See also 2gold
1gold ಗೋಲ್ಡ್‍
ನಾಮವಾಚಕ
  1. ಚಿನ್ನ; ಹೊನ್ನು; ಬಂಗಾರ; ಸ್ವರ್ಣ; ಸುವರ್ಣ; ಹೇಮ; ಕನಕ; ಕಾಂಚನ.
  2. ಚಿನ್ನದ ನಾಣ್ಯಗಳು.
  3. ಐಶ್ವರ್ಯ; ಶ್ರೀಮಂತಿಕೆ; (ಧನ) ಸಂಪತ್ತು; ಹೇರಳ ಹಣ; ಅಪಾರ ಧನ.
  4. ಸ್ವರ್ಣಲೇಪ; ಚಿನ್ನದ – ಮುಲಾಮು, ರೇಕು, ಬಣ್ಣ; ಮುಲಾಮು ಮಾಡುವುದಕ್ಕಾಗಿ ಯಾ ಬಣ್ಣವಾಗಿ ಉಪಯೋಗಿಸುವ ಚಿನ್ನ.
  5. ಹೊಂಬಣ್ಣ; ಬಂಗಾರದ ಬಣ್ಣ.
  6. (ರೂಪಕವಾಗಿ) ಚಿನ್ನ; ಬಂಗಾರ; ಸ್ವರ್ಣ; ಅಪರಂಜಿ; ಪ್ರಶಸ್ತ ವಸ್ತು; ಉಜ್ವಲ, ಸುಂದರ, ಅಮೂಲ್ಯ, ಬೆಲೆಬಾಳುವ – ವಸ್ತುಗಳು, ವಸ್ತ್ರಗಳು, ಸಾಮಗ್ರಿ: a heart of gold ಚಿನ್ನದಂಥ ಹೃದಯ; ಉದಾರ ಹೃದಯದ ವ್ಯಕ್ತಿ. a voice of gold ಹೊನ್ನಕಂಠ; ಶ್ರೀಮಂತವಾದ ಕಂಠ, ಧ್ವನಿ. she is pure gold ಅವಳು ಶುದ್ಧ ಅಪರಂಜಿ(ಯಂಥ ವ್ಯಕ್ತಿ).
  7. (ಬಿಲ್ಲು ವಿದ್ಯೆ) ಹೊಂಗುರಿಗಣ್ಣು; ಸ್ವರ್ಣಲಕ್ಷ್ಯ; ಹೊಳೆಯುವ (ಸಾಮಾನ್ಯವಾಗಿ ಗಿಲೀಟು ಮಾಡಿರುವ) ಗುರಿಗಣ್ಣು.
  8. = gold medal.
ಪದಗುಚ್ಛ

age of gold = golden age.

ನುಡಿಗಟ್ಟು
  1. all that glisters (or glitters) is not gold ಹೊಳೆಯುವುದೆಲ್ಲ ಹೊನ್ನಲ್ಲ; ಬೆಳ್ಳಗಿರುವುದೆಲ್ಲ ಹಾಲಲ್ಲ.
  2. go off gold ಸುವರ್ಣ ಪ್ರಮಿತಿಯನ್ನು, ಸುವರ್ಣಮಾನವನ್ನು – ತೊರೆ, ತ್ಯಜಿಸು, ಕೈಬಿಡು.
  3. worth one’s weight in gold
    1. ಬಹಳ ಬೆಲೆಬಾಳುವ; ಅತ್ಯಮೂಲ್ಯವಾದ.
    2. ಅತ್ಯುಪಯುಕ್ತವಾದ; ಬಹಳ ಸಹಾಯಕವಾದ.
See also 1gold
2gold ಗೋಲ್ಡ್‍
ಗುಣವಾಚಕ
  1. ಚಿನ್ನದ; ಹೊನ್ನಿನ; ಸುವರ್ಣದ; ಪೂರ್ತಿಯಾಗಿ ಯಾ ಬಹುಮಟ್ಟಿಗೆ ಚಿನ್ನದಿಂದ ಮಾಡಿದ.
  2. ಹೊಂಬಣ್ಣದ; ಸ್ವರ್ಣವರ್ಣದ; ಚಿನ್ನದಂಥ ಬಣ್ಣವುಳ್ಳ.
  3. (ತಗ್ಗಿದ ಬೆಲೆಯ ನಾಣ್ಯ ಚಲಾವಣೆಯಲ್ಲಿ) ಸ್ವರ್ಣಮಾನದ ಬೆಲೆಯಲ್ಲಿ, ಸ್ವರ್ಣಮಾನಕ್ಕೆ ಸಮನಾದ ಬೆಲೆಯಲ್ಲಿ ಲೆಕ್ಕ ಮಾಡಿದ: gold francs etc. (ಬೆಲೆ ತಗ್ಗದೆ ಇದ್ದಾಗಿನ) ಸ್ವರ್ಣಮಾನದ ಬೆಲೆಯ ಹ್ರ್ಯಾಂಕ್‍ ನಾಣ್ಯಗಳು ಮೊದಲಾದವು; ಚಿನ್ನದ ಫ್ರಾಂಕುಗಳು ಮೊದಲಾದವು.