See also 2gut  3gut
1gut ಗಟ್‍
ನಾಮವಾಚಕ
  1. (ಬಹುವಚನದಲ್ಲಿ) (ಮುಖ್ಯವಾಗಿ ಪ್ರಾಣಿಗಳ) ಕರುಳು; ಅಂತ್ರ.
  2. (ಯಾವುದೇ ವಸ್ತುವಿನ) ಒಳಭಾಗ; ಅಂತರ್ಭಾಗ; ಒಳಗಿರುವುದು.
  3. ಕರುಳು; ಅಂತ್ರ; ಕೆಳ ಅನ್ನನಾಳದ ನಿರ್ದಿಷ್ಟ ಭಾಗ.
  4. (ಬಹುವಚನದಲ್ಲಿ) (ಅಸಂಸ್ಕೃತ) (ಹಸಿವಿನ ಸ್ಥಾನವಾದ) ಹೊಟ್ಟೆ: gave the man a poke in the guts ಆ ಮನುಷ್ಯನ ಹೊಟ್ಟೆ ತಿವಿದೆ.
  5. (ಬಹುವಚನದಲ್ಲಿ) (ಆಡುಮಾತು) ಕೆಚ್ಚು; ಧೈರ್ಯ; ಶೀಲಶಕ್ತಿ; ಚಾರಿತ್ರ್ಯಬಲ; ಸತ್ತ್ವ; ಧೃತಿ; ಸಹನ ಶಕ್ತಿ; ತಾಕತ್ತು; ದಾರ್ಢ್ಯ; ದಮ್ಮು: he alone has the guts to grapple with the enemy ಶತ್ರುವಿನೊಡನೆ ಮಲ್ಲಾಮಲ್ಲಿಯಾಗಿ ಹೋರಾಡುವ ಕೆಚ್ಚು ಅವನಿಗೆ ಮಾತ್ರ ಇದೆ.
  6. (ಪ್ರಾಣಿಗಳ ಕರುಳಿನಿಂದ ಮಾಡಿದ, ಪಿಟೀಲು ತಂತಿ, ಬ್ಯಾಟಿನ ಹುರಿ ಯಾ ಶಸ್ತ್ರಚಿಕಿತ್ಸೆಯಲ್ಲಿ ಹೊಲಿಯುವ ಹುರಿಗಾಗಿ ಬಳಸುವ) ಕರುಳು – ಹುರಿ, ನರ, ತಂತಿ, ತಂತು.
  7. (ರೇಷ್ಮೆಹುಳುಗಳ ಕರುಳಿನಿಂದ ಮಾಡಿದ) ಈನುಗಾಳದ ಹುರಿ.
  8. ಜಲಸಂಧಿ; ಜಲಕಂಠ; ಸಮುದ್ರ, ಸರೋವರ, ಮೊದಲಾದ ಎರಡು ಜಲರಾಶಿಗಳನ್ನು ಕೂಡಿಸುವ ಇಕ್ಕಟ್ಟಾದ ಜಲಮಾರ್ಗ.
  9. (ಆಕ್ಸ್‍ಹರ್ಡ್‍ ಮತ್ತು ಕೇಂಬ್ರಿಜ್‍ಗಳಲ್ಲಿ) ದೋಣಿಪಂದ್ಯ ಮಾರ್ಗದಲ್ಲಿ ನದಿಗಳ ತಿರುವು.
  10. ಕಣಿವೆ; ಇಕ್ಕಟ್ಟು ಹಾದಿ.
  11. (ಬೀದಿಯ) ಓಣಿ; ಕಿರುಸಂದಿ; ಚಿಕ್ಕ ಗಲ್ಲಿ.
ನುಡಿಗಟ್ಟು
  1. has no guts in it ಅದರಲ್ಲಿ ನಿಜವಾದ ತಿರುಳು ಯಾ ಸತ್ತ್ವ ಇಲ್ಲ; ಅದರಲ್ಲಿ ನಿಜವಾಗಿ ಬೆಲೆಬಾಳತಕ್ಕದ್ದು ಯಾವುದೂ ಇಲ್ಲ.
  2. hate person’s guts (ಆಡುಮಾತು) (ಒಬ್ಬನನ್ನು) ತೀವ್ರವಾಗಿ ದ್ವೇಷಿಸು.
  3. sweat (or work) one’s guts out (ಆಡುಮಾತು) ಬಹಳ ಶ್ರಮಿಸು; ಅತಿಯಾಗಿ ದುಡಿ, ಕೆಲಸಮಾಡು; ಬಹಳ ಬೆವರು ಸುರಿಸು.