See also 2gobble  3gobble
1gobble ಗಾಬ್‍ಲ್‍
ಸಕರ್ಮಕ ಕ್ರಿಯಾಪದ
  1. (ಆಹಾರವನ್ನು) ಗಪಗಪನೆ, ಗಬಗಬನೆ – ತಿನ್ನು; ಆತುರಾತುರವಾಗಿ ಸದ್ದು ಮಾಡುತ್ತಾ ತಿನ್ನು; ಗಟಕ್ಕನೆ ನುಂಗು, ನುಂಗಿಹಾಕು; ಕಬಳಿಸು ( ಅಕರ್ಮಕ ಕ್ರಿಯಾಪದ ಸಹ).
  2. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಕಸಿದುಕೊ; ಕಿತ್ತುಕೊ; ಎಗರಿಸು; ಹಿಡಿದುಕೊ; ಫಕ್ಕನೆ – ಸೆಳೆದುಕೊ, ತೆಗೆದುಕೊ: he gobbled up the clothes and set off ಅವನು ಬಟ್ಟೆಗಳನ್ನು ಫಕ್ಕನೆ ತೆಗೆದುಕೊಂಡು ಹೊರಟುಬಿಟ್ಟ.
  3. ಸರಸರ ಓದು; ಬೇಗನೆ ಓದು; ಅತ್ಯಾಸೆಯಿಂದ ನುಂಗಿ ಹಾಕುವಂತೆ ಓದು: bright girls can gobble up such books ಜಾಣ ಹುಡುಗಿಯರು ಅಂಥ ಪುಸ್ತಕಗಳನ್ನು ಸರಸರ ನುಂಗಿಹಾಕಬಲ್ಲರು.