See also 2gobble  3gobble
1gobble ಗಾಬ್‍ಲ್‍
ಸಕರ್ಮಕ ಕ್ರಿಯಾಪದ
  1. (ಆಹಾರವನ್ನು) ಗಪಗಪನೆ, ಗಬಗಬನೆ – ತಿನ್ನು; ಆತುರಾತುರವಾಗಿ ಸದ್ದು ಮಾಡುತ್ತಾ ತಿನ್ನು; ಗಟಕ್ಕನೆ ನುಂಗು, ನುಂಗಿಹಾಕು; ಕಬಳಿಸು ( ಅಕರ್ಮಕ ಕ್ರಿಯಾಪದ ಸಹ).
  2. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಕಸಿದುಕೊ; ಕಿತ್ತುಕೊ; ಎಗರಿಸು; ಹಿಡಿದುಕೊ; ಫಕ್ಕನೆ – ಸೆಳೆದುಕೊ, ತೆಗೆದುಕೊ: he gobbled up the clothes and set off ಅವನು ಬಟ್ಟೆಗಳನ್ನು ಫಕ್ಕನೆ ತೆಗೆದುಕೊಂಡು ಹೊರಟುಬಿಟ್ಟ.
  3. ಸರಸರ ಓದು; ಬೇಗನೆ ಓದು; ಅತ್ಯಾಸೆಯಿಂದ ನುಂಗಿ ಹಾಕುವಂತೆ ಓದು: bright girls can gobble up such books ಜಾಣ ಹುಡುಗಿಯರು ಅಂಥ ಪುಸ್ತಕಗಳನ್ನು ಸರಸರ ನುಂಗಿಹಾಕಬಲ್ಲರು.
See also 1gobble  3gobble
2gobble ಗಾಬ್‍ಲ್‍
ನಾಮವಾಚಕ

(ಗಾಲ್‍) ಚೆಂಡು ಕುಳಿಯೊಳಕ್ಕೆ ನೇರವಾಗಿ ಹೋಗುವಂತಹ ಚುರುಕು ಹೊಡೆತ.

See also 1gobble  2gobble
3gobble ಗಾಬ್‍ಲ್‍
ಅಕರ್ಮಕ ಕ್ರಿಯಾಪದ
  1. (ಟರ್ಕಿ ಹುಂಜದ ವಿಷಯದಲ್ಲಿ) ಗಂಟಲಲ್ಲಿ ತನ್ನದೇ ಆದ ವಿಲಕ್ಷಣವಾದ ಧ್ವನಿಮಾಡು, ಸದ್ದು ಮಾಡು.
  2. (ಕೋಪ ಮೊದಲಾದವುಗಳಿಂದ ಮಾತನಾಡುವಾಗ) ಇಂಥ ಧ್ವನಿ ಮಾಡು.