See also 2gybe
1gybe ಜೈಬ್‍
ಸಕರ್ಮಕ ಕ್ರಿಯಾಪದ

(ಹಡಗು ಗಾಳಿಯ ದಿಕ್ಕಿನಲ್ಲಿ ಓಡುತ್ತಿರುವಾಗ ಯಾ ಗಾಳಿ ಹಡಗನ್ನು ರಭಸವಾಗಿ ತಳ್ಳಿಕೊಂಡು ಹೋಗುತ್ತಿರುವಾಗ, ಹಾಯಿಯನ್ನು ಯಾ ಹಾಯಿದಿಮ್ಮಿಯನ್ನು) ಹಡಗಿನ ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ – ತೂಗು, ತೂಗಿ ಹೋಗುವಂತೆ ಮಾಡು, ತೂಗಿ ಬದಲಾಯಿಸು.

ಅಕರ್ಮಕ ಕ್ರಿಯಾಪದ
  1. (ಹಡಗನ್ನು ಗಾಳಿ ರಭಸದಿಂದ ತಳ್ಳಿಕೊಂಡು ಹೋಗುತ್ತಿರುವಾಗ, ಹಾಯಿ ಯಾ ಹಾಯಿದಿಮ್ಮಿ) ಹಡಗಿನ ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ – ತೂಗಿ ಹೋಗು, ತೂಗಿ ಬದಲಾಯಿಸು.
  2. (ಹಡಗು, ನಾವಿಕರು, ಮೊದಲಾದವುಗಳ ವಿಷಯದಲ್ಲಿ) ಗಾಳಿಯ ದಿಕ್ಕಿನಲ್ಲಿ ಹಡಗು ಓಡುತ್ತಿರುವಾಗ, ಹಾಯಿ ಯಾ ಹಾಯಿದಿಮ್ಮಿ ಹಡಗಿನ ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ತೂಗಿ ಹೋಗುವಂತೆ ಹಡಗಿನ – ಪಥ ಬದಲಾಯಿಸು, ದಿಕ್ಕು ತಿರುಗಿಸು.
See also 1gybe
2gybe ಜೈಬ್‍
ನಾಮವಾಚಕ

(ಹಡಗನ್ನು ಗಾಳಿ ರಭಸದಿಂದ ಒಯ್ಯುತ್ತಿರುವಾಗ ಅದರ ಹಾಯಿಯನ್ನು ಯಾ ಹಾಯಿದಿಮ್ಮಿಯನ್ನು) ಹಡಗಿನ ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ – ತೂಗಿಸುವುದು, ತೂಗಿ(ಕೊಂಡು) ಹೋಗುವಂತೆ ಮಾಡುವುದು, ತೂಗಿ ಬದಲಾಯಿಸುವುದು.