See also 2graduate
1graduate ಗ್ರಾಡ್ಯು(ಜು)ಅಟ್‍
ನಾಮವಾಚಕ
  1. (ವಿಶ್ವವಿದ್ಯಾನಿಲಯದ) ಪದವೀಧರ.
  2. (ಅಳತೆಗೆರೆಗಳನ್ನು ಹಾಕಿರುವ, ಔಷಧವ್ಯಾಪಾರಿಯ) ಅಳತೆ ಪಾತ್ರೆ; ಮಾಪು.
  3. (ಅಮೆರಿಕನ್‍ ಪ್ರಯೋಗ) ಶಾಲಾ ವ್ಯಾಸಂಗವನ್ನು ಮುಗಿಸಿದವ(ಳು).
See also 1graduate
2graduate ಗ್ರಾಡ್ಯು(ಜು)ಏಟ್‍
ಸಕರ್ಮಕ ಕ್ರಿಯಾಪದ
  1. (ಅಮೆರಿಕನ್‍ ಪ್ರಯೋಗ)
    1. (ವಿಶ್ವವಿದ್ಯಾನಿಲಯ) ಪದವಿಕೊಡು.
    2. ಶಾಲೆಯಲ್ಲಿ ಅಧ್ಯಯನ ಮುಗಿಸಿದುದರ ಗುರುತಾಗಿ ಸರ್ಟಿಹಿಕೇಟು, ಶಾಲಾ ಪ್ರಮಾಣಪತ್ರ, ಪ್ರಮಾಣಪತ್ರ ಕೊಡು.
    3. (ಅಮೆರಿಕನ್‍ ಪ್ರಯೋಗ) (ವಿಶ್ವವಿದ್ಯಾನಿಲಯ ಮೊದಲಾದವುಗಳಿಂದ) ಪದವೀಧರನನ್ನಾಗಿಸು; ಪದವೀಧರನನ್ನಾಗಿ ಮಾಡಿ ಕಳುಹಿಸು.
  2. ಅಳತೆ ಗುರುತಿಸು; (ಅಳತೆ) ಅಂಕಗಳಾಗಿ ವಿಭಾಗಿಸು; ಭಾಗಗಳನ್ನು ಗುರುತುಮಾಡು: the thermometer graduated according to the scale of Fahrenheit ಹ್ಯಾರನ್‍ಹೀಟ್‍ಮಾನಕ್ಕೆ ಅನುಸಾರವಾಗಿ ಅಳತೆ ಗುರುತು ಹಾಕಿದ ತಾಪಮಾಪಕ.
  3. ವರ್ಗೀಕರಿಸು; ದರ್ಜೆದರ್ಜೆಯಾಗಿ ಏರ್ಪಡಿಸು; ತಾರತಮ್ಯಾನುಸಾರ ವಿಂಗಡಿಸು: they begin to graduate the ages past ಅವರು ಗತಯುಗಗಳನ್ನು ದರ್ಜೆಗಳಾಗಿ ವಿಂಗಡಿಸಲು ಆರಂಭಿಸುತ್ತಾರೆ.
  4. (ತೆರಿಗೆಯ) ಹೊರೆಯನ್ನು ಶ್ರೇಣಿಗೆ ಅನುಸಾರವಾಗಿ – ಹಂಚು, ಪಾಲು ಮಾಡು: the proposal to graduate the income tax ಆದಾಯ ತೆರಿಗೆಯನ್ನು (ಒಂದು ಶ್ರೇಣಿಗೆ ಅನುಸಾರವಾಗಿ) ಹಂಚುವ ಸಲಹೆ.
  5. (ದ್ರಾವಣವನ್ನು) (ಇಂಗಿಸುವ ಮೂಲಕ) ಸಾರೀಕರಿಸು.
ಅಕರ್ಮಕ ಕ್ರಿಯಾಪದ
  1. (ವಿಶ್ವವಿದ್ಯಾನಿಲಯದ) ಪದವಿ ಪಡೆ; ಪದವಿ ತೆಗೆದುಕೊ; ಪದವಿ ಸ್ವೀಕರಿಸು.
  2. (ಅಮೆರಿಕನ್‍ ಪ್ರಯೋಗ) ಶಾಲೆಯಲ್ಲಿ ಓದು ಮುಗಿಸಿದುದರ ಪ್ರಮಾಣಪತ್ರ, ಸರ್ಟಿಹಿಕೇಟು ತೆಗೆದುಕೊ.
  3. (ರೂಪಕ) ಅರ್ಹತೆ, ಯೋಗ್ಯತೆ, ದಕ್ಷತೆ ಸಂಪಾದಿಸಲು ಶಿಕ್ಷಣ ಯಾ ತರಪೇತಿ ಹೊಂದು: graduate as a saint ಸಂತನಾಗಲು ಶಿಕ್ಷಣ ಪಡೆ, ತರಬೇತಿ ಹೊಂದು.
  4. (ವಿಶೇಷವಾಗಿ ಭೂವಿಜ್ಞಾನ, ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನಗಳಲ್ಲಿ) ಕ್ರಮಕ್ರಮವಾಗಿ ಮಾರ್ಪಡು; ಕ್ರಮೇಣ ಬದಲಾವಣೆಯಾಗು; ಸ್ವಲ್ಪಸ್ವಲ್ಪವಾಗಿ ಬದಲಾಯಿಸು: sandstone graduates into the inferior conglomerates ಮರಳುಗಲ್ಲು ಕ್ರಮೇಣ ಕೀಳುದರ್ಜೆಯ ಚೂರುಗಲ್ಲುಂಡೆಗಳಾಗಿ ಬದಲಾವಣೆಯಾಗುತ್ತದೆ.
  5. (ಕೆಲಸಕಾರ್ಯ ಮೊದಲಾದವುಗಳಲ್ಲಿ) ಉತ್ಕರ್ಷ ಪಡೆ; ಮೇಲಿನ ಸ್ತರಕ್ಕೆ ಏರು; ಉನ್ನತಿ ಸಾಧಿಸು; ಉತ್ತಮ ಮಟ್ಟ ತಲುಪು.