See also 2gut  3gut
1gut ಗಟ್‍
ನಾಮವಾಚಕ
  1. (ಬಹುವಚನದಲ್ಲಿ) (ಮುಖ್ಯವಾಗಿ ಪ್ರಾಣಿಗಳ) ಕರುಳು; ಅಂತ್ರ.
  2. (ಯಾವುದೇ ವಸ್ತುವಿನ) ಒಳಭಾಗ; ಅಂತರ್ಭಾಗ; ಒಳಗಿರುವುದು.
  3. ಕರುಳು; ಅಂತ್ರ; ಕೆಳ ಅನ್ನನಾಳದ ನಿರ್ದಿಷ್ಟ ಭಾಗ.
  4. (ಬಹುವಚನದಲ್ಲಿ) (ಅಸಂಸ್ಕೃತ) (ಹಸಿವಿನ ಸ್ಥಾನವಾದ) ಹೊಟ್ಟೆ: gave the man a poke in the guts ಆ ಮನುಷ್ಯನ ಹೊಟ್ಟೆ ತಿವಿದೆ.
  5. (ಬಹುವಚನದಲ್ಲಿ) (ಆಡುಮಾತು) ಕೆಚ್ಚು; ಧೈರ್ಯ; ಶೀಲಶಕ್ತಿ; ಚಾರಿತ್ರ್ಯಬಲ; ಸತ್ತ್ವ; ಧೃತಿ; ಸಹನ ಶಕ್ತಿ; ತಾಕತ್ತು; ದಾರ್ಢ್ಯ; ದಮ್ಮು: he alone has the guts to grapple with the enemy ಶತ್ರುವಿನೊಡನೆ ಮಲ್ಲಾಮಲ್ಲಿಯಾಗಿ ಹೋರಾಡುವ ಕೆಚ್ಚು ಅವನಿಗೆ ಮಾತ್ರ ಇದೆ.
  6. (ಪ್ರಾಣಿಗಳ ಕರುಳಿನಿಂದ ಮಾಡಿದ, ಪಿಟೀಲು ತಂತಿ, ಬ್ಯಾಟಿನ ಹುರಿ ಯಾ ಶಸ್ತ್ರಚಿಕಿತ್ಸೆಯಲ್ಲಿ ಹೊಲಿಯುವ ಹುರಿಗಾಗಿ ಬಳಸುವ) ಕರುಳು – ಹುರಿ, ನರ, ತಂತಿ, ತಂತು.
  7. (ರೇಷ್ಮೆಹುಳುಗಳ ಕರುಳಿನಿಂದ ಮಾಡಿದ) ಈನುಗಾಳದ ಹುರಿ.
  8. ಜಲಸಂಧಿ; ಜಲಕಂಠ; ಸಮುದ್ರ, ಸರೋವರ, ಮೊದಲಾದ ಎರಡು ಜಲರಾಶಿಗಳನ್ನು ಕೂಡಿಸುವ ಇಕ್ಕಟ್ಟಾದ ಜಲಮಾರ್ಗ.
  9. (ಆಕ್ಸ್‍ಹರ್ಡ್‍ ಮತ್ತು ಕೇಂಬ್ರಿಜ್‍ಗಳಲ್ಲಿ) ದೋಣಿಪಂದ್ಯ ಮಾರ್ಗದಲ್ಲಿ ನದಿಗಳ ತಿರುವು.
  10. ಕಣಿವೆ; ಇಕ್ಕಟ್ಟು ಹಾದಿ.
  11. (ಬೀದಿಯ) ಓಣಿ; ಕಿರುಸಂದಿ; ಚಿಕ್ಕ ಗಲ್ಲಿ.
ನುಡಿಗಟ್ಟು
  1. has no guts in it ಅದರಲ್ಲಿ ನಿಜವಾದ ತಿರುಳು ಯಾ ಸತ್ತ್ವ ಇಲ್ಲ; ಅದರಲ್ಲಿ ನಿಜವಾಗಿ ಬೆಲೆಬಾಳತಕ್ಕದ್ದು ಯಾವುದೂ ಇಲ್ಲ.
  2. hate person’s guts (ಆಡುಮಾತು) (ಒಬ್ಬನನ್ನು) ತೀವ್ರವಾಗಿ ದ್ವೇಷಿಸು.
  3. sweat (or work) one’s guts out (ಆಡುಮಾತು) ಬಹಳ ಶ್ರಮಿಸು; ಅತಿಯಾಗಿ ದುಡಿ, ಕೆಲಸಮಾಡು; ಬಹಳ ಬೆವರು ಸುರಿಸು.
See also 1gut  3gut
2gut ಗಟ್‍
ಗುಣವಾಚಕ
  1. ಮೂಲಭೂತವಾದ: a gut issue ಮೂಲಭೂತವಾದ ವಿಷಯ.
  2. ನೈಸರ್ಗಿಕವಾದ; ಸ್ವಾಭಾವಿಕವಾದ; ಪ್ರಕೃತಿಸಹಜವಾದ: a gut reaction ಪ್ರಕೃತಿಸಹಜವಾದ ಯಾ ಸ್ವಾಭಾವಿಕವಾದ ಪ್ರತಿಕ್ರಿಯೆ.
See also 1gut  2gut
3gut ಗಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ gutted, ವರ್ತಮಾನ ಕೃದಂತ gutting).
  1. (ಈನಿನ) ಕರುಳು ತೆಗೆ.
  2. (ಮುಖ್ಯವಾಗಿ ಬೆಂಕಿಯಿಂದ) (ಮನೆ ಮೊದಲಾದವುಗಳ) ಒಳಜೋಡಣೆಗಳನ್ನು ಕಿತ್ತುಹಾಕು, ತೆಗೆದುಹಾಕು, ನಾಶಮಾಡು: fire gutted the building ಬೆಂಕಿಯು ಕಟ್ಟಡದ ಒಳಭಾಗವನ್ನೆಲ್ಲಾ ನಾಶಮಾಡಿತು.
  3. (ಗ್ರಂಥ ಮೊದಲಾದವುಗಳ) ಸಾರ ಗ್ರಹಿಸು; ತಿರುಳು – ಹಿಡಿ, ತೆಗೆ: I am pleased when I see my books well gutted ನನ್ನ ಗ್ರಂಥಗಳ ಸಾರವತ್ತಾದ ಭಾಗಗಳ ಆಯ್ಕೆಯನ್ನು ನೋಡಿದಾಗ ನನಗೆ ಸಂತೋಷವಾಗುವುದು.