See also 1graduate
2graduate ಗ್ರಾಡ್ಯು(ಜು)ಏಟ್‍
ಸಕರ್ಮಕ ಕ್ರಿಯಾಪದ
  1. (ಅಮೆರಿಕನ್‍ ಪ್ರಯೋಗ)
    1. (ವಿಶ್ವವಿದ್ಯಾನಿಲಯ) ಪದವಿಕೊಡು.
    2. ಶಾಲೆಯಲ್ಲಿ ಅಧ್ಯಯನ ಮುಗಿಸಿದುದರ ಗುರುತಾಗಿ ಸರ್ಟಿಹಿಕೇಟು, ಶಾಲಾ ಪ್ರಮಾಣಪತ್ರ, ಪ್ರಮಾಣಪತ್ರ ಕೊಡು.
    3. (ಅಮೆರಿಕನ್‍ ಪ್ರಯೋಗ) (ವಿಶ್ವವಿದ್ಯಾನಿಲಯ ಮೊದಲಾದವುಗಳಿಂದ) ಪದವೀಧರನನ್ನಾಗಿಸು; ಪದವೀಧರನನ್ನಾಗಿ ಮಾಡಿ ಕಳುಹಿಸು.
  2. ಅಳತೆ ಗುರುತಿಸು; (ಅಳತೆ) ಅಂಕಗಳಾಗಿ ವಿಭಾಗಿಸು; ಭಾಗಗಳನ್ನು ಗುರುತುಮಾಡು: the thermometer graduated according to the scale of Fahrenheit ಹ್ಯಾರನ್‍ಹೀಟ್‍ಮಾನಕ್ಕೆ ಅನುಸಾರವಾಗಿ ಅಳತೆ ಗುರುತು ಹಾಕಿದ ತಾಪಮಾಪಕ.
  3. ವರ್ಗೀಕರಿಸು; ದರ್ಜೆದರ್ಜೆಯಾಗಿ ಏರ್ಪಡಿಸು; ತಾರತಮ್ಯಾನುಸಾರ ವಿಂಗಡಿಸು: they begin to graduate the ages past ಅವರು ಗತಯುಗಗಳನ್ನು ದರ್ಜೆಗಳಾಗಿ ವಿಂಗಡಿಸಲು ಆರಂಭಿಸುತ್ತಾರೆ.
  4. (ತೆರಿಗೆಯ) ಹೊರೆಯನ್ನು ಶ್ರೇಣಿಗೆ ಅನುಸಾರವಾಗಿ – ಹಂಚು, ಪಾಲು ಮಾಡು: the proposal to graduate the income tax ಆದಾಯ ತೆರಿಗೆಯನ್ನು (ಒಂದು ಶ್ರೇಣಿಗೆ ಅನುಸಾರವಾಗಿ) ಹಂಚುವ ಸಲಹೆ.
  5. (ದ್ರಾವಣವನ್ನು) (ಇಂಗಿಸುವ ಮೂಲಕ) ಸಾರೀಕರಿಸು.
ಅಕರ್ಮಕ ಕ್ರಿಯಾಪದ
  1. (ವಿಶ್ವವಿದ್ಯಾನಿಲಯದ) ಪದವಿ ಪಡೆ; ಪದವಿ ತೆಗೆದುಕೊ; ಪದವಿ ಸ್ವೀಕರಿಸು.
  2. (ಅಮೆರಿಕನ್‍ ಪ್ರಯೋಗ) ಶಾಲೆಯಲ್ಲಿ ಓದು ಮುಗಿಸಿದುದರ ಪ್ರಮಾಣಪತ್ರ, ಸರ್ಟಿಹಿಕೇಟು ತೆಗೆದುಕೊ.
  3. (ರೂಪಕ) ಅರ್ಹತೆ, ಯೋಗ್ಯತೆ, ದಕ್ಷತೆ ಸಂಪಾದಿಸಲು ಶಿಕ್ಷಣ ಯಾ ತರಪೇತಿ ಹೊಂದು: graduate as a saint ಸಂತನಾಗಲು ಶಿಕ್ಷಣ ಪಡೆ, ತರಬೇತಿ ಹೊಂದು.
  4. (ವಿಶೇಷವಾಗಿ ಭೂವಿಜ್ಞಾನ, ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನಗಳಲ್ಲಿ) ಕ್ರಮಕ್ರಮವಾಗಿ ಮಾರ್ಪಡು; ಕ್ರಮೇಣ ಬದಲಾವಣೆಯಾಗು; ಸ್ವಲ್ಪಸ್ವಲ್ಪವಾಗಿ ಬದಲಾಯಿಸು: sandstone graduates into the inferior conglomerates ಮರಳುಗಲ್ಲು ಕ್ರಮೇಣ ಕೀಳುದರ್ಜೆಯ ಚೂರುಗಲ್ಲುಂಡೆಗಳಾಗಿ ಬದಲಾವಣೆಯಾಗುತ್ತದೆ.
  5. (ಕೆಲಸಕಾರ್ಯ ಮೊದಲಾದವುಗಳಲ್ಲಿ) ಉತ್ಕರ್ಷ ಪಡೆ; ಮೇಲಿನ ಸ್ತರಕ್ಕೆ ಏರು; ಉನ್ನತಿ ಸಾಧಿಸು; ಉತ್ತಮ ಮಟ್ಟ ತಲುಪು.