ಮಿಲಿಟರಿ ನಕ್ಷೆಗಳಲ್ಲಿ ಸ್ಥಳ ನಿರ್ದೇಶನಕ್ಕಾಗಿ ಎಳೆದಿರುವ ಚೌಕಳಿ ಮನೆಗಳು.
ವಿದ್ಯುಚ್ಛಕ್ತಿ ಸರಬರಾಜಿಗಾಗಿ ಏರ್ಪಡಿಸಿರುವ ವಾಹಕ ತಂತಿಗಳ ಬಲೆ.
(ಅಡಿಗೆಗೆ, ಸುಡುವುದಕ್ಕೆ ಬಳಸುವ) ಸರಳು ತಡೆ.
ಅನಿಲವನ್ನು ಸರಬರಾಜು ಮಾಡಲು ಏರ್ಪಡಿಸಿರುವ ಕೊಳವೆಗಳ ವ್ಯವಸ್ಥೆ.
ಗೆರೆಜಾಲ; ಗೆರೆಗೂಡು; ರೇಖಾಕೋಷ್ಠ; ರೇಖಾಜಾಲರಿ; ಒಂದನ್ನೊಂದು ಲಂಬವಾಗಿ ಅಡ್ಡಹಾಯುವ, ಸಮಾಂತರದಲ್ಲಿರುವ ಮತ್ತು ಸಂಖ್ಯೆಗಳನ್ನು ಹಾಕಿರುವ ರೇಖೆಗಳ, ಮುಖ್ಯವಾಗಿ ನಕ್ಷೆಯಲ್ಲಿ ಸ್ಥಳಗಳನ್ನು ಗೊತ್ತುಪಡಿಸಲು ಬಳಸುವ ರೇಖೆಗಳ ಜಾಲ.
ರೇಸು ಗೆರೆ, ಪಟ್ಟೆ; ಪಂದ್ಯದ ಕಾರುಗಳು ಹೊರಡುವಾಗ ಯಾವ ಯಾವ ಸ್ಥಳದಲ್ಲಿ ನಿಲ್ಲಬೇಕು ಎನ್ನುವುದನ್ನು ಸೂಚಿಸಲು ಕಾರುಗಳ ಪಥದ ಮೇಲೆ ಬಳಿದಿರುವ ರೇಖೆಗಳ ಜಾಲ, ಗೆರೆಪಟ್ಟೆಗಳು.