See also 2gun
1gun ಗನ್‍
ನಾಮವಾಚಕ
  1. ಗನ್ನು; ಬಂದೂಕು; ಕೋವಿ; ಮದ್ದು ಯಾ ಬೇರೆ ಸ್ಫೋಟಕದಿಂದ ಗುಂಡು ಮೊದಲಾದ ಕ್ಷಿಪಣಿಗಳನ್ನು ಹಾರಿಸುವ ಲೋಹ ಕೊಳವೆ.
  2. ಗನ್ನು; ಫಿರಂಗಿ;ತೋಪು; ಬಂದೂಕು; ತುಪಾಕಿ; ಕೋವಿ; ರೈಹಲ್ಲು.
  3. (ಅಮೆರಿಕನ್‍ ಪ್ರಯೋಗ) ರಿವಾಲ್ವರು.
  4. (ಪಂದ್ಯಗಳನ್ನು) ಪ್ರಾರಂಭಿಸುವ ಪಿಸ್ತೂಲು.
  5. ಪಿಚಕಾರಿ; ಸಿಂಪಣಿ; ಕೀಟನಾಶಕ, ಗ್ರೀಸ್‍, ಇಲೆಕ್ಟ್ರಾನ್‍ಗಳು, ಮೊದಲಾದವನ್ನು ನಿರ್ದಿಷ್ಟ ದಿಕ್ಕಿನಲ್ಲಿ ಸಿಂಪಡಿಸುವ ಸಾಧನ.
  6. ಷಿಕಾರಿ ತಂಡದವನು; ಕೋವಿ ಬೇಟೆಗಾರರ ತಂಡದವನು.
  7. (ಅಮೆರಿಕನ್‍ ಪ್ರಯೋಗ) = gunman.
  8. (ಬಹುವಚನ ದಲ್ಲಿ) (ನೌಕಾ ಅಶಿಷ್ಟ) ಫಿರಂಗಿ (ಹಾರಿಸುವ) ಅಧಿಕಾರಿ.
ನುಡಿಗಟ್ಟು
  1. at gun point ಕೋವಿ ತೋರಿಸಿ; ಬಂದೂಕು ಬೆದರಿಕೆಯಿಂದ; ಬಂದೂಕಿನಿಂದ ಕೊಲ್ಲುವುದಾಗಿ ಹೆದರಿಸಿ.
  2. beat (or jump) the gun
    1. ಸಂಕೇತ, ಸೂಚನೆ ಕೊಡುವುದಕ್ಕಿಂತ ಮುಂಚೆಯೇ ಹೊರಡು.
    2. (ನಿಗದಿತ) ಕಾಲಕ್ಕೆ ಮೊದಲೇ (ಕಾರ್ಯ) ಪ್ರಾರಂಭಿಸು.
  3. big gun (ಅಶಿಷ್ಟ) ದೊಡ್ಡಮನುಷ್ಯ; ಪ್ರಮುಖ ವ್ಯಕ್ತಿ; ಗಣ್ಯ.
  4. blow great guns (ಬಿರುಗಾಳಿಯ ವಿಷಯದಲ್ಲಿ) ರಭಸದಿಂದ, ಪ್ರಚಂಡವಾಗಿ – ಬೀಸು.
  5. give engine, motor vehicle the gun (ಆಡುಮಾತು) ಎಂಜಿನು, ಮೋಟಾರು ವಾಹನಗಳಿಗೆ ವೇಗ ಕೊಡು, ಅವುಗಳ ವೇಗ ಹೆಚ್ಚಿಸು.
  6. going great guns ವಿಜಯದತ್ತ, ಗೆಲುವಿನತ್ತ – ಭರದಿಂದ ಸಾಗುತ್ತಿರು.
  7. son of a gun (ಆಡುಮಾತು) ಕ್ಷುದ್ರ; ನೀಚ; ತಿರಸ್ಕಾರಾರ್ಹ ವ್ಯಕ್ತಿ.
  8. stand (or stick) one’s guns ತನ್ನ ನಿಲುವನ್ನು ಬಿಡದಿರು; ಪಟ್ಟು ಹಿಡಿದು ಸಾಧಿಸು.
  9. sure as a gun (ಬಂದೂಕಿನಂತೆ) ಗುರಿತಪ್ಪದೆ; ಖಂಡಿತ; ನಿಸ್ಸಂದೇಹವಾಗಿ.
See also 1gun
2gun ಗನ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ gunned, ವರ್ತಮಾನ ಕೃದಂತ gunning).
ಸಕರ್ಮಕ ಕ್ರಿಯಾಪದ
  1. (ಒಬ್ಬನ, ಒಂದರ ಮೇಲೆ) ಬಂದೂಕು – ಹಾರಿಸು, ಹೊಡೆ.
  2. ಬಂದೂಕಿನಿಂದ ಹೊಡೆದು ಕೆಡವು, ಉರುಳಿಸು.
  3. (ಆಡುಮಾತು) (ಎಂಜಿನ್ನು ಮೊದಲಾದವುಗಳ) ವೇಗ ಹೆಚ್ಚಿಸು.
ಅಕರ್ಮಕ ಕ್ರಿಯಾಪದ
  1. ಕೋವಿ ಬೇಟೆಯಾಡು; ಬಂದೂಕಿನಿಂದ ಬೇಟೆಯಾಡು; ಬಂದೂಕಿನ ಸಮೇತ ಬೇಟೆಗೆ ಹೋಗು.
  2. ಬಂದೂಕಿನಿಂದ ಹೊಡೆ; ಕೋವಿ – ಹೊಡೆ, ಹಾರಿಸು.
ಪದಗುಚ್ಛ
  1. gun down ಬಂದೂಕಿನಿಂದ ಹೊಡೆದು ಹಾಕು.
  2. gun for
    1. (ಕೊಲ್ಲಲು ಯಾ ಹಾನಿ ಮಾಡಲು) ಬಂದೂಕು ಸಮೇತ – ಅರಸು, ಹುಡುಕಿಕೊಂಡು ಹೋಗು.
    2. (ರೂಪಕವಾಗಿ) (ಒಬ್ಬನ ಮೇಲೆ) ಹಲ್ಲೆ ನಡೆಸಲು, (ಒಬ್ಬನಿಗೆ) ಹಾನಿ ಮಾಡಲು, ಯಾ (ಒಬ್ಬನನ್ನು) ಕೊಲ್ಲಲು – ಹೋಗು, ಪ್ರಯತ್ನಿಸು.
    3. (ರೂಪಕವಾಗಿ) ಹುಡುಕು; ಅರಸು; ಪಡೆದುಕೊಳ್ಳಲು ಪ್ರಯತ್ನಿಸು.