See also 1gun
2gun ಗನ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ gunned, ವರ್ತಮಾನ ಕೃದಂತ gunning).
ಸಕರ್ಮಕ ಕ್ರಿಯಾಪದ
  1. (ಒಬ್ಬನ, ಒಂದರ ಮೇಲೆ) ಬಂದೂಕು – ಹಾರಿಸು, ಹೊಡೆ.
  2. ಬಂದೂಕಿನಿಂದ ಹೊಡೆದು ಕೆಡವು, ಉರುಳಿಸು.
  3. (ಆಡುಮಾತು) (ಎಂಜಿನ್ನು ಮೊದಲಾದವುಗಳ) ವೇಗ ಹೆಚ್ಚಿಸು.
ಅಕರ್ಮಕ ಕ್ರಿಯಾಪದ
  1. ಕೋವಿ ಬೇಟೆಯಾಡು; ಬಂದೂಕಿನಿಂದ ಬೇಟೆಯಾಡು; ಬಂದೂಕಿನ ಸಮೇತ ಬೇಟೆಗೆ ಹೋಗು.
  2. ಬಂದೂಕಿನಿಂದ ಹೊಡೆ; ಕೋವಿ – ಹೊಡೆ, ಹಾರಿಸು.
ಪದಗುಚ್ಛ
  1. gun down ಬಂದೂಕಿನಿಂದ ಹೊಡೆದು ಹಾಕು.
  2. gun for
    1. (ಕೊಲ್ಲಲು ಯಾ ಹಾನಿ ಮಾಡಲು) ಬಂದೂಕು ಸಮೇತ – ಅರಸು, ಹುಡುಕಿಕೊಂಡು ಹೋಗು.
    2. (ರೂಪಕವಾಗಿ) (ಒಬ್ಬನ ಮೇಲೆ) ಹಲ್ಲೆ ನಡೆಸಲು, (ಒಬ್ಬನಿಗೆ) ಹಾನಿ ಮಾಡಲು, ಯಾ (ಒಬ್ಬನನ್ನು) ಕೊಲ್ಲಲು – ಹೋಗು, ಪ್ರಯತ್ನಿಸು.
    3. (ರೂಪಕವಾಗಿ) ಹುಡುಕು; ಅರಸು; ಪಡೆದುಕೊಳ್ಳಲು ಪ್ರಯತ್ನಿಸು.