See also 2green  3green
1green ಗ್ರೀನ್‍
ಗುಣವಾಚಕ
  1. ಹಸುರು; ಹಸಿರಾದ; ಹಚ್ಚನೆಯ; ಹಸಿಯ ಹುಲ್ಲು, ಕಡಲ ನೀರು, ಪಚ್ಚೆ ಮೊದಲಾದವುಗಳ ಬಣ್ಣದ.
  2. ಸೊಪ್ಪು ಬೆಳೆದಿರುವ.
  3. ಎಲೆ ತುಂಬಿರುವ.
  4. (ಮೈಬಣ್ಣ, ಮುಖ ಛಾಯೆಯ ವಿಷಯದಲ್ಲಿ) ಬಿಳಿಚಿಕೊಂಡ; ನಿಸ್ತೇಜ; ಪಾಂಡುರ; ರೋಗದ ಛಾಯೆಯ.
  5. (ರೂಪಕವಾಗಿ) ಕರುಬಿನ; ಅಸೂಯೆಯ; ಮಾತ್ಸರ್ಯದ.
  6. ಕಾಯಿಪಲ್ಯದ; ಸೊಪ್ಪಿನ.
  7. ಮಾಗಿಲ್ಲದ; ಹಣ್ಣಾಗಿಲ್ಲದ; ಕಾಯಾದ.
  8. ಎಳಸಾದ; ಹೀಚಾದ; ಪೀಚಾದ.
  9. (ಹಸಿರುಗೂಡಿ) ಬಲಿಯುತ್ತಿರುವ; ಬೆಳೆಯುತ್ತಿರುವ.
  10. ಚೈತನ್ಯ ತುಂಬಿರುವ; ನಳನಳಿಸುತ್ತಿರುವ.
  11. ಬಾಡಿಲ್ಲದ; ಕಂದಿರದ.
  12. ಎಳೆಯ; ಅಪಕ್ವ; ಬಲಿತಿಲ್ಲದ; ಬೆಳವಣಿಗೆ ಇಲ್ಲದ.
  13. ಅನನುಭವಿ; ಅನುಭವವಿಲ್ಲದ; ಅತಿ ಮುಗ್ಧ; ಸುಲಭವಾಗಿ ಮೋಸ ಹೋಗುವ: was not so green as to expect a suspicious man look suspicious ಸಂಶಯಾಸ್ಪದ ವ್ಯಕ್ತಿ ಸಂಶಯಾಸ್ಪದವಾಗಿಯೇ ಕಾಣುತ್ತಾನೆಂದು ನಿರೀಕ್ಷಿಸುವಷ್ಟು ಅವನು ಮುಗ್ಧನಾಗಿರಲಿಲ್ಲ.
  14. ಹಸಿಯ; ಒಣಗಿರದ.
  15. ಪಕ್ವ ಮಾಡಿರದ; ಹದಗೊಳಿಸಿರದ.
  16. (ಇನ್ನೂ) ಮಾಯದಿರುವ; ಹಸಿ: a green wound ಹಸಿ ಗಾಯ.
ಪದಗುಚ್ಛ
  1. a green Christmas (ಯಾ Winter ಯಾ Yule) ಹಿತವಾದ (ಹಿಮವಿಲ್ಲದ) ಕ್ರಿಸ್‍ಮಸ್‍ ಕಾಲ.
  2. a green old age ತೀರ ಹಣ್ಣಾಗದ, ಉತ್ಸಾಹದಿಂದ ಕೂಡಿದ ಮುಪ್ಪು.
  3. a green season ಮಂಜಿಲ್ಲದ, ಹಿತವಾದ ಕಾಲ.
ನುಡಿಗಟ್ಟು
  1. green fingers ತೋಟಗಾರಿಕೆಯಲ್ಲಿ ಕೌಶಲ.
  2. in the green tree (ಬೈಬ್‍ಲ್‍) ಒಳ್ಳೆಯ ದೆಸೆಯಲ್ಲಿ; ಸೌಖ್ಯ ಸ್ಥಿತಿಯಲ್ಲಿ; ಅನುಕೂಲ ಸನ್ನಿವೇಶದಲ್ಲಿ.
See also 1green  3green
2green ಗ್ರೀನ್‍
ನಾಮವಾಚಕ
  1. ಹಸುರಾಗಿರುವುದು.
  2. ಹಸಿರು ಭಾಗ.
  3. ಹಸುರು (ಬಣ್ಣ).
  4. ಹಸುರು ಬಟ್ಟೆ ಯಾ ಉಡುಗೆ: dressed in green ಹಸಿರು ಬಟ್ಟೆ ಉಟ್ಟ.
  5. (ರೂಪಕವಾಗಿ) (ನಂಬಿ ಮೋಸ ಹೋಗುವ) ಮಂಕುತನದ ಛಾಯೆ; ಮಡ್ಡಿತನದ ಚಿಹ್ನೆ; ಗಾಂಪತನದ ಗುರುತು: do you see any green in my eye? ನಿನಗೆ ನನ್ನ ಕಣ್ಣಿನಲ್ಲಿ ಗಾಂಪತನದ ಗುರುತೇನಾದರೂ ಕಾಣಿಸುತ್ತಿದೆಯೇ? ನಾನೇನು ಗುಗ್ಗುವೆಂದು ಎಣಿಸಿದೆಯೋ?
  6. (ಸಾಮಾನ್ಯವಾಗಿ ವಿಶೇಷಣದೊಡನೆ) ಹಸುರು ಬಣ್ಣ, ರಂಗು: mineral green ಖನಿಜ ಹಸುರು.
  7. (ಯೌವನದ) ಹುರುಪು; ಶಕ್ತಿ: in the green ನವಯೌವನದಲ್ಲಿ; ತಾರುಣ್ಯದ ಭರದಲ್ಲಿ.
  8. = greenery.
  9. (ಬಹುವಚನದಲ್ಲಿ) (ಬೇಯಿಸುವ ಮುಂಚಿನ ಯಾ ಬೇಯಿಸಿದ) ಕಾಯಿಪಲ್ಯಗಳು; ತರಕಾರಿ (ಸೊಪ್ಪು ಮೊದಲಾದವು).
  10. ಸಾರ್ವಜನಿಕ ಹುಲ್ಲುಮೈದಾನ, ಹುಲ್ಲುಮಾಳ: village green ಹಳ್ಳಿಯ ಹುಲ್ಲು ಮೈದಾನ.
  11. (ವಿಶೇಷ) ಉದ್ದೇಶಕ್ಕಾಗಿ ಬಳಸುವ ಹುಲ್ಲು ನೆಲ (ಮುಖ್ಯವಾಗಿ ವಿಶೇಷಣಗಳೊಂದಿಗೆ): putting-green, bowling green ಇತ್ಯಾದಿ.
  12. (ಗಾಲ್‍) ಕುಳಿಯನ್ನು ಸುತ್ತುವರೆದಿರುವ, ತುಂಡಾಗಿ ಕತ್ತರಿಸಿದ ಹುಲ್ಲಿನ ಪ್ರದೇಶ, ಆವರಣ.
  13. (ಗಾಲ್‍) = fairway (3).
  14. (ಅಶಿಷ್ಟ) ಹಣ; ರೊಕ್ಕ; ದುಡ್ಡು.
  15. ಕೀಳ್ದರ್ಜೆಯ ಮ್ಯಾರಿಹ್ವಾನ.
  16. (ಬಹುವಚನದಲ್ಲಿ) ಸಂಭೋಗ ಮೈಥುನ.
  17. (ಸ್ನೂಕರ್‍ ಮೊದಲಾದ ಆಟಗಳಲ್ಲಿನ) ಹಸಿರು ಚೆಂಡು.
  18. ಐರ್ಲೆಂಡನ್ನು ಸಂಕೇತಿಸುವ (ಹಸಿರು) ಬಣ್ಣ.
  19. = green light.
ಪದಗುಚ್ಛ

through the green (ಗಾಲ್‍ ಆಟದಲ್ಲಿ) ಪ್ರಾರಂಭಿಕ ಹೊಡೆತದ ಜಾಗಕ್ಕೂ ಗುಳಿಯ ಸುತ್ತಣ ಹುಲ್ಲಿನ ಆವರಣಕ್ಕೂ ನಡುವಣ ಪ್ರದೇಶ.

See also 1green  2green
3green ಗ್ರೀನ್‍
ಸಕರ್ಮಕ ಕ್ರಿಯಾಪದ
  1. ಹಸುರು ಬಣ್ಣ ಹಾಕು, ಬಳಿ.
  2. ಹಸುರು ಕಲೆ (ಉಂಟು)ಮಾಡು.
  3. (ಅಶಿಷ್ಟ) ಮೋಸಗೊಳಿಸು; ಟೋಪಿ ಹಾಕು; ವಂಚಿಸು: attempts were made to green me ನನಗೆ ಟೋಪಿ ಹಾಕುವ ಪ್ರಯತ್ನಗಳು ನಡೆದುವು.
ಅಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಪಯಿರುಪಚ್ಚೆಗಳಿಂದ) ಹಸುರೇರು; ಹಚ್ಚಗಾಗು.
  2. ಹಸುರು ಕಲೆಯಾಗು.