗಿ, ಛಿನ್ನಭಿನ್ನವಾಗಿ, ವಿಕಾರವಾಗುವಂತೆ — ಕತ್ತರಿಸು: the editor hacked the story to bits ಸಂಪಾದಕನು ಕಥೆಯನ್ನು ಛಿನ್ನಭಿನ್ನವಾಗಿ ಕತ್ತರಿಸಿ ಹಾಕಿದ.
  4. ಬೂಟಿನ ಮೂತಿಯಿಂದ ಗಾಯವಾಗುವಂತೆ ಒದೆ.
  5. ಹುಟ್‍ಬಾಲ್‍ ಆಟದಲ್ಲಿ ಎದುರಾಳಿಯ ಕಣಕಾಲನ್ನು ಒದೆ.
ಅಕರ್ಮಕ ಕ್ರಿಯಾಪದ
  1. ಕತ್ತರಿಸುವಂತೆ ಏಟು ಹಾಕು, ಹೊಡೆ.
  2. ಒಣಕೆಮ್ಮಲು ಕೆಮ್ಮು; ಹುಡಿಗೆಮ್ಮು ಕೆಮ್ಮು.
ಪದಗುಚ್ಛ

a hacking cough (ಸ್ವಲ್ಪ ಹೊತ್ತು ಬಿಟ್ಟು ಪದೇಪದೇ ಬರುವ) ಒಣಕೆಮ್ಮಲು; ಹುಡುಗೆಮ್ಮು.

See also 1hack  2hack  4hack  5hack  6hack
3hack ಹ್ಯಾಕ್‍
ನಾಮವಾಚಕ
  1. ಡೇಗೆಗೆ ಮಾಂಸವಿಡಲು ಬಳಸುವ ಹಲಗೆ.
  2. ಒಣಗಲಿಟ್ಟ ಇಟ್ಟಿಗೆ ಸಾಲು.
  3. (ಸುಡುವುದಕ್ಕೆ ಮುಂಚೆ) ಇಟ್ಟಿಗೆಗಳನ್ನು ಒಣಗಲಿಡುವ ಚೌಕಟ್ಟು.
ಪದಗುಚ್ಛ

at hack (ಮರಿಡೇಗೆಯ ವಿಷಯದಲ್ಲಿ) ಸ್ವತಂತ್ರವಾಗಿ ಯಾ ತಾನೇ ಬೇಟೆಯಾಡಲು ಅವಕಾಶ ಪಡೆದಿರದ.

See also 1hack  2hack  3hack  5hack  6hack
4hack ಹ್ಯಾಕ್‍
ನಾಮವಾಚಕ
  1. ಬಾಡಿಗೆ ಕುದುರೆ.
  2. ಕಳಪೆ ಕುದುರೆ.
  3. ಸುಸ್ತುಬಿದ್ದ ಕುದುರೆ.
  4. (ಸಾಮಾನ್ಯ) ಸವಾರಿ – ಕುದುರೆ, ತಟ್ಟು.
  5. ದುಡಿತದ ಕತ್ತೆ.
  6. ಗುಲಾಮಚಾಕರಿ ಮಾಡುವವನು; ದುಡಿತದ ಲೇಖಕ ಯಾ ಕೆಲಸಗಾರ; ಸ್ಫೂರ್ತಿಯಿಲ್ಲದ ಲೇಖಕ ಯಾ ಇತರ ಕೆಲಸಗಾರ.
  7. (ಅಮೆರಿಕನ್‍ ಪ್ರಯೋಗ) ಬಾಡಿಗೆ ಕಾರು; ಟ್ಯಾಕ್ಸಿ.
See also 1hack  2hack  3hack  4hack  6hack
5hack ಹ್ಯಾಕ್‍
ಗುಣವಾಚಕ
  1. ದುಡಿತದ ಕತ್ತೆಯಂತೆ ಬಳಸುವ.
  2. ದುಡಿತದ ಬರಹಗಾರನ ರೀತಿಯ.
  3. ಕೇವಲ ಸಾಧಾರಣವಾದ; ಕಳಪೆಯ: hack work ಕಳಪೆ ಕೆಲಸ.
See also 1hack  2hack  3hack  4hack  5hack
6hack ಹ್ಯಾಕ್‍
ಸಕರ್ಮಕ ಕ್ರಿಯಾಪದ
  1. (ಪದೇಪದೇ ಬಳಸಿ) ಹಳಸಲು ಮಾಡು; ಸವಕಲು ಮಾಡು; ಸಾಮಾನ್ಯವಾಗಿಸು.
  2. ಬಾಡಿಗೆ ಕುದುರೆಸವಾರಿ ಮಾಡು.
  3. ಜೀತದ ಲೇಖಕನಾಗಿ ನೇಮಕ ಮಾಡು; (ಬರೆಹಗಾರನನ್ನು) ಕತ್ತೆಯಂತೆ ದುಡಿಸು.
ಅಕರ್ಮಕ ಕ್ರಿಯಾಪದ

(ಕುದುರೆ ಯಾ ಸವಾರನ ವಿಷಯದಲ್ಲಿ) ಸಾಧಾರಣ ನಡಗೆಯಲ್ಲಿ ನಡೆ; ಸಾಮಾನ್ಯ ಗತಿಯಲ್ಲಿ ಸವಾರಿ ಮಾಡು.