gridiron ಗ್ರಿಡ್‍ಐಅರ್ನ್‍
ನಾಮವಾಚಕ
  1. (ಕೆಂಡದ ಮೇಲಿಟ್ಟು ಮಾಂಸ ಯಾ ಮೀನನ್ನು ಸುಡಲು ಬಳಸುವ) ಕಂಬಿ ಜಾಲರಿ; ಸರಳು ಚೌಕಟ್ಟು.
  2. (ನೌಕಾಯಾನ) ತೊಲೆ ಚೌಕಟ್ಟು; ಹಡಗುಕಟ್ಟೆಯಲ್ಲಿ ಹಡಗಿಗೆ ಆಸರೆಯಾದ ಸಮಾನಾಂತರ ತೊಲೆಗಳ ಚೌಕಟ್ಟು.
  3. (ಅಮೆರಿಕನ್‍ ಪ್ರಯೋಗ) (ಆಡುವ ಜಾಗದ ಎಲ್ಲೆಯನ್ನು ಎರಡು ಸಮಾನಾಂತರ ರೇಖೆಗಳ ಮೂಲಕ ಗುರುತು ಮಾಡಿರುವ) ಕಾಲ್ಚೆಂಡು (ಹುಟ್‍ಬಾಲ್‍) ಮೈದಾನ.
  4. (ರಂಗಸ್ಥಳ) ಮೇಲ್ಚಪ್ಪರ; ಮೇಲ್‍ಚೌಕಟ್ಟು; ಕೆಳಗೆ ಇಳಿ ಬಿಡುವ ಚಿತ್ರದ ಪರದೆ ಮೊದಲಾದವುಗಳಿಗೆ ಆಸರೆಯಾದ, ರಂಗಸ್ಥಳದ ಮೇಲ್ಭಾಗದಲ್ಲಿಯ ತೊಲೆಗಳ ವ್ಯವಸ್ಥೆ.
  5. ನಾವಿಕಸೇನೆಯ ಒಂದು ವಿನ್ಯಾಸ ಬದಲಾವಣೆ.
  6. = grid-iron pendulum.
  7. = grid (5).