See also 2ground  3ground  4ground
1ground ಗ್ರೌನ್ಡ್‍
ನಾಮವಾಚಕ
  1. ಕಡಲ ತಳ; ಸಮುದ್ರದ ತಳ.
  2. (ಬಹುವಚನದಲ್ಲಿ) ಮುಖ್ಯವಾಗಿ ಕಾಫಿಯ – ಚರಟ, ಗಸಿ, ಗಷ್ಟು.
  3. = $^1$earth (9a).
  4. ಆಧಾರ; ಅಸ್ತಿಭಾರ; ಬುನಾದಿ; ನೆಲೆಗಟ್ಟು.
  5. (ಸರಿಯಾದ) ಕಾರಣ; (ಸಮರ್ಥ) ಆಧಾರ: on the ground of (ಯಾವುದೋ ಒಂದರ) ಕಾರಣದಿಂದ; ನೆಪದಿಂದ; ಆಧಾರದ ಮೇಲೆ. on public grounds ಸಾರ್ವಜನಿಕ ಕಾರಣಗಳಿಂದ.
  6. ಕೆಳಪದರ; ತಳಸ್ತರ.
  7. (ಯಾವುದರದೇ) ತಳಭಾಗ; ಆಧಾರ ಭಾಗ.
  8. (ಕಸೂತಿ ಕೆಲಸ, ವರ್ಣಚಿತ್ರರಚನೆ, ಮೊದಲಾದವುಗಳಲ್ಲಿನ) ತಳ; ಮೇಲ್ಮೈ; ಚಿತ್ರ ಕೆಲಸ ಮಾಡುವ ಮೈಭಾಗ.
  9. (ಚಿತ್ರ ಮೊದಲಾದವುಗಳಲ್ಲಿನ) ಖಾಲಿ ಜಾಗ; ಚಿತ್ರ ಕೆಲಸವನ್ನು ಮಾಡದೆ ಉಳಿದಿರುವ ಭಾಗ.
  10. (ವಸ್ತುವಿನ, ಚಿತ್ರದ) ತಲವರ್ಣ; ಕೆಳಬಣ್ಣ; ಆಧಾರ ವರ್ಣ; ಇತರ ಬಣ್ಣಗಳಿಗೆ ಆಧಾರವಾಗಿ ಯಾ ಹಿನ್ನೆಲೆಯಾಗಿ ಮೊದಲು ಹಚ್ಚಿದ ಬಣ್ಣ.
  11. (ವರ್ಣಚಿತ್ರದಲ್ಲಿನ) ಪ್ರಧಾನ ವರ್ಣ ಯಾ ವರ್ಣಛಾಯೆ; ಪ್ರಮುಖವಾಗಿ ಯಾ ಎದ್ದು ಕಾಣುವ ಬಣ್ಣ ಯಾ ಅದರ ಛಾಯೆ.
  12. (ಕೆತ್ತನೆಯಲ್ಲಿ) ಮೇಲ್ಮೈ ಲೇಪ; ತಲಲೇಪ; ಸೂಜಿಯಿಂದ ಕೊರೆಯುವ ಮುನ್ನ ಮೇಲ್ಮೈಗೆ ಸವರುವ ಪದಾರ್ಥ.
  13. ಭೂಮಿ; ನೆಲ; ಭೂಮಿಯ ಮೇಲ್ಮೈ.
  14. (ಬಹುವಚನ ದಲ್ಲಿ) ಆವರಣ; ಸುತ್ತು ನೆಲ; ಅಂಗಣ; ಬೇಲಿ ಮೊದಲಾದ ಆವರಣ ಹಾಕಿ ಅಲಂಕಾರಕ್ಕಾಗಲಿ ವಿಹಾರಕ್ಕಾಗಲಿ ಇಟ್ಟುಕೊಂಡಿರುವ, ಮನೆಗೆ ಸೇರಿದ ಪ್ರದೇಶ.
  15. (ಒಂದು ಗೊತ್ತಾದ) ಭೂಭಾಗ; ಭೂಪ್ರದೇಶ; ಭೂಪ್ರದೇಶದಲ್ಲಿನ – ಸ್ಥಾನ, ಹರವು, ಯಾ ದೂರ.
  16. ಒಂದು ಗೊತ್ತಾದ ಉದ್ದೇಶಕ್ಕಾಗಿ ಇಟ್ಟಿರುವ – ಪ್ರದೇಶ, ಬಯಲು, ಜಈನು: fishing grounds ಈನುಗಾರಿಕೆ ಪ್ರದೇಶ; ಈನು ಹಿಡಿಯಲು ನಿಗದಿಯಾದ ಸ್ಥಳ. cricket grounds ಕ್ರಿಕೆಟ್‍ ಮೈದಾನ.
  17. (ಒಬ್ಬನಿಗೆ ಸೇರಿದ) ಭೂಮಿ ಕಾಣಿ; ಜಈನು; ಭೂ ಆಸ್ತಿ.
  18. (ಕ್ರಿಕೆಟ್‍) ನಿಲ್ಲುಜಾಗ; ಮುಖ್ಯವಾಗಿ ಬ್ಯಾಟುಗಾರನ ಕಡೆಯ ವಿಕೆಟ್ಟಿಗೂ ಅವನ ಮುಂದಿನ ಪಾಪಿಂಗ್‍ ಗೆರೆಗೂ ನಡುವಣ ಜಾಗ: in his ground ತನ್ನ ನಿಲ್ಲುಜಾಗದೊಳಗೆ.
  19. (ಬ್ರಿಟಿಷ್‍ ಪ್ರಯೋಗ) ಕೊಠಡಿ ಮೊದಲಾದವುಗಳ ನೆಲ.
  20. = ground-staff.
ಪದಗುಚ್ಛ

classic ground ಪ್ರಸಿದ್ಧ ಸ್ಥಳ; ಐತಿಹಾಸಿಕ ಕ್ಷೇತ್ರ.

ನುಡಿಗಟ್ಟು
  1. above ground ಜೀವಂತವಾಗಿರುವ; ಬದುಕಿರುವ.
  2. be dashed to the ground = ನುಡಿಗಟ್ಟು \((5)\).
  3. $^1$break ground.
  4. cover much ground (ವಿಚಾರಣೆ, ವರದಿ, ಮೊದಲಾದವುಗಳು) ಬಹಳ ವ್ಯಾಪಕವಾಗಿರು; ಬಹಳ ವಿಷಯಗಳನ್ನೊಳಗೊಂಡಿರು.
  5. down to the ground (ಆಡುಮಾತು) ಪೂರ್ತಿಯಾಗಿ; ಸಂಪೂರ್ಣವಾಗಿ.
  6. fall to the ground (ಒಂದು ಸಂಕಲ್ಪ, ಯೋಜನೆ, ಪ್ರತೀಕ್ಷೆ, ಆಸೆ) ವ್ಯರ್ಥವಾಗು; ನಿಷ್ಪ್ರಯೋಜಕವಾಗು; ಬಿದ್ದು ಹೋಗು; ಧ್ವಂಸವಾಗಿ ಬಿಡು; ಮಣ್ಣುಗೂಡು.
  7. forbidden ground ನಿಷಿದ್ಧ ವಸ್ತು; ತ್ಯಾಜ್ಯ ವಿಷಯ; ಕೈ ಹಾಕಬಾರದ ವಿಷಯ.
  8. from the ground up
    1. ಕಾಲಿನಿಂದ ತಲೆಯವರೆಗೆ; ತಳದಿಂದ ತುದಿಯವರೆಗೆ; ಕ್ರಮವಾಗಿ: he decided to learn the business from the groud up ಅವನು ಆ ಉದ್ಯಮವನ್ನು ತಳದಿಂದ ಮೇಲಿನವರೆಗೆ ಸಂಪೂರ್ಣವಾಗಿ ಕಲಿಯಲು ನಿರ್ಧರಿಸಿದ.
    2. (ಆಡುಮಾತು) ಸಂಪೂರ್ಣವಾಗಿ; ಪೂರ್ತಿಯಾಗಿ; ತಳಸ್ಪರ್ಶಿಯಾಗಿ; ಆದ್ಯಂತವಾಗಿ: he knows the subject from the group up ಅವನು ಆ ಶಾಸ್ತ್ರವನ್ನು ಪೂರ್ತಿಯಾಗಿ ಬಲ್ಲ.
  9. gain ground
    1. ಮುಂದುವರಿ; ಅಭಿವೃದ್ಧಿ ಹೊಂದು; ಸ್ಥಿತಿ ಬಲಪಡಿಸಿಕೊ.
    2. (ಯಾವುದಾದರೂ ಅಭಿಪ್ರಾಯ, ವಾದ, ಪದ್ಧತಿ, ಮೊದಲಾದವು ಜನರಲ್ಲಿ) ವ್ಯಾಪಿಸು; ಹರಡು; ಹಬ್ಬು: the custom is gaining ground ಆ ಪದ್ಧತಿಯು ಈಗ (ಜನರಲ್ಲಿ) ಹಬ್ಬುತ್ತಿದೆ.
  10. get in on the ground floor ಕಂಪನಿಯ ಸ್ಥಾಪಕರಿಗೆ ಅನ್ವಯಿಸುವ ನಿಯಮಗಳ ಪ್ರಕಾರವೇ ಒಂದು ಕಂಪನಿ ಮೊದಲಾದವಕ್ಕೆ ಪ್ರವೇಶ ಪಡೆ.
  11. get off the ground (ಆಡುಮಾತು) ಯಶಸ್ವಿಯಾಗಿ ಆರಂಭವಾಗು.
  12. give (or lose) ground ಹಿಮ್ಮೆಟ್ಟು; ಹಿಂಜರಿ; ಬಿಟ್ಟುಕೊಡು; ಹಿಂದೆ ಬೀಳು; ಕ್ಷೀಣಿಸು; ಅವನತಿಯಾಗು.
  13. go to ground
    1. (ನಾಯಿ, ನರಿ, ಮೊದಲಾದವುಗಳ ವಿಷಯದಲ್ಲಿ) ಬಿಲ – ಹೊಗು, ಸೇರು.
    2. (ವ್ಯಕ್ತಿಯ ವಿಷಯದಲ್ಲಿ) ಕಣ್ಮರೆಯಾಗು; ಸಾರ್ವಜನಿಕ ಗಮನದಿಂದ ಹಿಂದೆಗೆ.
  14. into the ground etc. (ಆಡುಮಾತು) ಸುಸ್ತಾಗುವವರೆಗೆ.
  15. on firm, solid, etc. ground ಸುಭದ್ರ ನೆಲೆಯಲ್ಲಿ; ಸರಿಯಾದ ತರ್ಕವನ್ನು ಆಧರಿಸಿ, ಬಳಸಿ.
  16. on one’s ground (ಒಬ್ಬನಿಗೆ ಚೆನ್ನಾಗಿ ಪರಿಚಯವಿರುವ) ಕ್ಷೇತ್ರ; ಪ್ರದೇಶ: meet the enemy on his own ground ಶತ್ರುವಿನ ಕ್ಷೇತ್ರದಲ್ಲೇ ಅವನನ್ನು ಎದುರಿಸು.
  17. on the ground (ಸ್ವಾರಸ್ಯ ಘಟನೆ, ಚಟುವಟಿಕೆ, ಮೊದಲಾದವು) ಸಂಭವಿಸಿದ, ನಡೆದ – ಸ್ಥಳದಲ್ಲಿ: very soon reporters were on the ground to get the story ಸುದ್ದಿಗಾಗಿ ವರದಿಗಾರರು ಆ ಕೂಡಲೇ ಸ್ಥಳಕ್ಕೆ ಬಂದರು.
  18. shift one’s ground ನೆಲೆ ಬದಲಾಯಿಸು; ವಾದ, ಉದ್ದೇಶ, ಮೊದಲಾದವನ್ನು ಬದಲಿಸು.
  19. stand one’s ground ನೆಲ ಕಚ್ಚಿ ನಿಲ್ಲು; ನೆಲೆ ಬಿಡದಿರು; ತನ್ನ ವಾದ, ಉದ್ದೇಶ, ಮೊದಲಾದವನ್ನು ಬದಲಿಸದಿರು.
  20. take ground (ಹಡಗಿನ ವಿಷಯದಲ್ಲಿ) ನೆಲ – ಕಚ್ಚು, ಹತ್ತು, ಹಿಡಿ.
  21. thin on the ground ಹೆಚ್ಚಾಗಿಲ್ಲದ; ಬಹು ಸಂಖ್ಯೆಯಲ್ಲಿರದ; ಅಪರೂಪವಾದ.
  22. touch ground
    1. (ಬರೀ ಹರಟೆ ಮೊದಲಾದವನ್ನು ಬಿಟ್ಟು) ಮುಖ್ಯ ವಿಷಯಕ್ಕೆ ಬರು.
    2. (ಹಡಗಿನ ವಿಷಯದಲ್ಲಿ) ನೆಲ ಕಚ್ಚು.
See also 1ground  3ground  4ground
2ground ಗ್ರೌನ್ಡ್‍
ಗುಣವಾಚಕ
  1. (ಹಕ್ಕಿಗಳ ಹೆಸರುಗಳಲ್ಲಿ) ನೆಲದ ಮೇಲೆ ವಾಸಿಸುವ; ನೆಲದ; ಭೂಚರ: ground sparrow ನೆಲದ ಗುಬ್ಬಚ್ಚಿ.
  2. (ಪ್ರಾಣಿಗಳ ವಿಷಯದಲ್ಲಿ)
    1. ನೆಲವಾಸಿ; ಭೂವಾಸಿ; ನೆಲದ; ಬಿಲ ಕೊರೆಯುವ.
    2. ಭೂಶಾಯಿ; ನೆಲದ ಮೇಲೆ ಮಲಗುವ.
  3. (ಗಿಡಗಳ ವಿಷಯದಲ್ಲಿ)
    1. ಕುರುಚಲು; ಗಿಡ್ಡ; ಮೋಟು.
    2. ನೆಲದ ಮೇಲೆ – ಹಬ್ಬುವ, ಪ್ರಸರಿಸುವ, ಬಳ್ಳಿವರಿಯುವ.
See also 1ground  2ground  4ground
3ground ಗ್ರೌನ್ಡ್‍
ಸಕರ್ಮಕ ಕ್ರಿಯಾಪದ
  1. (ಸಂಸ್ಥೆ, ತತ್ತ್ವ, ನಂಬಿಕೆ, ಮೊದಲಾದವನ್ನು ಯಾವುದಾದರೂ ನಿಶ್ಚಯಾಂಶ ಯಾ ಆಧಾರದ ಮೇಲೆ) ಸ್ಥಾಪಿಸು; ಪ್ರತಿಷ್ಠಿಸು; ನೆಲೆಗೊಳಿಸು (ಸಾಮಾನ್ಯವಾಗಿ ಕರ್ಮಣಿ ಪ್ರಯೋಗ): well grounded ಒಳ್ಳೆಯ ಆಧಾರವುಳ್ಳ.
  2. (ಕಸೂತಿ ಮೊದಲಾದವಕ್ಕೆ) ಆಧಾರತಲ ಏರ್ಪಡಿಸು; ಹಿನ್ನೆಲೆ ಹೊಂದಿಸು.
  3. (ಮುಖ್ಯವಾಗಿ ಶಸ್ತ್ರಾಸ್ತ್ರಗಳನ್ನು) ನೆಲದ ಮೇಲಿಡು; ಕೆಳಗಿಡು.
  4. = $^2$earth (3).
  5. ಹಡಗನ್ನು – ನೆಲಕಚ್ಚಿಸು, ದಡ ಹತ್ತಿಸು.
  6. (ವಿಮಾನ, ವೈಮಾನಿಕ) ಹಾರದಂತೆ – ತಡೆ (ಹಿಡಿ), ಅಡ್ಡಿ ಮಾಡು.
ಅಕರ್ಮಕ ಕ್ರಿಯಾಪದ
  1. ನೆಲಕ್ಕಿಳಿ; ನೆಲಕ್ಕೆ – ತಾಗು, ಬೀಳು; ಕೆಳಕ್ಕಿಳಿ.
  2. (ಹಡಗು) ನೆಲಕಚ್ಚು; ತಳ – ಹಿಡಿ, ಹತ್ತು.
See also 1ground  2ground  3ground
4ground ಗ್ರೌನ್ಡ್‍
ಕ್ರಿಯಾಪದ

grind ಧಾತುವಿನ ಭೂತರೂಪ ಮತ್ತು ಭೂತಕೃದಂತ : ground glass ಉಜ್ಜಿದ ಗಾಜು; ಉಜ್ಜಿ ಅಪಾರದರ್ಶಕವಾಗಿ ಮಾಡಿದ ಗಾಜು.