See also 2gush
1gush ಗಷ್‍
ಸಕರ್ಮಕ ಕ್ರಿಯಾಪದ

(ನೀರನ್ನು) ಹಠಾತ್ತನೆ ಯಾ ಯಥೇಚ್ಛವಾಗಿ ಹರಿಸು, ಹೊರಡಿಸು, ಚಿಮ್ಮಿಸು, ಸುರಿಸು (ಮಾತು, ಅನುಕಂಪ, ಮೊದಲಾದವುಗಳ ವಿಷಯದಲ್ಲಿರೂಪಕವಾಗಿಸಹ): the broken pipe gushed a stream of water ಮುರಿದ ಕೊಳವೆ ನೀರಿನ ಹೊಳೆಯನ್ನು ಹರಿಸಿತು.

ಅಕರ್ಮಕ ಕ್ರಿಯಾಪದ
  1. (ಥಟ್ಟನೆ ಯಾ ತುಂಬು ಪ್ರವಾಹದಂತೆ) ನುಗ್ಗು; ಹರಿ; ಸುರಿ; ಚಿಮ್ಮು; ಹೊರಡು (ಅನೇಕ ವೇಳೆ ಭಾಷಣ, ಕರುಣೆ, ಪ್ರೀತಿ, ಮೊದಲಾದವುಗಳ ವಿಷಯದಲ್ಲಿರೂಪಕವಾಗಿ): the blood gushed from the wound ಗಾಯದಿಂದ ರಕ್ತ ಚಿಮ್ಮಿತು.
  2. ಉಕ್ಕಿ ಹರಿಯುವಂತೆ, ಭಾವಗದ್ಗದತೆಯ ಸೋಗಿನಿಂದ ಮಾತನಾಡು, ವರ್ತಿಸು: girls who gush over film stars ಸಿನಿಮಾ ನಟರ ಬಗ್ಗೆ ಉಕ್ಕಿ ಹರಿಯುವಂತೆ, ಅತ್ಯುತ್ಸಾಹದಿಂದ ಮಾತನಾಡುವ ಹುಡುಗಿಯರು.
See also 1gush
2gush ಗಷ್‍
ನಾಮವಾಚಕ
  1. ಪ್ರವಾಹ; ಸುರಿತ; ಹರಿವು; ಚಿಮ್ಮುಗೆ.
  2. (ದ್ರವದ) ಥಟ್ಟನೆಯ ಯಾ ಯಥೇಷ್ಟ – ವಿಸರ್ಜನೆ, ಹೊರಚೆಲ್ಲಿಕೆ.
  3. ಹಾಗೆ ವಿಸರ್ಜಿಸಲ್ಪಟ್ಟ ದ್ರವದ ಪರಿಣಾಮ.
  4. (ರೂಪಕವಾಗಿ) ಚಿಮ್ಮುಗೆ; ಥಟ್ಟನೆಯ ಹೊರಹೊಮ್ಮಿಕೆ.
  5. (ಆಡುಮಾತು) ಭಾವನೆಯ ಉಕ್ಕೇರಿಕೆ; ಭಾವೋದ್ವೇಗದ ಪ್ರದರ್ಶನ.