1good
ಗುಡ್
ಗುಣವಾಚಕ
( ತರರೂಪ better, ತಮರೂಪ best).
- ಚೆನ್ನಾದ; ಒಳ್ಳೆಯ; ಉತ್ತಮ; ತೃಪ್ತಿಕರವಾದ; ಸಮರ್ಪಕವಾದ; ಹದವಾದ; ತಕ್ಕ; ಉಚಿತ; ಯೋಗ್ಯ; ಅಪೇಕ್ಷಿತ – ಗುಣಗಳುಳ್ಳ, ಲಕ್ಷಣಗಳುಳ್ಳ: a good fire ಹದವಾದ ಬೆಂಕಿ; ಅತಿ ಸಣ್ಣದಾಗಲಿ, ಕ್ಷೀಣವಾಗಲಿ ಅಲ್ಲದ ಉರಿ. good health ಉತ್ತಮ ಆರೋಗ್ಯ; ನೀರೋಗತೆ; ರೋಗವಿಲ್ಲದಿರುವಿಕೆ. meat keeps good ಮಾಂಸ ಕೆಡದೆ ಒಳ್ಳೆಯ ಸ್ಥಿತಿಯಲ್ಲಿರುತ್ತದೆ. good soil ಒಳ್ಳೆಯ ನೆಲ; ಫಲವತ್ತಾದ ಜಈನು. good theatre ಉತ್ತಮ ರಂಗ; ನಿರ್ದಿಷ್ಟ ಮಾಧ್ಯಮಕ್ಕೆ ಒಪ್ಪುವ ಮನರಂಜನೆ ಮೊದಲಾದವು.
- ತಕ್ಕಷ್ಟು; ಸಾಕಷ್ಟು; ಸಾಕಾಗುವಷ್ಟು; ಅಪೇಕ್ಷಿತವಾದಷ್ಟು: a good amount ಸಾಕಾಗುವಷ್ಟು ಪ್ರಮಾಣ.
- (ಬರಿಯ ಸಾಂಪ್ರದಾಯಿಕ ವಿಶೇಷಣವಾಗಿ) ಒಳ್ಳೆಯ; ಸುಂದರ: the good town of India ಭಾರತದ ಸುಂದರ ಪಟ್ಟಣ.
- ಸಾಧು; ಊರ್ಜಿತ; ನ್ಯಾಯಸಮ್ಮತ; ಲೋಕಸಮ್ಮತ: good law ಸಾಧುವಾದ ಶಾಸನ; ನ್ಯಾಯಸಮ್ಮತವಾದ ಕಾನೂನು, ಕಾಯಿದೆ.
- ಚೆನ್ನಾದ; ಸೊಗಸಾದ; ರುಚಿಯಾದ: is good eating ತಿನ್ನಲು ಸೊಗಸಾದದ್ದು. ರುಚಿಯಾದದ್ದು.
- ಮೆಚ್ಚತಕ್ಕ; ಸ್ತುತ್ಯರ್ಹ; ಸ್ತೋತ್ರಾರ್ಹ; ಪ್ರಶಂಸಾರ್ಹ; ಶ್ಲಾಘನೀಯ; ಶ್ಲಾಘ್ಯ; ಹಿರಿಮೆವೆತ್ತ; ಶ್ರೇಷ್ಠ: good men and true ಹಿರಿಮೆವೆತ್ತ ನೆಚ್ಚಿನ ಜನ; ಶ್ರೇಷ್ಠರೂ ಸತ್ಯಸಂಧರೂ ಆದ ಜನ.
- ಸುಂದರ; ಆಕರ್ಷಕವಾದ; ಮಾಟವಾದ: a good leg ಮಾಟವಾದ ಕಾಲು. a good figure ಸುಂದರವಾದ ಆಕೃತಿ; ಮಾಟವಾದ ಮೈ.
- (ಆಡುಮಾತು) (ಪ್ರಶಂಸಾರ್ಥಕ) ಖುಷಿಯಾದ; ಮೋಜಾದ: good old days ಹಿಂದಿನ ಆ ದಿನಗಳು, ಖುಷಿಯಾದ ದಿನಗಳು; ಹಿಂದಿನ ಮೋಜಾದ ಕಾಲ!; ಒಳ್ಳೆಯ ಹಳೇ ಕಾಲ.
- ಭರ್ಜರಿ: that’s a good un! (ಅಶಿಷ್ಟ) ಭರ್ಜರಿ ಸುಳ್ಳು!
- (ಸಂಬೋಧನೆಯಲ್ಲಿ)
- ವಿನಯಸೂಚಕವಾಗಿ ಬಳಸುವ ಪದ: my good friend ಒಲವಿನ ಗೆಳೆಯ; ಪ್ರಿಯ ಮಿತ್ರ; ನಲ್ಮೆಯ ನೇಹಿಗ.
- ತನ್ನ ದೊಡ್ಡಸ್ತಿಕೆ ಸೂಚಿಸುತ್ತ ದೊಡ್ಡ ಅನುಗ್ರಹ ಮಾಡುತ್ತಿರುವಂತೆ ತೋರಿಸಿಕೊಳ್ಳುವಾಗ ಬಳಸುವ ಪದ: my good man! ಅಯ್ಯಾ ದೊರೆ! ಓ ತಮ್ಮ!
- ಕಪಟ ವಿನಯ ಇಲ್ಲವೆ ನ್ಯಾಯವಾದ ಕೋಪ ತೋರಿಸುವಾಗ ಬಳಸುವ ಪದ: my good sir ಮಾನ್ಯರೆ; ಮಹಾಶಯರೆ; ಮಹಾಸ್ವಾಮಿ; ಮಹನೀಯರೆ.
- ವಿನಯಸೂಚಕ ಯಾ ತಿರಸ್ಕಾರ ಮಿಶ್ರವಾದ ಔಪಚಾರಿಕ ವರ್ಣನೆಯಲ್ಲಿ ಬಳಸುವ ಪದ: your good lady ತಮ್ಮ ಕುಟುಂಬ, ಸಂಸಾರ; ತಮ್ಮ ಧರ್ಮಪತ್ನಿಯವರು. your good man ನಿಮ್ಮ ಯಜಮಾನರು. the good man ಆ ಸಂಭಾವಿತ; ಆ ಗೃಹಸ್ಥ.
- ಒಳ್ಳೆಯ; ಉತ್ತಮ; ಉತ್ಕೃಷ್ಟ; ಶ್ರೇಷ್ಠ; ಕುಲೀನ: of good family ಒಳ್ಳೆಯ ಮನೆತನದಲ್ಲಿ ಹುಟ್ಟಿದ; ಸದ್ವಂಶದ ಉತ್ಕೃಷ್ಟ ಕುಲದ.
- ಸರಿಯಾದ; ಒಳ್ಳೆಯ; ಉಚಿತ; ಸಾಧು; ಸೂಕ್ತ; ಯುಕ್ತ; ವಿಹಿತ; ಸಮಯೋಚಿತ: I think, it is good to do ಅದನ್ನು ಮಾಡುವುದು ಸರಿಯೆಂದು, ಸೂಕ್ತವೆಂದು, ನನಗನಿಸುತ್ತದೆ. it is good that you came ನೀನು ಬಂದದ್ದು ಒಳ್ಳೆಯದಾಯಿತು. it is good to be here ಇಲ್ಲಿರುವುದು ಸಮಯೋಚಿತವಾಗಿದೆ.
- (ಮೆಚ್ಚಿಕೆ ಯಾ ಸಮ್ಮತಿ ಸೂಚಿಸುವ ಉದ್ಗಾರವಾಗಿ) ಭಲೆ! ಭೇಷ್ ಭೇಷ್! ಶಾಹಭಾಸ್! ಒಳ್ಳೆಯದು! ಸರಿ!
- ನೈತಿಕವಾಗಿ ಒಳ್ಳೆಯ; ಧಾರ್ಮಿಕ; ಸದ್ಗುಣದ; ಸನ್ನಡತೆಯ: do one’s good deed for the day ದಿನದ ಒಳ್ಳೆಯ ಕೆಲಸ ಮಾಡು. good works ಸತ್ಕಾರ್ಯಗಳು; ದಾನಧರ್ಮಗಳು.
- ದಯೆಯಿಂದ ಕೂಡಿದ; ಕರುಣೆಯಿಂದ ಕೂಡಿದ; ಒಳ್ಳೆಯತನದಿಂದ ಕೂಡಿದ; ಸದ್ಭಾವದ; ಉಪಕಾರ ಸ್ವಭಾವದ; ಉಪಕಾರಿಯಾದ: did me a good deed ನನಗೊಂದು ಉಪಕಾರ ಮಾಡಿದ. has always been good to me ನನ್ನ ವಿಷಯದಲ್ಲಿ ಯಾವಾಗಲೂ ಕರುಣೆಯಿಂದ, ಸದ್ಭಾವನೆಯಿಂದ ಇದ್ದಾನೆ.
- (ದೇವರ ವಿಷಯದಲ್ಲಿ) ಪ್ರಾರ್ಥನೆಗಳಲ್ಲಿ, ಆಶ್ಚರ್ಯಸೂಚಕ ಉದ್ಗಾರಗಳು, ಮೊದಲಾದವುಗಳಲ್ಲಿ ಬಳಸುವ ಪದ: thou great and good, thou art my father and my God! ಓ ಮಹಾಮಹಿಮ! ಓ ಕರುಣಾಳು! ನೀನೇ ನನ್ನ ತಂದೆ, ನೀನೇ ನನ್ನ ದೈವ! good God! good heavens! good gracious! ಅಯ್ಯೋ ದೇವರೆ! ಅಯ್ಯೋ ಭಗವಂತ!
- (ಮುಖ್ಯವಾಗಿ ಮಗುವಿನ ವಿಷಯದಲ್ಲಿ) ಒಳ್ಳೆಯ (ನಡವಳಿಕೆಯುಳ್ಳ); ಸದ್ವರ್ತನೆಯುಳ್ಳ; ತೊಂದರೆಕೊಡದ: as good as gold ಚಿನ್ನದಂಥ; ಹೇಳಿದಂತೆ ಕೇಳುವ.
- ಒಳ್ಳೆಯ; ಸಂತೋಷದ; ಸಂತೋಷಕರ; ಆನಂದದಾಯಕ; ತೃಪ್ತಿಕರ; ಹಿತವಾದ; ಶುಭದ: good news ಸಂತೋಷದ ಸುದ್ದಿ; ಶುಭವಾರ್ತೆ. it is good to be alive ಬದುಕಿರುವುದು ಒಳ್ಳೆಯದು.
- ಅನುಕೂಲವಾದ; ಪ್ರಯೋಜನಕರವಾದ.
- ಸುಗಮ; ಸುಸೂತ್ರ; ಸುಮುಖ; ಸಲೀಸು; ಸರಾಗ: things are in good train ಎಲ್ಲ ಕೆಲಸಗಳೂ ಸುಗಮವಾದ ರೀತಿಯಲ್ಲಿ ನಡೆದುಕೊಂಡು ಹೋಗುತ್ತಿವೆ.
- ಒಬ್ಬರನ್ನೊಬ್ಬರು ಕಂಡಾಗ ಮತ್ತು ಬಿಟ್ಟು ಹೋಗುವಾಗ ಔಪಚಾರಿಕ ಶುಭಾಶಯ ಕೋರುವಾಗ ಬಳಸುವ ಪದ: good morning ಸುಪ್ರಭಾತ.
- ಖುಷಿಯಾದ; ಮಜಾಮಾಡುವ: have a good time ಖುಷಿಯಾಗಿರು; ಮಜಾಮಾಡು.
- ಹಾಯಾದ; ಸುಖವಾದ: have a good night ಚೆನ್ನಾಗಿ ನಿದ್ದೆ ಮಾಡು; ರಾತ್ರಿ ಹಾಯಾದ ನಿದ್ರೆ ಬರಲಿ.
- ಒಳ್ಳೆಯ; ಹಿತವಾದ; ಪ್ರಶಸ್ತ: a good saying ಸೂಕ್ತಿ; ಹಿತವಚನ; ಒಳ್ಳೆಯ, ಪ್ರಶಸ್ತವಾದ ಗಾದೆ ಯಾ ವಚನ.
- ಆಹ್ಲಾದಕರ; ಮನೋರಂಜಕ: as good as a play ಒಂದು ನಾಟಕದಂತೆಯೇ, ನಾಟಕದಷ್ಟೇ ಮನೋರಂಜಕವಾದ.
- ಗುಣಕಾರಿ: oil is good for burns ಸುಟ್ಟ ಗಾಯಗಳಿಗೆ ತೈಲ ಗುಣಕಾರಿ, ಒಳ್ಳೆಯದು.
- ಆರೋಗ್ಯಕರ: are acorns good to eat? ಓಕ್ ಹಣ್ಣುಗಳು ತಿನ್ನಲು ಆರೋಗ್ಯಕರವೇ? beer is not good for him (or for his health) ಬಿಯರ್ ಅವನಿಗೆ (ಅಥವಾ ಅವನ ಆರೋಗ್ಯಕ್ಕೆ) ಒಳ್ಳೆಯದಲ್ಲ.
- ಹಿತ; ಶ್ರೇಯಸ್ಕರ.
- (ವ್ಯಕ್ತಿಗಳ ವಿಷಯದಲ್ಲಿ) ಒಳ್ಳೆಯ; ಕುಶಲ; ನಿಪುಣ: a good driver ದಕ್ಷ ಚಾಲಕ. a good actor ಒಳ್ಳೆಯ ನಟ. good English ಸರಿಯಾದ ಇಂಗ್ಲಿಷ್. good at describing ವರ್ಣನೆ ಮೊದಲಾದವನ್ನು ಮಾಡುವುದರಲ್ಲಿ ನಿಪುಣ.
- ಒಳ್ಳೆಯ; ತಕ್ಕ; ಸದೃಶ; ಸರಿಯಾದ; ಯೋಗ್ಯ; ಒಂದು ಉದ್ದೇಶಕ್ಕೆ ಅನುಗುಣವಾದ, ಅನುರೂಪವಾದ: has been a good wife to him ಅವನಿಗೆ ಒಳ್ಳೆಯ, ಅನುರೂಪಳಾದ ಹೆಂಡತಿಯಾಗಿದ್ದಾಳೆ.
- ನೆಚ್ಚಬಹುದಾದ; ನಂಬಿಕೆಗೆ ಅರ್ಹವಾದ; ವಿಶ್ವಾಸಾರ್ಹ: a good customer ನೆಚ್ಚಬಹುದಾದ ವ್ಯಕ್ತಿ; ವಿಶ್ವಾಸಾರ್ಹ ಗಿರಾಕಿ.
- (ಹಣಕಾಸಿನಲ್ಲಿ) ಭದ್ರವಾದ; ಗಟ್ಟಿಯಾದ; ಸಲ್ಲಿಸಬೇಕಾದುದನ್ನೆಲ್ಲ ಸಲ್ಲಿಸಬಲ್ಲ; ಸುರಕ್ಷಿತ; ಖಾತರಿಯಾದ: good debts ಖಾತರಿ (ವಸೂಲಿಯ) ಸಾಲಗಳು; ಖಂಡಿತ ವಾಪಸಾಗುವ ಭರವಸೆಯಿರುವ ಸಾಲಗಳು.
- ಗಟ್ಟಿ; ಸುಭದ್ರ; ಶಕ್ತ: a good life ಗಟ್ಟಿ ಆಯುಸ್ಸು, ಆಯುರ್ದಾಯ; ದೀರ್ಘಕಾಲ ಬದುಕಬಲ್ಲ ಬಾಳು; ವಿಮೆ ಮೊದಲಾದವುಗಳ ಕಚೇರಿ ಅಂಗೀಕರಿಸುವಂಥ ಆಯುಸ್ಸು.
- ಬಲವಾದ; ಒಳ್ಳೆಯ; ಚಲೋ: gave her a good beating ಅವಳಿಗೆ ಒಳ್ಳೆಯ, ಚಲೋ ಹೊಡೆತ ಕೊಟ್ಟ.
- ಸಾಧುವಾದ; ಸರಿಯಾದ; ಯುಕ್ತವಾದ; ಸಮರ್ಥನೀಯವಾದ; ಸಮಂಜಸವಾದ; ಅನ್ವಯಿಸುವ: did it for good reasons ಸಮಂಜಸವಾದ ಕಾರಣಗಳಿಗಾಗಿ ಅದನ್ನು ಮಾಡಿದ. rule holds good ನಿಯಮವು ಅನ್ವಯಿಸುತ್ತದೆ.
- ಸರಿಯಾದ; ಸಕಾರಣವಾದ: a good excuse ಸಕಾರಣವಾದ ನೆವ. (ಆಡುಮಾತು) is a good bit better ತಕ್ಕಷ್ಟು ವಾಸಿ; ಸ್ವಲ್ಪ ವಾಸಿ.
- ತವಕಿಸುವ; ಆತುರಪಡುವ; ತ್ವರೆಮಾಡುವ; ತ್ವರೆಪಡುವ: have a good mind (ಯಾವುದನ್ನೇ ಮಾಡಲು) ಮನಸ್ಸು ತವಕಿಸುತ್ತಿರು.
- (ಹಲವೊಮ್ಮೆ ಗುಣವಾಚಕಗಳ ಹಿಂದೆ ಆಧಿಕ್ಯವಾಚಕವಾಗಿ) ತಕ್ಕಷ್ಟು; ಸಾಕಷ್ಟು: went a good round pace ತಕ್ಕಷ್ಟು ದೂರ ನಡೆದ. will take a good long time ಸಾಕಷ್ಟು ಹೆಚ್ಚು ಕಾಲ ಹಿಡಿಯುತ್ತದೆ.
- ಕಡಿಮೆಯಿಲ್ಲದ: played for a good hour ಒಂದು ಗಂಟೆಗೆ ಕಡಿಮೆಯಿಲ್ಲದೆ ಆಡಿದ. it is a good three miles from the station ನಿಲ್ದಾಣದಿಂದ ಇಲ್ಲಿಗೆ ಮೂರು ಮೈಲಿಗೆ ಕಡಿಮೆಯೇನೂ ಇಲ್ಲ.
- (ಸಂಖ್ಯೆ, ಪ್ರಮಾಣ, ಮೊದಲಾದವುಗಳಲ್ಲಿ) ಹೇರಳ; ಯಥೇಚ್ಛ; ಸಾಕಷ್ಟು ಹೆಚ್ಚಿನ: a good deal of money ಸಾಕಷ್ಟು ಹೆಚ್ಚಿನ ಹಣ. a good many people ಹೇರಳವಾದ ಜನ. we have come a good way ನಾವು ಬಹಳ ಯಾ ಸಾಕಷ್ಟು ದೂರ ಬಂದಿದ್ದೇವೆ.
ಪದಗುಚ್ಛ
- as good as ವಸ್ತುತ: ವಾಸ್ತವವಾಗಿ: he as good as told me so ನನಗವನು ವಸ್ತುತಃ ಹಾಗೆ ಹೇಳಿದನೆಂದೇ ಎನ್ನಬೇಕು. as good as dead ಸತ್ತಂತೆಯೇ. it is as good as done ಅದು ಆದಂತೆಯೇ; ಮುಗಿದಂತೆಯೇ.
- be good enough to do ದಯವಿಟ್ಟು ಮಾಡು; ಮಾಡುವಷ್ಟು ಒಳ್ಳೆಯ ಮನಸ್ಸು ಮಾಡು.
- be so good as to do = ಪದಗುಚ್ಛ \((2)\).
- good for an amount
- ಹಣಕ್ಕೆ ಖಾತರಿಯುಳ್ಳ; ಹಣ ಕೊಡುವನೆಂದು ಧೈರ್ಯವಾಗಿ ನಂಬಬಹುದಾದ.
- (ಹುಂಡಿ ಮೊದಲಾದವುಗಳ ವಿಷಯದಲ್ಲಿ)-ಅಷ್ಟು ಹಣಕ್ಕಾಗಿ ಬರೆದ.
- good for you (him etc.) (ಆಡುಮಾತು) (ಸಂಬೋಧಿತ ವ್ಯಕ್ತಿ ಯಾ ಸದರಿ ವ್ಯಕ್ತಿಯು ಹೇಳಿದ್ದನ್ನು ಯಾ ಮಾಡಿದ್ದನ್ನು ಒಪ್ಪುವಲ್ಲಿ ಹೇಳುವ ಉದ್ಗಾರ) (ನೀನು ಮಾಡಿದ್ದು) ಒಳ್ಳೆಯದಾಯಿತು! ಸರಿ ಹೋಯಿತು! ಸರಿಯಾಗಿದೆ!
- good (old) man ಭೇಷ್! (ಒಪ್ಪಿಗೆ ಸೂಚಿಸುವ ಉದ್ಗಾರ).
- good money ಹೆಚ್ಚಿನ ಕೂಲಿ.
- good o’n you (him, etc.) (ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್) = ಪದಗುಚ್ಛ \((5)\).
- good times ಒಳ್ಳೆಯ ಕಾಲ; ಉಚ್ಛ್ರಾಯದ ಅವಧಿ; ಸಿರಿಗಾಲ; ಸಮೃದ್ಧಿಯ ಕಾಲ.
- how good of you! ನೀವೆಷ್ಟು ಒಳ್ಳೆಯವರು! ತಮ್ಮದು ಎಷ್ಟು ದೊಡ್ಡ ಉಪಕಾರ! ಎಂಥ ಮಹೋಪಕಾರ!
- in good spirits ಗೆಲುವಿನಿಂದ; ಉಲ್ಲಾಸದಿಂದ.
- in good time ಸಕಾಲದಲ್ಲಿ; ತಡವಾಗಿರದೆ; ವಿಳಂಬ ಮಾಡಿರದೆ.
- not good enough (ಆಡುಮಾತು) (ಮಾಡಲು, ಅಂಗೀಕರಿಸಲು) ತಕ್ಕಷ್ಟು – ಯೋಗ್ಯವಾಗಿಲ್ಲ, ಅರ್ಹವಾಗಿಲ್ಲ, ತೃಪ್ತಿಕರವಾಗಿಲ್ಲ; ಶ್ರಮಕ್ಕೆ ಸರಿಸಮವಾದದ್ದಲ್ಲ.
- the good people ಫೇರಿಗಳು; ಕಿರುಕಿನ್ನರಿಯರು; ಅತಿಪುಟ್ಟ ಅತಿಮಾನುಷ ವ್ಯಕ್ತಿಗಳು.
ನುಡಿಗಟ್ಟು
- a good one (ಅಶಿಷ್ಟ)
- ನಂಬಲಸಾಧ್ಯವಾದ ಸುಳ್ಳು ಯಾ ಅತಿಶಯೋಕ್ತಿ.
- ಭರ್ಜರಿ ಜೋಕು ಮೊದಲಾದವು.
- all in good time ಸಕಾಲದಲ್ಲಿ; ವಿಹಿತಕಾಲದಲ್ಲಿ; ಆಗಬೇಕಾದ ಕಾಲದಲ್ಲಿ; ಮುಂದೆ, ಭವಿಷ್ಯದಲ್ಲಿ, ಆದರೆ ಆತುರವಿಲ್ಲದೆ, ಅವಸರವಿಲ್ಲದೆ.
- do me a good turn (or office) ನನಗೊಂದು ಉಪಕಾರ, ಸಹಾಯ ಮಾಡು.
- feel good ಉಲ್ಲಾಸದಿಂದಿರು.
- good at (ಯಾವುದೇ ವಿಷಯದಲ್ಲಿ) ಸಮರ್ಥ; ದಕ್ಷ; ಗಟ್ಟಿಗ; ಕುಶಲ; ನಿಪುಣ; ಶಕ್ತ: good at cricket ಕ್ರಿಕೆಟ್ಟಿನಲ್ಲಿ ಗಟ್ಟಿಗ.
- good for
- ಇಷ್ಟವುಳ್ಳ; ಮನಸ್ಸುಳ್ಳ.
- ಶಕ್ತಿಯುಳ್ಳ; ಸಾಮರ್ಥ್ಯವುಳ್ಳ: good for a ten mile walk ಹತ್ತು ಮೈಲಿ ನಡೆಯಲು ಇಷ್ಟವುಳ್ಳ, ಸಾಮರ್ಥ್ಯವುಳ್ಳ.
- have a good mind to ಮಾಡಲು ಮನಸ್ಸು ಆತುರವಾಗಿರು, ತವಕಿಸುತ್ತಿರು.
- make good
- ಪರಿಹಾರ ಕೊಡು; ನಷ್ಟತುಂಬು, ಕಟ್ಟಿಕೊಡು.
- (ಖರ್ಚುವೆಚ್ಚವನ್ನು) ಪಾವತಿ ಮಾಡು; ಸಲ್ಲಿಸು; ತೆರು.
- (ಕೊಟ್ಟ ಮಾತನ್ನು, ವಾಗ್ದಾನವನ್ನು) ಪಾಲಿಸು; ನಡೆಸು; ನೆರವೇರಿಸು.
- (ಉದ್ದೇಶವನ್ನು, ಉದ್ದಿಷ್ಟ ಕಾರ್ಯವನ್ನು) ಸಾಧಿಸು; ಪೂರೈಸು.
- (ಹೇಳಿಕೆಯನ್ನು, ಮಾತನ್ನು) ಮಾಡಿ ತೋರಿಸು.
- (ಆಪಾದನೆಯನ್ನು, ಆರೋಪವನ್ನು) ರುಜುವಾತು ಮಾಡಿಕೊಡು; ಪ್ರಮಾಣೀಕರಿಸು.
- (ಸ್ಥಾನವನ್ನು) ಪಡೆದು ದಕ್ಕಿಸಿಕೊ; ವಶದಲ್ಲಿಟ್ಟುಕೊಂಡಿರು; ಗಳಿಸಿ ದಕ್ಕಿಸಿಕೊ.
- (ಕಳೆದುಹೋದ ವಸ್ತುವಿಗೆ) ಪ್ರತಿಯಾಗಿ (ಇನ್ನೊಂದನ್ನು) ಕೊಡು; ಬದಲಿ ಕೊಡು.
- (ಒಡೆದುಹೋದ ಯಾ ಹಾನಿಗೊಳಗಾದ ವಸ್ತುವನ್ನು) ಸರಿಪಡಿಸು.
- (ಅಕರ್ಮಕ ಪ್ರಯೋಗ) ಯತ್ನಿಸಿದ್ದನ್ನು ಸಾಧಿಸು.
- put in a good word for = ನುಡಿಗಟ್ಟು \((10)\).
- say a good word for
- (ಒಬ್ಬನಿಗಾಗಿ, ಒಬ್ಬನ ಪರ) ಒಂದು ಒಳ್ಳೆಯ ಮಾತು ಹೇಳು; ಶಿಫಾರಸು ಮಾಡು.
- (ಒಬ್ಬನ ಪರ) ವಾದಿಸು; ವಕಾಲತ್ತು ವಹಿಸು.
- take in good part ನಿನ್ನ ಹಿತಕ್ಕಾಗಿಯೇ ಎಂದು ತಿಳಿ; ಅಸಮಾಧಾನಪಟ್ಟುಕೊಳ್ಳಬೇಡ; ಕೋಪಿಸಿಕೊಳ್ಳಬೇಡ.