See also 2good  3good
1good ಗುಡ್‍
ಗುಣವಾಚಕ
( ತರರೂಪ better, ತಮರೂಪ best).
  1. ಚೆನ್ನಾದ; ಒಳ್ಳೆಯ; ಉತ್ತಮ; ತೃಪ್ತಿಕರವಾದ; ಸಮರ್ಪಕವಾದ; ಹದವಾದ; ತಕ್ಕ; ಉಚಿತ; ಯೋಗ್ಯ; ಅಪೇಕ್ಷಿತ – ಗುಣಗಳುಳ್ಳ, ಲಕ್ಷಣಗಳುಳ್ಳ: a good fire ಹದವಾದ ಬೆಂಕಿ; ಅತಿ ಸಣ್ಣದಾಗಲಿ, ಕ್ಷೀಣವಾಗಲಿ ಅಲ್ಲದ ಉರಿ. good health ಉತ್ತಮ ಆರೋಗ್ಯ; ನೀರೋಗತೆ; ರೋಗವಿಲ್ಲದಿರುವಿಕೆ. meat keeps good ಮಾಂಸ ಕೆಡದೆ ಒಳ್ಳೆಯ ಸ್ಥಿತಿಯಲ್ಲಿರುತ್ತದೆ. good soil ಒಳ್ಳೆಯ ನೆಲ; ಫಲವತ್ತಾದ ಜಈನು. good theatre ಉತ್ತಮ ರಂಗ; ನಿರ್ದಿಷ್ಟ ಮಾಧ್ಯಮಕ್ಕೆ ಒಪ್ಪುವ ಮನರಂಜನೆ ಮೊದಲಾದವು.
  2. ತಕ್ಕಷ್ಟು; ಸಾಕಷ್ಟು; ಸಾಕಾಗುವಷ್ಟು; ಅಪೇಕ್ಷಿತವಾದಷ್ಟು: a good amount ಸಾಕಾಗುವಷ್ಟು ಪ್ರಮಾಣ.
  3. (ಬರಿಯ ಸಾಂಪ್ರದಾಯಿಕ ವಿಶೇಷಣವಾಗಿ) ಒಳ್ಳೆಯ; ಸುಂದರ: the good town of India ಭಾರತದ ಸುಂದರ ಪಟ್ಟಣ.
  4. ಸಾಧು; ಊರ್ಜಿತ; ನ್ಯಾಯಸಮ್ಮತ; ಲೋಕಸಮ್ಮತ: good law ಸಾಧುವಾದ ಶಾಸನ; ನ್ಯಾಯಸಮ್ಮತವಾದ ಕಾನೂನು, ಕಾಯಿದೆ.
  5. ಚೆನ್ನಾದ; ಸೊಗಸಾದ; ರುಚಿಯಾದ: is good eating ತಿನ್ನಲು ಸೊಗಸಾದದ್ದು. ರುಚಿಯಾದದ್ದು.
  6. ಮೆಚ್ಚತಕ್ಕ; ಸ್ತುತ್ಯರ್ಹ; ಸ್ತೋತ್ರಾರ್ಹ; ಪ್ರಶಂಸಾರ್ಹ; ಶ್ಲಾಘನೀಯ; ಶ್ಲಾಘ್ಯ; ಹಿರಿಮೆವೆತ್ತ; ಶ್ರೇಷ್ಠ: good men and true ಹಿರಿಮೆವೆತ್ತ ನೆಚ್ಚಿನ ಜನ; ಶ್ರೇಷ್ಠರೂ ಸತ್ಯಸಂಧರೂ ಆದ ಜನ.
  7. ಸುಂದರ; ಆಕರ್ಷಕವಾದ; ಮಾಟವಾದ: a good leg ಮಾಟವಾದ ಕಾಲು. a good figure ಸುಂದರವಾದ ಆಕೃತಿ; ಮಾಟವಾದ ಮೈ.
  8. (ಆಡುಮಾತು) (ಪ್ರಶಂಸಾರ್ಥಕ) ಖುಷಿಯಾದ; ಮೋಜಾದ: good old days ಹಿಂದಿನ ಆ ದಿನಗಳು, ಖುಷಿಯಾದ ದಿನಗಳು; ಹಿಂದಿನ ಮೋಜಾದ ಕಾಲ!; ಒಳ್ಳೆಯ ಹಳೇ ಕಾಲ.
  9. ಭರ್ಜರಿ: that’s a good un! (ಅಶಿಷ್ಟ) ಭರ್ಜರಿ ಸುಳ್ಳು!
  10. (ಸಂಬೋಧನೆಯಲ್ಲಿ)
    1. ವಿನಯಸೂಚಕವಾಗಿ ಬಳಸುವ ಪದ: my good friend ಒಲವಿನ ಗೆಳೆಯ; ಪ್ರಿಯ ಮಿತ್ರ; ನಲ್ಮೆಯ ನೇಹಿಗ.
    2. ತನ್ನ ದೊಡ್ಡಸ್ತಿಕೆ ಸೂಚಿಸುತ್ತ ದೊಡ್ಡ ಅನುಗ್ರಹ ಮಾಡುತ್ತಿರುವಂತೆ ತೋರಿಸಿಕೊಳ್ಳುವಾಗ ಬಳಸುವ ಪದ: my good man! ಅಯ್ಯಾ ದೊರೆ! ಓ ತಮ್ಮ!
    3. ಕಪಟ ವಿನಯ ಇಲ್ಲವೆ ನ್ಯಾಯವಾದ ಕೋಪ ತೋರಿಸುವಾಗ ಬಳಸುವ ಪದ: my good sir ಮಾನ್ಯರೆ; ಮಹಾಶಯರೆ; ಮಹಾಸ್ವಾಮಿ; ಮಹನೀಯರೆ.
    4. ವಿನಯಸೂಚಕ ಯಾ ತಿರಸ್ಕಾರ ಮಿಶ್ರವಾದ ಔಪಚಾರಿಕ ವರ್ಣನೆಯಲ್ಲಿ ಬಳಸುವ ಪದ: your good lady ತಮ್ಮ ಕುಟುಂಬ, ಸಂಸಾರ; ತಮ್ಮ ಧರ್ಮಪತ್ನಿಯವರು. your good man ನಿಮ್ಮ ಯಜಮಾನರು. the good man ಆ ಸಂಭಾವಿತ; ಆ ಗೃಹಸ್ಥ.
  11. ಒಳ್ಳೆಯ; ಉತ್ತಮ; ಉತ್ಕೃಷ್ಟ; ಶ್ರೇಷ್ಠ; ಕುಲೀನ: of good family ಒಳ್ಳೆಯ ಮನೆತನದಲ್ಲಿ ಹುಟ್ಟಿದ; ಸದ್ವಂಶದ ಉತ್ಕೃಷ್ಟ ಕುಲದ.
  12. ಸರಿಯಾದ; ಒಳ್ಳೆಯ; ಉಚಿತ; ಸಾಧು; ಸೂಕ್ತ; ಯುಕ್ತ; ವಿಹಿತ; ಸಮಯೋಚಿತ: I think, it is good to do ಅದನ್ನು ಮಾಡುವುದು ಸರಿಯೆಂದು, ಸೂಕ್ತವೆಂದು, ನನಗನಿಸುತ್ತದೆ. it is good that you came ನೀನು ಬಂದದ್ದು ಒಳ್ಳೆಯದಾಯಿತು. it is good to be here ಇಲ್ಲಿರುವುದು ಸಮಯೋಚಿತವಾಗಿದೆ.
  13. (ಮೆಚ್ಚಿಕೆ ಯಾ ಸಮ್ಮತಿ ಸೂಚಿಸುವ ಉದ್ಗಾರವಾಗಿ) ಭಲೆ! ಭೇಷ್‍ ಭೇಷ್‍! ಶಾಹಭಾಸ್‍! ಒಳ್ಳೆಯದು! ಸರಿ!
  14. ನೈತಿಕವಾಗಿ ಒಳ್ಳೆಯ; ಧಾರ್ಮಿಕ; ಸದ್ಗುಣದ; ಸನ್ನಡತೆಯ: do one’s good deed for the day ದಿನದ ಒಳ್ಳೆಯ ಕೆಲಸ ಮಾಡು. good works ಸತ್ಕಾರ್ಯಗಳು; ದಾನಧರ್ಮಗಳು.
  15. ದಯೆಯಿಂದ ಕೂಡಿದ; ಕರುಣೆಯಿಂದ ಕೂಡಿದ; ಒಳ್ಳೆಯತನದಿಂದ ಕೂಡಿದ; ಸದ್ಭಾವದ; ಉಪಕಾರ ಸ್ವಭಾವದ; ಉಪಕಾರಿಯಾದ: did me a good deed ನನಗೊಂದು ಉಪಕಾರ ಮಾಡಿದ. has always been good to me ನನ್ನ ವಿಷಯದಲ್ಲಿ ಯಾವಾಗಲೂ ಕರುಣೆಯಿಂದ, ಸದ್ಭಾವನೆಯಿಂದ ಇದ್ದಾನೆ.
  16. (ದೇವರ ವಿಷಯದಲ್ಲಿ) ಪ್ರಾರ್ಥನೆಗಳಲ್ಲಿ, ಆಶ್ಚರ್ಯಸೂಚಕ ಉದ್ಗಾರಗಳು, ಮೊದಲಾದವುಗಳಲ್ಲಿ ಬಳಸುವ ಪದ: thou great and good, thou art my father and my God! ಓ ಮಹಾಮಹಿಮ! ಓ ಕರುಣಾಳು! ನೀನೇ ನನ್ನ ತಂದೆ, ನೀನೇ ನನ್ನ ದೈವ! good God! good heavens! good gracious! ಅಯ್ಯೋ ದೇವರೆ! ಅಯ್ಯೋ ಭಗವಂತ!
  17. (ಮುಖ್ಯವಾಗಿ ಮಗುವಿನ ವಿಷಯದಲ್ಲಿ) ಒಳ್ಳೆಯ (ನಡವಳಿಕೆಯುಳ್ಳ); ಸದ್ವರ್ತನೆಯುಳ್ಳ; ತೊಂದರೆಕೊಡದ: as good as gold ಚಿನ್ನದಂಥ; ಹೇಳಿದಂತೆ ಕೇಳುವ.
  18. ಒಳ್ಳೆಯ; ಸಂತೋಷದ; ಸಂತೋಷಕರ; ಆನಂದದಾಯಕ; ತೃಪ್ತಿಕರ; ಹಿತವಾದ; ಶುಭದ: good news ಸಂತೋಷದ ಸುದ್ದಿ; ಶುಭವಾರ್ತೆ. it is good to be alive ಬದುಕಿರುವುದು ಒಳ್ಳೆಯದು.
  19. ಅನುಕೂಲವಾದ; ಪ್ರಯೋಜನಕರವಾದ.
  20. ಸುಗಮ; ಸುಸೂತ್ರ; ಸುಮುಖ; ಸಲೀಸು; ಸರಾಗ: things are in good train ಎಲ್ಲ ಕೆಲಸಗಳೂ ಸುಗಮವಾದ ರೀತಿಯಲ್ಲಿ ನಡೆದುಕೊಂಡು ಹೋಗುತ್ತಿವೆ.
  21. ಒಬ್ಬರನ್ನೊಬ್ಬರು ಕಂಡಾಗ ಮತ್ತು ಬಿಟ್ಟು ಹೋಗುವಾಗ ಔಪಚಾರಿಕ ಶುಭಾಶಯ ಕೋರುವಾಗ ಬಳಸುವ ಪದ: good morning ಸುಪ್ರಭಾತ.
  22. ಖುಷಿಯಾದ; ಮಜಾಮಾಡುವ: have a good time ಖುಷಿಯಾಗಿರು; ಮಜಾಮಾಡು.
  23. ಹಾಯಾದ; ಸುಖವಾದ: have a good night ಚೆನ್ನಾಗಿ ನಿದ್ದೆ ಮಾಡು; ರಾತ್ರಿ ಹಾಯಾದ ನಿದ್ರೆ ಬರಲಿ.
  24. ಒಳ್ಳೆಯ; ಹಿತವಾದ; ಪ್ರಶಸ್ತ: a good saying ಸೂಕ್ತಿ; ಹಿತವಚನ; ಒಳ್ಳೆಯ, ಪ್ರಶಸ್ತವಾದ ಗಾದೆ ಯಾ ವಚನ.
  25. ಆಹ್ಲಾದಕರ; ಮನೋರಂಜಕ: as good as a play ಒಂದು ನಾಟಕದಂತೆಯೇ, ನಾಟಕದಷ್ಟೇ ಮನೋರಂಜಕವಾದ.
  26. ಗುಣಕಾರಿ: oil is good for burns ಸುಟ್ಟ ಗಾಯಗಳಿಗೆ ತೈಲ ಗುಣಕಾರಿ, ಒಳ್ಳೆಯದು.
  27. ಆರೋಗ್ಯಕರ: are acorns good to eat? ಓಕ್‍ ಹಣ್ಣುಗಳು ತಿನ್ನಲು ಆರೋಗ್ಯಕರವೇ? beer is not good for him (or for his health) ಬಿಯರ್‍ ಅವನಿಗೆ (ಅಥವಾ ಅವನ ಆರೋಗ್ಯಕ್ಕೆ) ಒಳ್ಳೆಯದಲ್ಲ.
  28. ಹಿತ; ಶ್ರೇಯಸ್ಕರ.
  29. (ವ್ಯಕ್ತಿಗಳ ವಿಷಯದಲ್ಲಿ) ಒಳ್ಳೆಯ; ಕುಶಲ; ನಿಪುಣ: a good driver ದಕ್ಷ ಚಾಲಕ. a good actor ಒಳ್ಳೆಯ ನಟ. good English ಸರಿಯಾದ ಇಂಗ್ಲಿಷ್‍. good at describing ವರ್ಣನೆ ಮೊದಲಾದವನ್ನು ಮಾಡುವುದರಲ್ಲಿ ನಿಪುಣ.
  30. ಒಳ್ಳೆಯ; ತಕ್ಕ; ಸದೃಶ; ಸರಿಯಾದ; ಯೋಗ್ಯ; ಒಂದು ಉದ್ದೇಶಕ್ಕೆ ಅನುಗುಣವಾದ, ಅನುರೂಪವಾದ: has been a good wife to him ಅವನಿಗೆ ಒಳ್ಳೆಯ, ಅನುರೂಪಳಾದ ಹೆಂಡತಿಯಾಗಿದ್ದಾಳೆ.
  31. ನೆಚ್ಚಬಹುದಾದ; ನಂಬಿಕೆಗೆ ಅರ್ಹವಾದ; ವಿಶ್ವಾಸಾರ್ಹ: a good customer ನೆಚ್ಚಬಹುದಾದ ವ್ಯಕ್ತಿ; ವಿಶ್ವಾಸಾರ್ಹ ಗಿರಾಕಿ.
  32. (ಹಣಕಾಸಿನಲ್ಲಿ) ಭದ್ರವಾದ; ಗಟ್ಟಿಯಾದ; ಸಲ್ಲಿಸಬೇಕಾದುದನ್ನೆಲ್ಲ ಸಲ್ಲಿಸಬಲ್ಲ; ಸುರಕ್ಷಿತ; ಖಾತರಿಯಾದ: good debts ಖಾತರಿ (ವಸೂಲಿಯ) ಸಾಲಗಳು; ಖಂಡಿತ ವಾಪಸಾಗುವ ಭರವಸೆಯಿರುವ ಸಾಲಗಳು.
  33. ಗಟ್ಟಿ; ಸುಭದ್ರ; ಶಕ್ತ: a good life ಗಟ್ಟಿ ಆಯುಸ್ಸು, ಆಯುರ್ದಾಯ; ದೀರ್ಘಕಾಲ ಬದುಕಬಲ್ಲ ಬಾಳು; ವಿಮೆ ಮೊದಲಾದವುಗಳ ಕಚೇರಿ ಅಂಗೀಕರಿಸುವಂಥ ಆಯುಸ್ಸು.
  34. ಬಲವಾದ; ಒಳ್ಳೆಯ; ಚಲೋ: gave her a good beating ಅವಳಿಗೆ ಒಳ್ಳೆಯ, ಚಲೋ ಹೊಡೆತ ಕೊಟ್ಟ.
  35. ಸಾಧುವಾದ; ಸರಿಯಾದ; ಯುಕ್ತವಾದ; ಸಮರ್ಥನೀಯವಾದ; ಸಮಂಜಸವಾದ; ಅನ್ವಯಿಸುವ: did it for good reasons ಸಮಂಜಸವಾದ ಕಾರಣಗಳಿಗಾಗಿ ಅದನ್ನು ಮಾಡಿದ. rule holds good ನಿಯಮವು ಅನ್ವಯಿಸುತ್ತದೆ.
  36. ಸರಿಯಾದ; ಸಕಾರಣವಾದ: a good excuse ಸಕಾರಣವಾದ ನೆವ. (ಆಡುಮಾತು) is a good bit better ತಕ್ಕಷ್ಟು ವಾಸಿ; ಸ್ವಲ್ಪ ವಾಸಿ.
  37. ತವಕಿಸುವ; ಆತುರಪಡುವ; ತ್ವರೆಮಾಡುವ; ತ್ವರೆಪಡುವ: have a good mind (ಯಾವುದನ್ನೇ ಮಾಡಲು) ಮನಸ್ಸು ತವಕಿಸುತ್ತಿರು.
  38. (ಹಲವೊಮ್ಮೆ ಗುಣವಾಚಕಗಳ ಹಿಂದೆ ಆಧಿಕ್ಯವಾಚಕವಾಗಿ) ತಕ್ಕಷ್ಟು; ಸಾಕಷ್ಟು: went a good round pace ತಕ್ಕಷ್ಟು ದೂರ ನಡೆದ. will take a good long time ಸಾಕಷ್ಟು ಹೆಚ್ಚು ಕಾಲ ಹಿಡಿಯುತ್ತದೆ.
  39. ಕಡಿಮೆಯಿಲ್ಲದ: played for a good hour ಒಂದು ಗಂಟೆಗೆ ಕಡಿಮೆಯಿಲ್ಲದೆ ಆಡಿದ. it is a good three miles from the station ನಿಲ್ದಾಣದಿಂದ ಇಲ್ಲಿಗೆ ಮೂರು ಮೈಲಿಗೆ ಕಡಿಮೆಯೇನೂ ಇಲ್ಲ.
  40. (ಸಂಖ್ಯೆ, ಪ್ರಮಾಣ, ಮೊದಲಾದವುಗಳಲ್ಲಿ) ಹೇರಳ; ಯಥೇಚ್ಛ; ಸಾಕಷ್ಟು ಹೆಚ್ಚಿನ: a good deal of money ಸಾಕಷ್ಟು ಹೆಚ್ಚಿನ ಹಣ. a good many people ಹೇರಳವಾದ ಜನ. we have come a good way ನಾವು ಬಹಳ ಯಾ ಸಾಕಷ್ಟು ದೂರ ಬಂದಿದ್ದೇವೆ.
ಪದಗುಚ್ಛ
  1. as good as ವಸ್ತುತ: ವಾಸ್ತವವಾಗಿ: he as good as told me so ನನಗವನು ವಸ್ತುತಃ ಹಾಗೆ ಹೇಳಿದನೆಂದೇ ಎನ್ನಬೇಕು. as good as dead ಸತ್ತಂತೆಯೇ. it is as good as done ಅದು ಆದಂತೆಯೇ; ಮುಗಿದಂತೆಯೇ.
  2. be good enough to do ದಯವಿಟ್ಟು ಮಾಡು; ಮಾಡುವಷ್ಟು ಒಳ್ಳೆಯ ಮನಸ್ಸು ಮಾಡು.
  3. be so good as to do = ಪದಗುಚ್ಛ \((2)\).
  4. good for an amount
    1. ಹಣಕ್ಕೆ ಖಾತರಿಯುಳ್ಳ; ಹಣ ಕೊಡುವನೆಂದು ಧೈರ್ಯವಾಗಿ ನಂಬಬಹುದಾದ.
    2. (ಹುಂಡಿ ಮೊದಲಾದವುಗಳ ವಿಷಯದಲ್ಲಿ)-ಅಷ್ಟು ಹಣಕ್ಕಾಗಿ ಬರೆದ.
  5. good for you (him etc.) (ಆಡುಮಾತು) (ಸಂಬೋಧಿತ ವ್ಯಕ್ತಿ ಯಾ ಸದರಿ ವ್ಯಕ್ತಿಯು ಹೇಳಿದ್ದನ್ನು ಯಾ ಮಾಡಿದ್ದನ್ನು ಒಪ್ಪುವಲ್ಲಿ ಹೇಳುವ ಉದ್ಗಾರ) (ನೀನು ಮಾಡಿದ್ದು) ಒಳ್ಳೆಯದಾಯಿತು! ಸರಿ ಹೋಯಿತು! ಸರಿಯಾಗಿದೆ!
  6. good (old) man ಭೇಷ್‍! (ಒಪ್ಪಿಗೆ ಸೂಚಿಸುವ ಉದ್ಗಾರ).
  7. good money ಹೆಚ್ಚಿನ ಕೂಲಿ.
  8. good o’n you (him, etc.) (ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍) = ಪದಗುಚ್ಛ \((5)\).
  9. good times ಒಳ್ಳೆಯ ಕಾಲ; ಉಚ್ಛ್ರಾಯದ ಅವಧಿ; ಸಿರಿಗಾಲ; ಸಮೃದ್ಧಿಯ ಕಾಲ.
  10. how good of you! ನೀವೆಷ್ಟು ಒಳ್ಳೆಯವರು! ತಮ್ಮದು ಎಷ್ಟು ದೊಡ್ಡ ಉಪಕಾರ! ಎಂಥ ಮಹೋಪಕಾರ!
  11. in good spirits ಗೆಲುವಿನಿಂದ; ಉಲ್ಲಾಸದಿಂದ.
  12. in good time ಸಕಾಲದಲ್ಲಿ; ತಡವಾಗಿರದೆ; ವಿಳಂಬ ಮಾಡಿರದೆ.
  13. not good enough (ಆಡುಮಾತು) (ಮಾಡಲು, ಅಂಗೀಕರಿಸಲು) ತಕ್ಕಷ್ಟು – ಯೋಗ್ಯವಾಗಿಲ್ಲ, ಅರ್ಹವಾಗಿಲ್ಲ, ತೃಪ್ತಿಕರವಾಗಿಲ್ಲ; ಶ್ರಮಕ್ಕೆ ಸರಿಸಮವಾದದ್ದಲ್ಲ.
  14. the good people ಫೇರಿಗಳು; ಕಿರುಕಿನ್ನರಿಯರು; ಅತಿಪುಟ್ಟ ಅತಿಮಾನುಷ ವ್ಯಕ್ತಿಗಳು.
ನುಡಿಗಟ್ಟು
  1. a good one (ಅಶಿಷ್ಟ)
    1. ನಂಬಲಸಾಧ್ಯವಾದ ಸುಳ್ಳು ಯಾ ಅತಿಶಯೋಕ್ತಿ.
    2. ಭರ್ಜರಿ ಜೋಕು ಮೊದಲಾದವು.
  2. all in good time ಸಕಾಲದಲ್ಲಿ; ವಿಹಿತಕಾಲದಲ್ಲಿ; ಆಗಬೇಕಾದ ಕಾಲದಲ್ಲಿ; ಮುಂದೆ, ಭವಿಷ್ಯದಲ್ಲಿ, ಆದರೆ ಆತುರವಿಲ್ಲದೆ, ಅವಸರವಿಲ್ಲದೆ.
  3. do me a good turn (or office) ನನಗೊಂದು ಉಪಕಾರ, ಸಹಾಯ ಮಾಡು.
  4. feel good ಉಲ್ಲಾಸದಿಂದಿರು.
  5. good at (ಯಾವುದೇ ವಿಷಯದಲ್ಲಿ) ಸಮರ್ಥ; ದಕ್ಷ; ಗಟ್ಟಿಗ; ಕುಶಲ; ನಿಪುಣ; ಶಕ್ತ: good at cricket ಕ್ರಿಕೆಟ್ಟಿನಲ್ಲಿ ಗಟ್ಟಿಗ.
  6. good for
    1. ಇಷ್ಟವುಳ್ಳ; ಮನಸ್ಸುಳ್ಳ.
    2. ಶಕ್ತಿಯುಳ್ಳ; ಸಾಮರ್ಥ್ಯವುಳ್ಳ: good for a ten mile walk ಹತ್ತು ಮೈಲಿ ನಡೆಯಲು ಇಷ್ಟವುಳ್ಳ, ಸಾಮರ್ಥ್ಯವುಳ್ಳ.
  7. have a good mind to ಮಾಡಲು ಮನಸ್ಸು ಆತುರವಾಗಿರು, ತವಕಿಸುತ್ತಿರು.
  8. make good
    1. ಪರಿಹಾರ ಕೊಡು; ನಷ್ಟತುಂಬು, ಕಟ್ಟಿಕೊಡು.
    2. (ಖರ್ಚುವೆಚ್ಚವನ್ನು) ಪಾವತಿ ಮಾಡು; ಸಲ್ಲಿಸು; ತೆರು.
    3. (ಕೊಟ್ಟ ಮಾತನ್ನು, ವಾಗ್ದಾನವನ್ನು) ಪಾಲಿಸು; ನಡೆಸು; ನೆರವೇರಿಸು.
    4. (ಉದ್ದೇಶವನ್ನು, ಉದ್ದಿಷ್ಟ ಕಾರ್ಯವನ್ನು) ಸಾಧಿಸು; ಪೂರೈಸು.
    5. (ಹೇಳಿಕೆಯನ್ನು, ಮಾತನ್ನು) ಮಾಡಿ ತೋರಿಸು.
    6. (ಆಪಾದನೆಯನ್ನು, ಆರೋಪವನ್ನು) ರುಜುವಾತು ಮಾಡಿಕೊಡು; ಪ್ರಮಾಣೀಕರಿಸು.
    7. (ಸ್ಥಾನವನ್ನು) ಪಡೆದು ದಕ್ಕಿಸಿಕೊ; ವಶದಲ್ಲಿಟ್ಟುಕೊಂಡಿರು; ಗಳಿಸಿ ದಕ್ಕಿಸಿಕೊ.
    8. (ಕಳೆದುಹೋದ ವಸ್ತುವಿಗೆ) ಪ್ರತಿಯಾಗಿ (ಇನ್ನೊಂದನ್ನು) ಕೊಡು; ಬದಲಿ ಕೊಡು.
    9. (ಒಡೆದುಹೋದ ಯಾ ಹಾನಿಗೊಳಗಾದ ವಸ್ತುವನ್ನು) ಸರಿಪಡಿಸು.
    10. (ಅಕರ್ಮಕ ಪ್ರಯೋಗ) ಯತ್ನಿಸಿದ್ದನ್ನು ಸಾಧಿಸು.
  9. put in a good word for = ನುಡಿಗಟ್ಟು \((10)\).
  10. say a good word for
    1. (ಒಬ್ಬನಿಗಾಗಿ, ಒಬ್ಬನ ಪರ) ಒಂದು ಒಳ್ಳೆಯ ಮಾತು ಹೇಳು; ಶಿಫಾರಸು ಮಾಡು.
    2. (ಒಬ್ಬನ ಪರ) ವಾದಿಸು; ವಕಾಲತ್ತು ವಹಿಸು.
  11. take in good part ನಿನ್ನ ಹಿತಕ್ಕಾಗಿಯೇ ಎಂದು ತಿಳಿ; ಅಸಮಾಧಾನಪಟ್ಟುಕೊಳ್ಳಬೇಡ; ಕೋಪಿಸಿಕೊಳ್ಳಬೇಡ.
See also 1good  3good
2good ಗುಡ್‍
ಕ್ರಿಯಾವಿಶೇಷಣ

(ಆಡುಮಾತು) (ಅಮೆರಿಕನ್‍ ಪ್ರಯೋಗ) ಚೆನ್ನಾಗಿ; ಸರಿಯಾಗಿ; ಸುಖವಾಗಿ: doing pretty good ತುಂಬ ಚೆನ್ನಾಗಿ ಇದ್ದಾನೆ.

ನುಡಿಗಟ್ಟು

good and (ಆಡುಮಾತು) ತುಂಬ; ಸಖತ್‍; ಬಹಳ: raining good and hard ಮಳೆ ಬಹಳ ಜೋರಾಗಿ ಹೊಡೆಯುತ್ತಿದೆ. (ಅಮೆರಿಕನ್‍ ಪ್ರಯೋಗ) I was good and angry ನಾನು ಸಖತ್‍ ಕೋಪದಲ್ಲಿದ್ದೆ.

See also 1good  2good
3good ಗುಡ್‍
ನಾಮವಾಚಕ
  1. (ಬಹುವಚನವಾಗಿ) ಒಳ್ಳೆಯವರು; ಸದ್ಗುಣಿಗಳು; ಸುಗುಣಿಗಳು; ಸತ್ಪುರುಷರು; ಸಜ್ಜನರು: the good and the bad alike respect him ಒಳ್ಳೆಯವರೂ ಕೆಟ್ಟವರೂ ಅವನನ್ನು ಒಂದೇ ರೀತಿಯಾಗಿ ಗೌರವಿಸುತ್ತಾರೆ.
  2. ನೈತಿಕವಾಗಿ ಒಳ್ಳೆಯದು; ಒಳಿತು; ಒಳ್ಪು; ಮಂಗಳ; ಶ್ರೇಯಸ್ಸು; ಶುಭ: is a power for good ಒಳ್ಳೆಯದನ್ನು ಮಾಡುವ ಶಕ್ತಿ; ಶುಭಕಾರಕ ಶಕ್ತಿ.
  3. ಸೌಖ್ಯ; ಹಿತ; ಕ್ಷೇಮ: deceive him for his good ಅವನ ಹಿತಕ್ಕಾಗಿಯೇ ಅವನನ್ನು ವಂಚಿಸು.
  4. ಲಾಭ; ಫಾಯಿದೆ; ಪ್ರಯೋಜನ; ಫಲ: what good will it do? ಅದರಿಂದೇನು ಲಾಭ?, ಫಲ?
  5. ದಯೆ; ಉಪಕಾರ; ಸಹಾಯ.
  6. ಪುರುಷಾರ್ಥ:
    1. ಬಯಸಬಹುದಾದ, ಅಪೇಕ್ಷಣೀಯವಾದ – ಗುರಿ ಯಾ ಉದ್ದೇಶ.
    2. ಪಡೆಯಲು, ಸಾಧಿಸಲು – ಯೋಗ್ಯವಾದ ವಸ್ತು.
  7. (ಬಹುವಚನದಲ್ಲಿ) ಚರ ಆಸ್ತಿ; ಜಿಂದಗಿ.
  8. (ಬಹುವಚನದಲ್ಲಿ) ವ್ಯಾಪಾರದ ಸರಕುಗಳು; ಮಾಲುಗಳು; ಸಾಮಾನು ಸರಂಜಾಮುಗಳು.
  9. (ಬ್ರಿಟಿಷ್‍ ಪ್ರಯೋಗ) (ಬಹುವಚನದಲ್ಲಿ) (ಆಡುಮಾತು) ಸಾಗಣೆ ಯಾ ಸಾಗಾವಣೆ ಸರಕುಗಳು; ರೈಲು ಮೊದಲಾದವುಗಳಲ್ಲಿ ಸಾಗಿಸುವ ಸಾಮಾನುಗಳು, ಸರಕುಗಳು: goods train ಸಾಮಾನಿನ ರೈಲು.
  10. (ಬಹುವಚನದಲ್ಲಿ) (ಆಡುಮಾತು) ಸಾಮಾನು ಸರಂಜಾಮು; ಸರಕು ಸಾಮಗ್ರಿ; ಒದಗಿಸಲು ಒಪ್ಪಿದ ಸರಕು, ಸಾಮಾನು ಸರಂಜಾಮುಗಳು: deliver the goods ಸರಕು ಒದಗಿಸು (ರೂಪಕವಾಗಿ ಸಹ.)
ಪದಗುಚ್ಛ
  1. to the good ನಿವ್ವಳ ಲಾಭದ, ಉಳಿತಾಯದ, ಹೆಚ್ಚಳದ – ಕಡೆಗೆ (ಇರು); ನಿವ್ವಳ ಲಾಭ (ಹೊಂದಿರು): we were Rs. 50 to the good ನಾವು 50 ರೂಪಾಯಿ ಲಾಭ ಪಡೆದಿದ್ದೆವು.
  2. by goods ಸಾಮಾನಿನ ರೈಲಿನಲ್ಲಿ.
  3. do good (to)
    1. ದಯೆ ತೋರು.
    2. ಒಳಿತನ್ನು ಮಾಡು; ದಾನಧರ್ಮ ಮಾಡು.
    3. ಸಹಾಯ ಮಾಡು; ಉಪಕಾರ ಮಾಡು.
  4. in good (with) (ಆಡುಮಾತು) (ಒಬ್ಬರೊಡನೆ) ಒಳ್ಳೆಯ ಸಂಬಂಧದಲ್ಲಿ.
  5. the good ಒಳ್ಳೆಯವರು; ಗುಣವಂತರು; ಸಜ್ಜನರು.
  6. what good is it? = ಪದಗುಚ್ಛ \((7)\).
  7. what is the good of it? ಅದರಿಂದೇನು ಪ್ರಯೋಜನ, ಫಲ?
ನುಡಿಗಟ್ಟು
  1. be any good ಏನಾದರೂ ಪ್ರಯೋಜನವಾಗು.
  2. be much good ತುಂಬಾ ಪ್ರಯೋಜನವಾಗು.
  3. be no good ಏನೇನೂ ಪ್ರಯೋಜನವಾಗದಿರು; ನಿಷ್ಪ್ರಯೋಜಕವಾಗಿರು.
  4. be some good ಅಲ್ಪಸ್ವಲ್ಪ ಪ್ರಯೋಜನವಾಗು.
  5. come to good ಒಳ್ಳೆಯದಾಗು; ಒಳ್ಳೆಯ, ಉತ್ತಮ – ಫಲ ಕೊಡು; ಸತ್ಪರಿಣಾಮವಾಗು.
  6. come to no good ಸತ್ಪರಿಣಾಮ ನೀಡದಿರು.
  7. to deliver the goods ಒಪ್ಪಿದ, ಪಣತೊಟ್ಟ ಕೆಲಸವನ್ನು ಮಾಡು; ನಿರೀಕ್ಷೆಯ ಮಟ್ಟಕ್ಕೆ ಬರು.
  8. for good (and all) ಶಾಶ್ವತವಾಗಿ; ಕಡೆಯದಾಗಿ; ಕೊನೆಯದಾಗಿ; ಅಂತಿಮವಾಗಿ; ಆಖೈರಾಗಿ: we decided to settle there for good ನಾವು ಅಲ್ಲೇ ಶಾಶ್ವತವಾಗಿ ನೆಲೆಸಲು ತೀರ್ಮಾನಿಸಿದೆವು.
  9. is after no good ಅವನು ಏನೋ ಅನರ್ಥ ಮಾಡುತ್ತಿದ್ದಾನೆ.
  10. is upto no good = ನುಡಿಗಟ್ಟು \((1)\).
  11. no good ಏನೋ ಕೇಡು; ಹಾವಳಿ; ಅನರ್ಥ.
  12. piece of goods (ಹಾಸ್ಯ ಪ್ರಯೋಗ) ವ್ಯಕ್ತಿ; ಆಸಾಮಿ; ಇಸಮು: she is a lovely piece of goods ಆಕೆ ಒಳ್ಳೆ ಚೆಲುವಾದ ಇಸಮು.