See also 2go  3go  4go
1go ಗೋ
ಕ್ರಿಯಾಪದ

(ಭೂತರೂಪ went, ಭೂತಕೃದಂತ gone, ವರ್ತಮಾನ ಕೃದಂತ going, ವರ್ತಮಾನಕಾಲ ಮಧ್ಯಮಪುರುಷ ಏಕವಚನ(ಪ್ರಾಚೀನ ಪ್ರಯೋಗ) goest, ಉಚ್ಚಾರಣೆ ಗೋಇಸ್ಟ್‍, ಪ್ರಥಮಪುರುಷಏಕವಚನgoes, ಉಚ್ಚಾರಣೆ ಗೋಸ್‍, (ಪ್ರಾಚೀನ ಪ್ರಯೋಗ) goeth, ಉಚ್ಚಾರಣೆ ಗೋಇತ್‍).

ಅಕರ್ಮಕ ಕ್ರಿಯಾಪದ
  1. (ಒಂದು ಗೊತ್ತುಪಡಿಸಿದ ಯಾ ನಿರ್ದಿಷ್ಟ ಸ್ಥಳ, ಸ್ಥಾನ, ಕಾಲ, ಮೊದಲಾದವುಗಳಿಂದ) ಹೋಗು; ಹೊರಡು; ತೆರಳು; ನಡೆ; ಚಲಿಸು; ಸರಿ; ಜರುಗು; ಕದಲು; ಚಲಿಸುತ್ತಿರು; ಪೊರಮಡು.
  2. ಹೋಗು; ಹೋಗಿಸೇರು; ಪ್ರಯಾಣಮಾಡು; ಪಯಣಿಸು: go easy ಸುಲಭವಾಗಿ ಹೋಗು. go by air ವಿಮಾನದಲ್ಲಿ ಪ್ರಯಾಣಮಾಡು. went miles round ಮೈಲಿಗಟ್ಟಲೆ ಸುತ್ತಾಡಿದ. go on a journey ಪ್ರಯಾಣ ಹೋಗು. go (for) a walk ತಿರುಗಾಡಲು ಹೋಗು.
  3. ಮುಂದುವರಿ; ಮುನ್ನಡೆ; ಮುಂದಕ್ಕೆ ಹೋಗು, ಸಾಗು: go the same way ಅದೇ ದಾರಿಯಲ್ಲಿ ಮುಂದುವರಿ.
  4. ಬೆಳೆ; ವರ್ಧಿಸು; ಅಭಿವೃದ್ಧಿ ಹೊಂದು; ಪ್ರಗತಿ ಪಡೆ.
  5. (ರೇಖೆ ಮೊದಲಾದವುಗಳ ವಿಷಯದಲ್ಲಿ) ನಿರ್ದಿಷ್ಟ ದಿಕ್ಕಿನಲ್ಲಿರು; ನಿರ್ದಿಷ್ಟ ದಿಕ್ಕಿಗೆ ಅಭಿಮುಖವಾಗಿರು; ನಿರ್ದಿಷ್ಟ ದಿಕ್ಕಿನಲ್ಲಿ ಹೋಗು: the boundary goes parallel with the river ಗಡಿರೇಖೆ ನದಿಗೆ ಸಮಾಂತರವಾಗಿ ಹೋಗುತ್ತದೆ.
  6. (ಒಂದರ) ಪ್ರಕಾರ – ನಡೆ, ವರ್ತಿಸು; (ಒಂದನ್ನು) ಅವಲಂಬಿಸು; ಅನುಸರಿಸು; (ಒಂದಕ್ಕೆ) ಹೊಂದಿಕೊಂಡಿರು; (ಒಂದಕ್ಕೆ) ಅನುಗುಣವಾಗಿ – ವರ್ತಿಸು ಯಾ ತೀರ್ಮಾನಿಸು: a good rule to go by ಆಚರಣೆಗೆ, ಅವಲಂಬಿಸಲು – ಒಳ್ಳೆಯ ನಿಯಮ, ಸೂತ್ರ. always goes with his party ಅವನು ಯಾವಾಗಲೂ ತನ್ನ ಪಕ್ಷವನ್ನೇ ಅನುಸರಿಸುತ್ತಾನೆ. promotion goes by favour ಬಡ್ತಿ (ಸಿಕ್ಕುವುದು) ಕೃಪೆಯನ್ನು ಅವಲಂಬಿಸುತ್ತದೆ.
  7. (ವಾಡಿಕೆಗನುಸಾರವಾಗಿ ಯಾ ಸ್ವಲ್ಪ ಸಮಯ) ಒಂದು ನಿರ್ದಿಷ್ಟ ಸ್ಥಿತಿಯಲ್ಲಿರು: go hungry ಹಸಿದುಕೊಂಡಿರು. go in rags ಚಿಂದಿಬಟ್ಟೆಯಲ್ಲಿರು. go in fear of one’s life ಜೀವಭಯದಲ್ಲಿರು. plea went unheeded ಕೋರಿಕೆಯನ್ನು ನಿರ್ಲಕ್ಷಿಸಲಾಯಿತು; ಕೋರಿಕೆ ಲಕ್ಷಿತವಾಗದೆ ಹೋಯಿತು.
  8. ಚಲಿಸುತ್ತ, ಕೆಲಸ ಮಾಡುತ್ತ, ಆಗುತ್ತ – ಇರು: the clock does not go well ಗಡಿಯಾರ ಸರಿಯಾಗಿ ನಡೆಯುತ್ತಿಲ್ಲ.
  9. (ನಿರ್ದೇಶಿತ ರೀತಿಯಲ್ಲಿ) ನಡೆ; ಚಲಿಸು: go like this with your left foot ನಿನ್ನ ಎಡಹೆಜ್ಜೆಯನ್ನು ಹೀಗೆ ಇಟ್ಟು ನಡೆ.
  10. (ಗಂಟೆ, ಗಂಟೆ ಹೊಡೆಯುವ ಗಡಿಯಾರ, ಬಂದೂಕು, ತಾಸು ಯಾ ಶಬ್ದಕೊಡುವ ಯಾವುದೇ ಮೂಲದ ವಿಷಯದಲ್ಲಿ) ಬಾರಿಸು; ಬಡಿ; ಹೊಡೆ; ಧ್ವನಿಸು; ಶಬ್ದ ಹೊರಡಿಸು.
  11. ನಿರ್ದಿಷ್ಟ ಬಗೆಯ ಶಬ್ದ ಮಾಡು: go bang ಢಂ ಎನ್ನು; ಢಂ ಎಂಬ ಶಬ್ದ ಮಾಡು.
  12. (ಕಾಲದ ವಿಷಯದಲ್ಲಿ) ಕಳೆ; ಸರಿ; ಕಳೆದು ಹೋಗು; ಗತಿಸು: one week is already gone ಆಗಲೇ ಒಂದು ವಾರ ಕಳೆದುಹೋಗಿದೆ. ten days to go before elections ಚುನಾವಣೆಗಳಿಗೆ ಇನ್ನು ಹತ್ತು ದಿವಸ ಇದೆ.
  13. (ದೂರ ಮೊದಲಾದವುಗಳ ವಿಷಯದಲ್ಲಿ) ಹೋಗಬೇಕಾಗಿರು; ಸಾಗಬೇಕಾಗಿರು; ಪ್ರಯಾಣ ಮಾಡಬೇಕಾಗಿರು: ten miles to go ಹತ್ತು ಮೈಲಿ ಸಾಗಬೇಕಾಗಿದೆ, ಪ್ರಯಾಣ ಮಾಡಬೇಕಾಗಿದೆ.
  14. ಚಲಾವಣೆಯಲ್ಲಿರು; ಚಾಲ್ತಿಯಲ್ಲಿರು; ನಡೆ; ಹೋಗು: the sovereign went any where ಸವರನ್‍ ನಾಣ್ಯವು ಎಲ್ಲಿ ಬೇಕಾದರೂ ನಡೆಯುತ್ತಿತ್ತು. the story goes ಕಥೆಯೇನೆಂದರೆ; ಕಥೆ ಪ್ರಚಲಿತವಾಗಿರುವುದು ಹೀಗೆ.
  15. (ಹೆಸರು ಮೊದಲಾದವನ್ನು) ಹೊತ್ತಿರು; ಪಡೆದಿರು; ಹೊಂದಿರು; ಹೆಸರಿನಿಂದ ಕರೆಯಲ್ಪಡು; ಪ್ರಚಲಿತವಾಗಿರು; ಪ್ರಸಿದ್ಧವಾಗಿರು: go by a false name ಸುಳ್ಳು ಹೆಸರಿಟ್ಟುಕೊಂಡಿರು.
  16. ಸಾಧಾರಣ ಮಟ್ಟದ್ದಾಗಿರು; ಸಾಮಾನ್ಯವಾದ ಒಂದು ಮಟ್ಟದ್ದಾಗಿರು: he is a good actor as actors go nowadays ಈಗಿನ ಕಾಲದ ನಟರ ಮಟ್ಟದಿಂದ ಹೇಳುವುದಾದರೆ ಅವನೊಬ್ಬ ಒಳ್ಳೆಯ ನಟನೆಂದೇ ಹೇಳಬೇಕು.
  17. (ದಾಖಲೆ, ಕವನ, ರಾಗ, ಮೊದಲಾದವುಗಳ ವಿಷಯದಲ್ಲಿ) ಹೋಗು; ನಿರ್ದಿಷ್ಟ ರೀತಿಯಲ್ಲಿರು; ನಿರ್ದಿಷ್ಟ ವಿಷಯ ಯಾ ಪದಗಳನ್ನು ಒಳಗೊಂಡಿರು.
  18. (ಕವನ, ಹಾಡುಗಳ ವಿಷಯದಲ್ಲಿ) ತಾಳಬದ್ಧವಾಗಿರು; ಲಯಬದ್ಧವಾಗಿರು; ಛಂದೋಬದ್ಧವಾಗಿರು; ರಾಗಕ್ಕೆ ಅಳವಡಿಸಲು ಯಾ ಹಾಡಲು – ತಕ್ಕುದಾಗಿರು: the verses go easily enough ಪದ್ಯಗಳು ಸುಲಭವಾಗಿ ಹಾಡುವಂತಿವೆ.
  19. (ಘಟನೆಗಳು ಮೊದಲಾದವುಗಳ ವಿಷಯದಲ್ಲಿ) ಆಗು; ನಡೆ; ಜರುಗು; ಉಂಟಾಗು; ಸಂಭವಿಸು: go well ಚೆನ್ನಾಗಿ ಆಗು. go ill ಕೆಟ್ಟುಹೋಗು. go hard ಕಷ್ಟವಾಗು.
  20. (ತೀರ್ಮಾನ, ಚುನಾವಣಾ ಫಲಿತಾಂಶ, ಮೊದಲಾದವುಗಳು) ಆಗು; ಹೋಗು; ಪರಿಣಮಿಸು: go for ಪರವಾಗಿ, ಅನುಕೂಲವಾಗಿ – ಆಗು. go against ವಿರುದ್ಧವಾಗಿ – ಆಗು, ಹೋಗು.
  21. (ಚುನಾವಣಾ ಕ್ಷೇತ್ರ, ರಾಜಕಾರಿಣಿ, ಮತದಾರರ ವಿಷಯದಲ್ಲಿ) ನಿರ್ದಿಷ್ಟ ದಾರಿ ಯಾ ಅಭಿಪ್ರಾಯ – ಹಿಡಿ, ಅನುಸರಿಸು: Bangalore went Congress ಬೆಂಗಳೂರು ಪಟ್ಟಣವು ಕಾಂಗ್ರೆಸ್‍ ಪಕ್ಷವನ್ನು ಹಿಡಿಯಿತು. America went dry ಅಮೆರಿಕವು ಪಾನ ನಿರೋಧವನ್ನು ಅನುಸರಿಸಿತು.
  22. (ಸಮಾರಂಭ ಮೊದಲಾದವುಗಳ ವಿಷಯದಲ್ಲಿ) ಚೆನ್ನಾಗಿ ನಡೆ; ಯಶಸ್ವಿಯಾಗು: the dinner went well ಭೋಜನಕೂಟ ಚೆನ್ನಾಗಿ ನಡೆಯಿತು.
  23. (ಆಡುಮಾತು) ನಡೆ; ಅಂಗೀಕೃತವಾಗಿರು; ಅನುಮತಿ ಇರು: anything goes ಯಾವುದಾದರೂ ಸರಿ, ನಡೆಯುತ್ತದೆ.
  24. ಸಮ್ಮತವಾಗಿರು; ಒಪ್ಪಿಗೆಯಾಗಿರು: what he says goes ಅವನು ಹೇಳಿದ್ದು ಸಮ್ಮತವಾಗುತ್ತದೆ.
  25. (ಪಂದ್ಯ ಮೊದಲಾದವುಗಳಲ್ಲಿ ಪಂದ್ಯಾಳುಗಳಿಗೆ, ಹೊರಡುವ ಸಂಜ್ಞೆ ಕೊಡುವಾಗ) ಹೊರಡಿ; ಓಡಿ; ಓಡಲು ಪ್ರಾರಂಭಿಸಿ.
  26. (ದಂಡನೆಯಿಲ್ಲದೆ) ತಪ್ಪಿಸಿಕೊ; (ಶಿಕ್ಷೆಯಿಂದ) ಪಾರಾಗು.
  27. ಹೋಗು; ಮಾರಾಟವಾಗು: go cheap ಅಗ್ಗದ ಬೆಲೆಗೆ ಹೋಗು, ಮಾರಾಟವಾಗು. go for one rupee ಒಂದು ರೂಪಾಯಿಗೆ ಹೋಗು.
  28. (ಹಣದ ವಿಷಯದಲ್ಲಿ) ಖರ್ಚಾಗು; ವಿನಿಯೋಗವಾಗು: whatever money he got, it all went in books ಅವನಿಗೆ ಬಂದ ಹಣವೆಲ್ಲಾ ಪುಸ್ತಕಗಳಿಗೆ ಆಯಿತು, ಖರ್ಚಾಯಿತು.
  29. ಹೋಗು; ತ್ಯಕ್ತವಾಗು; ಕೈಬಿಟ್ಟು ಹೋಗು: the car must go ಕಾರನ್ನು ತ್ಯಜಿಸಬೇಕು.
  30. ಹೋಗು; ನಷ್ಟವಾಗು; ಇಲ್ಲವಾಗು; ಅಂತ್ಯವಾಗು; ಕೊನೆಮುಟ್ಟು: my sight is going ನನ್ನ ದೃಷ್ಟಿ ಹೋಗುತ್ತಿದೆ. our trade is going ನಮ್ಮ ವ್ಯಾಪಾರ ಅಂತ್ಯವಾಗುತ್ತಿದೆ.
  31. ರದ್ದಾಗು; ವಜಾ ಆಗು; ರದ್ದಾಗಿಹೋಗು: the peon must go ಜವಾನ ವಜಾ ಆಗಬೇಕು; ಜವಾನನನ್ನು ವಜಾ ಮಾಡಬೇಕು.
  32. ಹೋಗು; ನಷ್ಟವಾಗು; ಕಳೆದುಹೋಗು: my headache has gone ನನ್ನ ತಲೆನೋವು ಹೋಯಿತು. the next wicket went for nothing ಒಂದು ರನ್ನೂ ಸೇರಿಸದೆ ಮುಂದಿನ ವಿಕೆಟ್ಟು ಬಿದ್ದುಹೋಯಿತು.
  33. (ಮುಖ್ಯವಾಗಿ ಭೂತಕೃದಂತ ಹಾಗೂ ಅನೇಕ ಪದಗುಚ್ಛಗಳಲ್ಲಿ ಪ್ರಯೋಗ) ಸಾಯು; ಸತ್ತುಹೋಗು: go the way of all the earth (or of all flesh) ಮರ್ತ್ಯದ ದಾರಿ ತುಳಿ; ಸಾಯಿ. go to a better world ಉತ್ತಮ ಲೋಕಕ್ಕೆ ಹೋಗು; ಸಾಯಿ. go to one’s account or reward ತನ್ನ ಲೆಕ್ಕ ತೀರಿಸಲು ಯಾ ಪುರಸ್ಕಾರ ಪಡೆಯಲು ಹೋಗು. ಸಾಯು.
  34. ಬಿದ್ದುಹೋಗು; ಮುರಿದುಬೀಳು: the mast went in three places ಕೂವೆಕಂಬ ಮೂರು ಕಡೆ ಮುರಿಯಿತು.
  35. ಸೀಳಿ ಹೋಗು; ಬಿರುಕುಬಿಡು.
  36. ಹರಿದು ಕಿತ್ತುಹೋಗು.
  37. ಹೋಗು; ಒಂದರತ್ತ ಹೊರಡು: which road goes to Bangalore? ಬೆಂಗಳೂರಿಗೆ ಯಾವ ದಾರಿ ಹೋಗುತ್ತದೆ?
  38. (ಯಾವುದಾದರೂ ಉದ್ದೇಶಕ್ಕಾಗಿ) ಹೊರಡು; ಹೋಗು; ಮಾಡಲು ಪ್ರಾರಂಭಿಸು: I went to find him ಅವನನ್ನು ಕಾಣಲು ಹೋದೆ. go on a pilgrimage ಯಾತ್ರೆ(ಗಾಗಿ) ಹೊರಡು, ಹೋಗು. go on an errand ಕೆಲಸದ ಮೇಲೆ, ಕೆಲಸಕ್ಕಾಗಿ ಹೋಗು. go on a spree ಮಜಾ ಮಾಡಲು ಹೋಗು.
  39. (ಮುಖ್ಯವಾಗಿ ಆಡುಮಾತು) (ಮಾಡುವಷ್ಟು) ದಡ್ಡನಾಗಿರು; ಮೂರ್ಖನಾಗಿರು; ಅವಿವೇಕಿಯಾಗಿರು: don’t go making him angry ಅವನಿಗೆ ಕೋಪ ಬರಿಸುವಷ್ಟು ಮೂರ್ಖನಾಗಬೇಡ.
  40. (ಆಡುಮಾತು ಯಾ ಅಮೆರಿಕನ್‍ ಪ್ರಯೋಗ) (ಮಾಡಲು) ಮುಂದುವರಿ; ತೊಡಗು: go jump in the lake ಸರೋವರದೊಳಕ್ಕೆ ಧುಮುಕುವಷ್ಟು ಮುಂದುವರಿ (ಅವಿವೇಕಿಯಾಗು). go and catch a falling star (ಅವಿವೇಕಿಯಾಗು ಎಂಬರ್ಥದಲ್ಲಿ) ಬೀಳುತ್ತಿರುವ ನಕ್ಷತ್ರವನ್ನು ಹೋಗಿ ಹಿಡಿದುಕೊ.
  41. ಮಾಡಲು ಪ್ರಾರಂಭಿಸುವಂತಿರು; ತೊಡಗುವುದರಲ್ಲಿರು.
  42. ಮಾಡುತ್ತಾ – ಇರು, ಹೋಗು: go shopping, fishing ವ್ಯಾಪಾರ ಮಾಡುತ್ತಾ ಇರು, ಮೀನು ಹಿಡಿಯುತ್ತಾ ಹೋಗು.
  43. ಆಗು; – ಅಂತೆ ವರ್ತಿಸು; – ಅಂತೆ ನಡೆದುಕೊ: go bail for person ವ್ಯಕ್ತಿಗೆ ಜಾಈನಾಗು.
  44. (ಅಧಿಕಾರಿಗಳ, ನ್ಯಾಯಾಲಯದ – ಮುಂದೆ) ಹೋಗು; ಅಹವಾಲು ಕೊಂಡೊಯ್ಯು: he is determined to go to a jury ಅವನು ಪಂಚಾಯಿತರ ಮುಂದೆ ಹೋಗಲು (ತನ್ನ ಅಹವಾಲನ್ನು ಕೊಂಡೊಯ್ಯಲು) ನಿರ್ಧರಿಸಿದ್ದಾನೆ.
  45. ಹೋಗು; ಆಶ್ರಯಿಸು; ಅವಲಂಬಿಸು; ಬಳಿ ಹೋಗು; ನೆರವು ಕೋರು: you must go to Aristotle for that ಅದಕ್ಕೆ ನೀನು ಅರಿಸ್ಟಾಟಲನಲ್ಲಿಗೇ ಹೋಗಬೇಕು. go to war or work ಯುದ್ಧಕ್ಕೆ ಯಾ ಕೆಲಸಕ್ಕೆ ಹೋಗು.
  46. (ನಿರ್ದಿಷ್ಟ ಹಂತದವರೆಗೂ) ಹೋಗು; ಮುಂದುವರಿ: will go as high as Rs. 1,೦೦೦ ಒಂದು ಸಾವಿರ ರೂ.ಗಳವರೆಗೂ ಹೋಗುತ್ತಾನೆ (ಕೊಳ್ಳುವವನು ಯಾ ಹರಾಜಿನಲ್ಲಿ ಬೆಲೆ ಸೂಚಿಸುವಾಗ ಹೇಳುವ ಮಾತು). went to a great expense ಬಹಳ ಖರ್ಚು ಮಾಡಿದ; ಬಹಳ ಖರ್ಚಿನವರೆಗೆ ಹೋದ. went to a great trouble ಬಹಳ – ಕಷ್ಟ ಪಟ್ಟ, ಶ್ರಮವಹಿಸಿದ.
  47. ಒಳತೂರು; ಒಳನುಗ್ಗು; ಒಳಹೊಗು.
  48. ಮುಳುಗು; ತಳ – ಸೇರು, ತಲುಪು, ಮುಟ್ಟು: the ship went to the bottom ಹಡಗು (ಮುಳುಗಿ) ತಳ ಸೇರಿತು.
  49. (ಒಳಗೆ) ಹಿಡಿಸು; ಹೋಗು; ತೂರು; ಅವಕಾಶ, ಜಾಗ – ಪಡೆದಿರು: will not go in (to) the basket ಬುಟ್ಟಿಗೆ ಹಿಡಿಸುವುದಿಲ್ಲ; ಬುಟ್ಟಿಯೊಳಕ್ಕೆ ಹೋಗುವುದಿಲ್ಲ.
  50. (ಸಂಖ್ಯೆಯ ವಿಷಯದಲ್ಲಿ) ಹೋಗು; ಒಳಗೊಂಡಿರು; ಭಾಗವಾಗಿರು; ನಿಶ್ಯೇಷವಾಗಿ ಯಾ ಶೇಷಸಹಿತವಾಗಿ ಇನ್ನೊಂದು ಸಂಖ್ಯೆಯಲ್ಲಿ ಇರು: 6 into 12 goes twice ಹನ್ನೆರಡರಲ್ಲಿ 6 ಎರಡು ಸಾರಿ ಹೋಗುತ್ತದೆ. 6 into 13 goes twice and one left over ಹದಿಮೂರರಲ್ಲಿ 6 ಎರಡು ಸಾರಿ ಹೋಗಿ ಒಂದು ಉಳಿಯುತ್ತದೆ (1 ಶೇಷ ಉಳಿಯುತ್ತದೆ).
  51. (ಒಂದು ವಸ್ತು ಇನ್ನೊಂದರೊಳಕ್ಕೆ) ಹಿಡಿಸು; ಸರಿಯಾಗಿ ಸೇರು; ಸರಿಯಾಗು; ಸರಿ ಹೋಗು; ಸರಿಹೊಂದು: this book goes on the third shelf ಈ ಪುಸ್ತಕ ಮೂರನೆಯ ಬಡುವಿಗೆ ಹಿಡಿಸುತ್ತದೆ.
  52. (ಬಹುಮಾನ, ಜಯ, ಆಸ್ತಿಪಾಸ್ತಿ, ಅಧಿಕಾರ, ಮೊದಲಾದವುಗಳ ವಿಷಯದಲ್ಲಿ) ಒಬ್ಬನ ಪಾಲಿಗೆ, ಒಬ್ಬನಿಗೆ – ಹೋಗು, ಬರು.
  53. (ಒಂದು ಫಲಿತಾಂಶಕ್ಕಾಗಿ, ಉದ್ದೇಶಕ್ಕಾಗಿ) ಆಗು; ವಿನಿಯೋಗವಾಗು; ಬಳಕೆಯಾಗು; ಉಪಯೋಗವಾಗು: fees do not go towards the sustenance of the school ಶುಲ್ಕ ಸ್ಕೂಲಿನ ನಿರ್ವಹಣೆಗೆ ವಿನಿಯೋಗವಾಗುವುದಿಲ್ಲ.
  54. ಪರಿಣಾಮಕ್ಕೆ – ಒಯ್ಯು, ನೆರವಾಗು, ಸಹಾಯಕವಾಗು, ಅಗತ್ಯವಾದ ಅಂಶವಾಗಿರು: the bones which go to form the head and trunk ರುಂಡ ಮತ್ತು ಮುಂಡವನ್ನು ರಚಿಸಲು ನೆರವಾಗುವ ಮೂಳೆಗಳು, ರಚಿಸುವ ಮೂಳೆಗಳು.
  55. ಪರಿಣಾಮ – ತರು, ಉಂಟುಮಾಡು, ಯಾ ಉಂಟುಮಾಡುವಂತಿರು: two things go to render this statement worthless ಎರಡು ಅಂಶಗಳು ಈ ಹೇಳಿಕೆಯನ್ನು ಬೆಲೆಯಿಲ್ಲದ್ದಾಗಿಸುತ್ತವೆ.
  56. ಸೇರಿ ಒಂದಾಗು; ಮೊತ್ತವಾಗು: 12 inches go to the foot ಹನ್ನೆರಡು ಅಂಗುಲ ಸೇರಿ ಒಂದು ಅಡಿಯಾಗುತ್ತದೆ.
  57. ಹೋಗು; ತಲುಪು; ವಿಸ್ತರಿಸು; ವ್ಯಾಪಿಸು: the difference goes deep ವ್ಯತ್ಯಾಸ ಬಹಳ ದೂರ ಹೋಗುತ್ತದೆ.
  58. (ಯಾವುದೋ ನಿರ್ದಿಷ್ಟ ಸ್ಥಿತಿಗೆ) ಬರು; ತಲುಪು; ಹೋಗು; ತಿರುಗು; (ಯಾವುದೋ ಸ್ಥಿತಿ ಯಾ ರೂಪ) ಆಗು: go brown ಕಂದುಬಣ್ಣಕ್ಕೆ ತಿರುಗು. go blind ಕುರುಡಾಗು. go mad ಹುಚ್ಚಾಗು. go sleep ನಿದ್ದೆಹೋಗು.
ಸಕರ್ಮಕ ಕ್ರಿಯಾಪದ
  1. (ಇಸ್ಪೀಟಿನಲ್ಲಿ)
    1. ತುರುಫು ಹೇಳು.
    2. (ಎಲೆಗಳ ಗೊತ್ತಾದ) ಜೊತೆ – ಇದೆಯೆನ್ನು, ಇದೆಯೆಂದು ಘೋಷಿಸು: go two diamonds ಡಯಮಂಡ್‍ ಎಲೆ ಜೊತೆ ಹೇಳು.
  2. (ಆಡುಮಾತು) ಪಣ ಒಡ್ಡು; ಬಾಜಿ ಕಟ್ಟು: I will go two rupees on number seven ನಾನು ಏಳನೆಯ ನಂಬರಿನ ಮೇಲೆ ಎರಡು ರೂಪಾಯಿ ಬಾಜಿ ಕಟ್ಟುತ್ತೇನೆ.
ಪದಗುಚ್ಛ
  1. as (a person or thing) goes (ವ್ಯಕ್ತಿ ಯಾ ವಸ್ತು) ಸಾಧಾರಣವಾಗಿ ತೆಗೆದುಕೊಂಡರೆ; ಹೋಲಿಸಿದರೆ: a good actor as actors go ಎಲ್ಲ ನಟರೊಡನೆ ಹೋಲಿಸಿದರೆ ಒಳ್ಳೆಯ ನಟನೇ.
  2. as (or so) far as it goes (ಹೇಳಿಕೆಯೊಂದರ ಅರ್ಥವನ್ನು ಬಹಳ ವ್ಯಾಪಕವಾಗಿ ಗ್ರಹಿಸುವುದರ ವಿರುದ್ಧ ಎಚ್ಚರಿಕೆಯ ಮಾತಾಗಿ) ಅದು ಇರುವ ಮಟ್ಟಿಗೆ, ಅಷ್ಟರ ಮಟ್ತಿಗೆ, ಒಂದು ನಿರ್ದಿಷ್ಟ ಹಂತದವರೆಗೆ ಹೋಗುವ ಮಟ್ಟಿಗೆ – ಹೇಳುವುದಾದರೆ; ಒಂದು ಮಿತಿಯೊಳಗೆ ಅದರ ವಿಷಯವಾಗಿ ಹೇಳಬೇಕೆಂದರೆ.
  3. as the Bull (or verse or catechism) goes ಆಜ್ಞಾಪತ್ರ ಹೇಳುವುದೇನೆಂದರೆ; ಆ ಪಠ್ಯದ ಪ್ರಕಾರ; ಆ ಗಾದೆಯಂತೆ.
  4. be going to do (something)
    1. ಉದ್ದೇಶಿಸಿರು; ಸಂಕಲ್ಪಿಸಿರು; ನಿರ್ಧರಿಸು; ಯೋಜಿಸಿರು; ಯೋಚಿಸಿರು: we are going to spend our holidays in Ooty ನಾವು ನಮ್ಮ ರಜಾದಿನಗಳನ್ನು ಊಟಿಯಲ್ಲಿ ಕಳೆಯಲು ಉದ್ದೇಶಿಸಿದ್ದೇವೆ. I am going to have my own way ನನ್ನ ಮನಸ್ಸಿಗೆ ತೋರಿದಂತೆ ವರ್ತಿಸಲು ನಿರ್ಧರಿಸಿದ್ದೇನೆ. we are going to buy the house with the money we have saved ಕೂಡಿಟ್ಟಿರುವ ಹಣದಿಂದ ನಾವು ಆ ಮನೆಯನ್ನು ಕೊಳ್ಳಲು ಯೋಚಿಸಿದ್ದೇವೆ.
    2. ಆಗುವಂತಿರು; ಆಗಬಹುದಾಗಿರು; ಸಂಭವನೀಯವಾಗಿರು: is there going to be a storm? ಬಿರುಗಾಳಿಯ ಸಂಭವ ಏನಾದರೂ ಇದೆಯೇ?
    3. ಹತ್ತಿರದಲ್ಲಿರು; ಸದ್ಯದ ಭವಿಷ್ಯದಲ್ಲಿರು: I am going to tell you a story ನಾನು ನಿನಗೊಂದು ಕಥೆ ಹೇಳಲಿದ್ದೇನೆ.
  5. from the word go (ಆಡುಮಾತು) ಪ್ರಾರಂಭದಿಂದಲೇ; ಶುರುವಿನಿಂದಲೇ; ಆದಿಯಿಂದಲೇ; ಮೊಟ್ಟ ಮೊದಲಿಂದಲೇ.
  6. go a-begging ತಿರುಪೆ ಬೇಡುತ್ತಾ ಇರು; ಭಿಕ್ಷೆ ಎತ್ತುತ್ತಾ ಇರು.
  7. go about
    1. ಒಂದು ಕೆಲಸದಲ್ಲಿ – ಮಗ್ನವಾಗಿರು, ತೊಡಗಿರು, ಉದ್ಯುಕ್ತನಾಗಿರು.
    2. (ವರ್ತಮಾನ ಕೃದಂತಕ್ಕೆ ಮುಂಚೆ ಪ್ರಯೋಗ) (ಯಾವುದೇ ಒಂದನ್ನು) ಅಭ್ಯಾಸ ಮಾಡಿಕೊ; ಚಾಳಿ ಮಾಡಿಕೊ: goes about telling lies ಸುಳ್ಳು ಹೇಳಿಕೊಂಡು ತಿರುಗುವ ಅಭ್ಯಾಸ ಮಾಡಿಕೊಂಡಿದ್ದಾನೆ.
    3. (ನೌಕಾಯಾನ) ಎದುರು ದಿಕ್ಕನ್ನು ಹಿಡಿ; ದಿಕ್ಕು ಬದಲಾಯಿಸಿ ವಿರುದ್ಧ ದಿಕ್ಕನ್ನು ಹಿಡಿ.
    4. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗು; ಬೇರೆಬೇರೆ ಜಾಗಗಳಿಗೆ ಹೋಗು: he is going about with that girl ಅವನು ಆ ಹುಡುಗಿಯ ಜೊತೆ ಎಲ್ಲ ಕಡೆಯೂ ಸುತ್ತಾಡುತ್ತಿದ್ದಾನೆ.
    5. (ವದಂತಿ, ಕಥೆ, ಮೊದಲಾದವು) ಒಬ್ಬನಿಂದ ಒಬ್ಬರಿಗೆ ಹರಡು, ಹಬ್ಬು: a story is going about that ಅದರ ಬಗ್ಗೆ ಒಂದು ಕಥೆ ಹರಡಿದೆ.
  8. go a-doing (ಪ್ರಾಚೀನ ಪ್ರಯೋಗ) ಪದಗುಚ್ಛ(21).
  9. go ahead (ಏನೊಂದೂ ಸಂದೇಹ, ಸಂಕೋಚ ಇಲ್ಲದೆ ಒಂದು ಕೆಲಸದಲ್ಲಿ) ಮುಂದುವರಿ; ಮುನ್ನುಗ್ಗು; ಕೆಲಸ ಮುಂದುವರಿಸು.
  10. go a long way
    1. (ಸಾಮಾನ್ಯವಾಗಿ towards ಜತೆಗೆ) ತುಂಬ ಪರಿಣಾಮ ಬೀರು, ಇರು.
    2. (ಆಹಾರ, ಹಣ, ಮೊದಲಾದವು) ಬಹಳ ಕಾಲ ಬರು; ಬಾಳಿಕೆ ಬರು.
    3. = ಪದಗುಚ್ಛ \((25)\).
  11. go along with ಒಪ್ಪು; ಸಮ್ಮತಿಸು; ಅದೇ ಅಭಿಪ್ರಾಯ ಹೊಂದಿರು.
  12. go and do (something) (ಮುಖ್ಯವಾಗಿ) ಹೋಗಿ (ಏನನ್ನೋ) ಮಾಡುವಷ್ಟು ಅವಿವೇಕಿಯಾಗು.
  13. go around
    1. ಸದಾ ಜೊತೆಯಲ್ಲಿ ಓಡಾಡುತ್ತಿರು.
    2. = ಪದಗುಚ್ಛ \((7)\).
    3. ರೂಢಿಯಿಂದ ಮಾಡುತ್ತಿರು; ವಾಡಿಕೆಯಾಗಿ ಮಾಡುವುದರಲ್ಲಿ ತೊಡಗಿರು.
  14. go as-you-please ಅಬಾಧಿತ; ಅನಿರ್ಬಂಧಿತ; ಸ್ವಚ್ಛಂದ.
  15. go at
    1. ಮೇಲೆ ಬೀಳು; ಆಕ್ರಮಣ ಮಾಡು; ಕೈ ಮಾಡು; ಹಲ್ಲೆ ಮಾಡು.
    2. ಜೋರಾಗಿ ಆರಂಭಿಸು; ಬಿರುಸಿನಿಂದ ಕೈಗೊಳ್ಳು.
  16. go away
    1. ಹೊರಟು ಹೋಗು.
    2. (ಮುಖ್ಯವಾಗಿ ವಿಹಾರ ಮೊದಲಾದವುಗಳಿಗಾಗಿ ಮನೆ ಬಿಟ್ಟು) ಬೇರೆ ಊರಿಗೆ ಹೋಗು; ಊರು ಬಿಟ್ಟು ಹೋಗು.
  17. go back on
    1. ಮಾತಿಗೆ ತಪ್ಪು; ವಚನಭ್ರಷ್ಟನಾಗು; ಕೊಟ್ಟ ಮಾತಿನಂತೆ ನಡೆದುಕೊಳ್ಳದಿರು.
  18. go $^1$bail for.
  19. go behind
    1. ಹಿಂದಿರುವುದನ್ನು ಹುಡುಕು: go behind a person’s words ವ್ಯಕ್ತಿಯ ಮಾತುಗಳ ಹಿಂದಿರುವ, ಮರೆಯಲ್ಲಿರುವ ಅರ್ಥವನ್ನು ಹುಡುಕು.
    2. (ತೀರ್ಪು ಮೊದಲಾದವುಗಳ ವಿಷಯದಲ್ಲಿ) ಆಧಾರಗಳನ್ನು, ಕಾರಣಗಳನ್ನು ಪುನರ್ವಿಮರ್ಶೆ ಮಾಡು.
  20. go by
    1. (ಪಕ್ಕದಲ್ಲಿ) ಹಾದು ಹೋಗು.
    2. ಅವಕಾಶವನ್ನು – ಕಳೆದುಕೊ, ತಪ್ಪಿಸಿಕೊ, ಇಲ್ಲದಂತೆ ಮಾಡಿಕೊ: don’t let this chance go by ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡ.
    3. (ಇನ್ನೊಬ್ಬರ ಮಾತು, ಅಭಿಪ್ರಾಯ, ಮೊದಲಾದವನ್ನು) ನಂಬು; ನೆಚ್ಚು; ಅನುಸರಿಸು: don’t go by what she says ಅವಳು ಹೇಳುವುದನ್ನು ನೆಚ್ಚಿಕೊಳ್ಳಬೇಡ. that is a good rule to go by ಅನುಸರಿಸಲು ಅದೊಂದು ಒಳ್ಳೆಯ ಸೂತ್ರ.
    4. ಕಳೆದು ಹೋಗು; ಸರಿ: time went by ಕಾಲ ಸರಿಯಿತು.
    5. (ಅಭಿಪ್ರಾಯ ಯಾ ತೀರ್ಮಾನ ರೂಪಿಸಲು) ಆಧಾರವಾಗಿಟ್ಟುಕೊ: have we enough evidence to go by ನಾವು ತೀರ್ಮಾನ ಮಾಡಲು ಸಾಕಷ್ಟು ಸಾಕ್ಷ್ಯಾಧಾರ ಇದೆಯೇ?
  21. go doing ಮಾಡಲು ಹೋಗು: go fishing ಈನು ಹಿಡಿಯಲು ಹೋಗು. went shopping ಸಾಮಾನು ಕೊಳ್ಳಲು ಅಂಗಡಿಗೆ ಹೋಗು.
  22. go down
    1. (ಹಡಗಿನ ವಿಷಯದಲ್ಲಿ) ಮುಳುಗು.
    2. (ಯಾವುದೋ ಒಂದು ನಿಯಮಿತ ಕಾಲದವರೆಗೂ) ಮುಂದುವರಿ; ಹೋಗು; ಹೋಗಿ ನಿಲ್ಲು: the article goes down to the death of Ashoka ಆ ಲೇಖನ ಅಶೋಕನ ಮರಣದವರೆಗೂ ಹೋಗುತ್ತದೆ.
    3. (ವಿಜಯಿಯ ಎದುರು) ಕೆಳಕ್ಕೆ ಬೀಳು; ಸೋತುಹೋಗು; ಬಿದ್ದುಹೋಗು: go down fighting ಕಾದುತ್ತಾ ಮಡಿ; ಹೋರಾಡುತ್ತಾ ಕೆಳಗೆ ಬೀಳು.
    4. (ಚರಿತ್ರೆಯಲ್ಲಿ ಬರವಣಿಗೆಯ ರೂಪದಲ್ಲಿ) ಚಿರಕಾಲ – ಇರು, ನಿಂತಿರು, ಉಳಿದಿರು, ಲಿಖಿತರೂಪಕ್ಕೆ ಇಳಿ: down it must go in her book ಅದು ಅವಳ ಪುಸ್ತಕಕ್ಕೆ ಇಳಿಯಲೇಬೇಕು.
    5. ಗಂಟಲಲ್ಲಿಳಿ: I want no sauce or pickle to make it go down ಅದು ಗಂಟಲಲ್ಲಿ ಇಳಿಯಲು ನನಗೆ ಗೊಜ್ಜು, ಉಪ್ಪಿನಕಾಯಿ ಯಾವುದೂ ಬೇಡ.
    6. ಒಪ್ಪಿಗೆಯಾಗು; ಅಂಗೀಕಾರ ಪಡೆ: a poet who would not go down among readers of present day ಇಂದಿನ ಓದುಗರಿಗೆ ಮೆಚ್ಚುಗೆಯಾಗದ ಒಬ್ಬ ಕವಿ.
    7. (ಬ್ರಿಟಿಷ್‍ ಪ್ರಯೋಗ) (ಆಡುಮಾತು) (ವರ್ಷದ ಯಾ ಅವಧಿಯ ಕೊನೆಯಲ್ಲಿ ವಿಶ್ವವಿದ್ಯಾನಿಲಯವನ್ನು) ಬಿಟ್ಟು ಹೋಗು.
    8. (ಸೂರ್ಯ, ಚಂದ್ರ, ನಕ್ಷತ್ರಗಳ ವಿಷಯದಲ್ಲಿ) ಮುಳುಗು; ಅಸ್ತಮಿಸು; ಅಸ್ತಂಗತವಾಗು.
    9. (ಆಡುಮಾತು) ಜೈಲಿಗೆ ಕಳುಹಿಸಲ್ಪಡು: went down for ten years ಹತ್ತು ವರ್ಷ ಜೈಲುವಾಸ ಅನುಭವಿಸಿದ, ಲಿಗೆ ಕಳುಹಿಸಲ್ಪಟ್ಟ.
    10. ಕೆಡು; ಕೆಟ್ಟುಹೋಗು; ಹಾಳಾಗು; ಗುಣ ಕಳೆದುಕೊ.
    11. ವಿಫಲವಾಗು; ಅಯಶಸ್ವಿಯಾಗು.
    12. (ಸಮುದ್ರ, ಅಲೆ, ಗಾಳಿ, ಮೊದಲಾದವುಗಳ ವಿಷಯದಲ್ಲಿ) ಶಾಂತವಾಗು; ಕಡಿಮೆಯಾಗು: the flood went down ಪ್ರವಾಹ ಕಡಿಮೆಯಾಯಿತು.
    13. (ಮೊತ್ತದ ವಿಷಯದಲ್ಲಿ) ಇಳಿ; ಕಡಿಮೆಯಾಗು: the coffee has gone down a lot ಕಾಫಿಯ ಇಳುವರಿ ಬಹಳ ಇಳಿದಿದೆ.
    14. (ಬೆಲೆ, ಮೌಲ್ಯ, ಮೊದಲಾದವುಗಳ ವಿಷಯದಲ್ಲಿ) ಇಳಿ; ಕಳೆದುಕೊ.
    15. (ಕಂಪ್ಯೂಟರ್‍ ಜಾಲದ ವಿಷಯದಲ್ಲಿ) ನಿಷ್ಕ್ರಿಯವಾಗು; ಕೆಲಸ ಮಾಡದಿರು; ನಿಂತುಹೋಗು.
  23. go down with
    1. (ಬ್ರಿಟಿಷ್‍ ಪ್ರಯೋಗ) ಕಾಯಿಲೆ ಬೀಳು; ರೋಗಕ್ಕೆ ತುತ್ತಾಗು: I went down with malaria ನಾನು ಮಲೇರಿಯಾ ಕಾಯಿಲೆಗೆ ತುತ್ತಾದೆ.
    2. (ವಿವರಣ, ಸಮಜಾಯಿಷಿ, ಕತೆ, ನಾಟಕ, ಮೊದಲಾದವುಗಳ ವಿಷಯದಲ್ಲಿ. ಓದುಗ, ಕೇಳುಗ, ವೀಕ್ಷಕ, ಮೊದಲಾದವರಿಗೆ) ಹಿಡಿಸು; ಒಪ್ಪಿಗೆಯಾಗು; ಸಮ್ಮತವಾಗು; ಅಂಗೀಕೃತವಾಗು: the new play went down well with the provincial audiences ಹೊಸ ನಾಟಕ ಹಳ್ಳಿ ಪ್ರೇಕ್ಷಕರಿಗೆ ಭರ್ಜರಿಯಾಗಿ ಹಿಡಿಸಿತು. that explanation does not go down with us ಆ ವಿವರಣೆ ನಮಗೆ ಒಪ್ಪಿಗೆಯಾಗುವುದಿಲ್ಲ.
  24. goes to show. ತೋರಿಸಲು ನೆರವಾಗು: it goes to show that the Dutch are not the equals of the English ಡಚ್ಚರು ಇಂಗ್ಲಿಷರ ಸಮಾನರಲ್ಲ ಎಂಬುದನ್ನು ಅದು ತೋರಿಸುತ್ತದೆ.
  25. go far ತುಂಬ ಯಶಸ್ವಿಯಾಗು; ಸಫಲವಾಗು.
  26. go fetch (ನಾಯಿಗೆ ಕೊಡುವ ಆಜ್ಞೆ) ಹೋಗಿ ತೆಗೆದುಕೊಂಡು ಬಾ!
  27. go great guns ಬಲವಾಗಿ, ತೀವ್ರವಾಗಿ ಯಾ ಯಶಸ್ವಿಯಾಗಿ – ಮುಂದುವರಿ, ಸಾಗು.
  28. go halves or shares ಸರಿಪಾಲು ಹಂಚಿಕೊ; ಅರ್ಧ ಅರ್ಧ ಹಂಚಿಕೊ.
  29. go in
    1. (ಸ್ಪರ್ಧಿಯಾಗಿ) (ಆಟಕ್ಕೆ) ಸೇರು.
    2. (ಕ್ರಿಕೆಟ್‍ ಆಟದಲ್ಲಿ) ಆಟಕ್ಕಿಳಿ; ಇನ್ನಿಂಗ್ಸ್‍ ಪ್ರಾರಂಭಿಸು.
    3. (ಸೂರ್ಯ ಮೊದಲಾದವುಗಳ ವಿಷಯದಲ್ಲಿ) (ಮೋಡಗಳಲ್ಲಿ) ಮರೆಯಾಗು; ಕಾಣದೆ ಹೋಗು.
    4. (ಕೋಣೆ, ಮನೆ, ಮೊದಲಾದವುಗಳ ಒಳಕ್ಕೆ) ಪ್ರವೇಶಿಸು.
  30. go in and win? (ಆಟಗಾರನನ್ನು ಹುರಿದುಂಬಿಸುವಾಗ ಹೇಳುವ ಮಾತು) ಬಾರಿಸು! ಹೊಡಿ! ಗೆಲ್ಲು! ಇತ್ಯಾದಿ.
  31. go in for
    1. (ಯಾವುದೇ ಒಂದನ್ನು) ತನ್ನ ಉದ್ದೇಶವಾಗಿ, ಗುರಿಯಾಗಿ, ರೀತಿಯಾಗಿ, ತತ್ತ್ವವನ್ನಾಗಿ – ಮಾಡಿಕೊ, ಇಟ್ಟುಕೊ, ಕೈಕೊಳ್ಳು: Bhagat Singh deliberately went in for martyrdom ಭಗತ್‍ಸಿಂಗನು ಉದ್ದೇಶಪೂರ್ವಕವಾಗಿ ಹುತಾತ್ಮನಾದನು.
    2. (ಏನನ್ನಾದರೂ) ಖರೀದಿ ಮಾಡು; ಕೊಂಡುಕೊ; ವ್ಯಾಪಾರ ಮಾಡು: they do not go in for hats ಅವರು ಹ್ಯಾಟುಗಳನ್ನು ಕೊಂಡುಕೊಳ್ಳುವುದಿಲ್ಲ.
    3. (ಯಾವುದಾದರೂ ಒಂದು ಪರೀಕ್ಷೆಗೆ) ಹೋಗು; ಕೂರು; ಕುಳಿತುಕೊ; ಸೇರು; ಅಭ್ಯರ್ಥಿಯಾಗು: 1061 candidates went in for mathematics ಗಣಿತಶಾಸ್ತ್ರದ ಪರೀಕ್ಷೆಗೆ 1061 ಜನ ಕುಳಿತರು, ಪರೀಕ್ಷೆ ತೆಗೆದುಕೊಂಡರು.
  32. go into
    1. (ಪಾರ್ಲಿಮೆಂಟಿಗೆ) ಪ್ರವೇಶಿಸು; ಚುನಾಯಿತನಾಗು.
    2. (ಕಸಬನ್ನು, ವೃತ್ತಿಯನ್ನು) ಹಿಡಿ; ಅವಲಂಬಿಸು; ಕೈಕೊಳ್ಳು; ಸೇರು.
    3. (ಸಮಾಜದಲ್ಲಿ) ಸೇರುತ್ತಿರು; ಓಡಾಡುತ್ತಿರು; ಹೋಗಿ ಬರುತ್ತಿರು.
    4. (ಕಾರ್ಯಕಲಾಪಗಳಲ್ಲಿ) ಭಾಗವಹಿಸು.
    5. ಒಳಪಡಿಸಿಕೊ: go into hysterics ಹುಚ್ಚು ಆವೇಶಕ್ಕೆ ಒಳಗಾಗು.
    6. ಪರೀಕ್ಷಿಸು; ವಿಚಾರ ಮಾಡು; ತನಿಖೆ ನಡೆಸು.
    7. (ದುಃಖಸೂಚನೆ ಮೊದಲಾದ) ಉಡುಪು – ತೊಡು, ಧರಿಸು, ಹಾಕಿಕೊ.
    8. (ಯಾವುದರದೇ) ಅಂಗವಾಗು; ಅಂಶವಾಗು; ಅಂಗಭಾಗವಾಗು.
  33. go it (ಆಡುಮಾತು)
    1. ಹೆಚ್ಚು ವೇಗದಿಂದ ಹೋಗು.
    2. ಬಿರುಸಾಗಿ, ಬಿರುಸಿನಿಂದ – ಮಾಡು.
    3. (ರೂಪಕವಾಗಿ) ಸುಖಲೋಲುಪನಾಗು.
  34. go it strong (ಆಡುಮಾತು) ಅತಿಶಯಿಸು; ಅತಿಶಯೋಕ್ತಿ ಬಳಸು; (ಮಾತಿನ ವಿಷಯದಲ್ಲಿ) ಬಹಳ ದೂರ ಹೋಗು.
  35. go nap
    1. (ನ್ಯಾಪ್‍ ಎಂಬ ಇಸ್ಪೀಟು ಆಟದಲ್ಲಿ) ಎಲ್ಲಾ ಐದು ಪಟ್ಟುಗಳನ್ನು ಗೆಲ್ಲುತ್ತೇನೆಂದು ಘೋಷಿಸು.
    2. (ರೂಪಕವಾಗಿ) ಎಲ್ಲವನ್ನೂ ಒಂದೇ ಪಣವಾಗಿ ಒಡ್ಡು.
  36. go native (ಬಿಳಿ ಜನಾಂಗದವನ ವಿಷಯದಲ್ಲಿ) ದೇಶೀಯನಾಗು; ಯಾರ ಮಧ್ಯೆ ವಾಸಿಸುತ್ತಾನೋ ಆ ದೇಶೀಯರ ಅನಾಗರಿಕ ಜೀವನಕ್ರಮ ಹಿಡಿ, ಅನುಸರಿಸು, ಅಳವಡಿಸಿಕೊ.
  37. go off
    1. (ರಂಗಸ್ಥಳವನ್ನು) ಬಿಡು; (ರಂಗದಿಂದ) ನಿಷ್ಕ್ರಮಿಸು.
    2. ಹೊರಡು; ಹೋಗು; ಚಲಿಸು: the boats went off ದೋಣಿಗಳು ಮುಂದಕ್ಕೆ ಹೊರಟವು.
    3. ಸಿಡಿ; ಹಾರು; ಆಸ್ಫೋಟಿಸು.
    4. (ಕ್ರಮೇಣ) ಅಳಿ; ಕ್ಷೀಣಿಸು; ಇಲ್ಲವಾಗು; ಹೋಗಿಬಿಡು; ಅನುಭವದಿಂದ, ಅರಿವಿನಿಂದ ಮರೆಯಾಗು.
    5. ಸಾಯು.
    6. (ನಿದ್ದೆ, ಮೂರ್ಛೆ, ಮೊದಲಾದವುಗಳಿಂದ) ಅರಿವು ಕಳೆದುಕೊ; ಜ್ಞಾನತಪ್ಪು; ಪ್ರಜ್ಞಾಹೀನವಾಗು: go off to sleep ನಿದ್ದೆ ಹೋಗು. go off in (or into) a faint (or fit) ಮೂರ್ಛೆ ಹೋಗು.
    7. ಬೇಗನೆ – ಮಾರಾಟವಾಗಿ ಹೋಗು, ಖರ್ಚಾಗು: the tickets will go off with a rush ಟಿಕೆಟ್ಟುಗಳು ಭರಾಟೆಯಿಂದ ಮಾರಾಟವಾಗಿಬಿಡುತ್ತವೆ.
    8. (ಚೆನ್ನಾಗಿ ಮೊದಲಾದ ರೀತಿಯಲ್ಲಿ) ಜರುಗು; ನಡೆ; ನೆರವೇರು.
    9. (ಮುಖ್ಯವಾಗಿ ಆಹಾರ ಪದಾರ್ಥಗಳ ವಿಷಯದಲ್ಲಿ) ಕೆಡು; ಕೆಟ್ಟುಹೋಗು; ಗುಣ ಕಳೆದುಕೊ: the milk has gone off ಹಾಲು ಕೆಟ್ಟುಹೋಗಿದೆ, ಹುಳಿ ಹಿಡಿದಿದೆ.
    10. ಪ್ರಾರಂಭವಾಗು; ಆರಂಭಿಸು.
    11. (ಬ್ರಿಟಿಷ್‍ ಪ್ರಯೋಗ) (ಆಡುಮಾತು) ದ್ವೇಷಿಸಲು, ಇಷ್ಟಪಡದಿರಲು ಶುರುಮಾಡು: I’ve gone off him ನಾನು ಅವನನ್ನು ದ್ವೇಷಿಸಲಾರಂಭಿಸಿದ್ದೇನೆ.
  38. go off at (ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍) (ಅಶಿಷ್ಟ) ಬಯ್ಯು; ಛೀಮಾರಿಹಾಕು.
  39. go off well (or badly) (ಉದ್ಯಮ ಮೊದಲಾದವುಗಳ ವಿಷಯದಲ್ಲಿ) ಚೆನ್ನಾಗಿ (ಯಾ ಕೆಟ್ಟದ್ದಾಗಿ) ನಡೆಯುತ್ತಿರು.
  40. go on
    1. ಮುಂದುವರಿಸು; ಬಿಡದೆ ನಡೆಸು; ಪಟ್ಟು ಹಿಡಿದು ಮಾಡು: decided to go on with it ಅದರೊಡನೆ ಮುಂದುವರಿಯುವಂತೆ ತೀರ್ಮಾನಿಸಿದ. went on trying ಬಿಡದೆ ಪ್ರಯತ್ನಪಡುತ್ತಲೇ ಹೋದ. unable to go on ಮುಂದುವರಿಸಲಾಗದೆ; ಮುಂದುವರಿಯಲಾಗದೆ.
    2. (ಯಾವುದನ್ನೇ ಮಾಡುವಲ್ಲಿ) ಮುಂದಿನ ಹೆಜ್ಜೆ ಇಡು; ಮುಂದಿನ ಕ್ರಮ ತೆಗೆದುಕೊ; ಮುಂದುವರಿ: he goes on to quote Vyasa ಅವನು ಮುಂದುವರಿದು ವ್ಯಾಸನನ್ನು ಉಲ್ಲೇಖಿಸುತ್ತಾನೆ.
    3. (ನಾಚಿಕೆಗೇಡಿನ ಮೊದಲಾದ ರೀತಿಯಲ್ಲಿ) ವರ್ತಿಸು; ನಡೆದುಕೊ: she is playing the fool to go on in this style ಇಷ್ಟು ಕೆಟ್ಟ ರೀತಿ ವರ್ತಿಸುತ್ತಾ ಅವಳು ಅವಿವೇಕಿಯಾಗುತ್ತಿದ್ದಾಳೆ. shameful, the way they went on ಅವರು ವರ್ತಿಸಿದ ರೀತಿ ನಾಚಿಕೆಗೇಡು.
    4. (ಆಡುಮಾತು) ಬಾಯಿಗೆ ಬಂದಂತೆ – ಆಡು, ಬಯ್ಯು, ದೂಷಿಸು: went on and on at him ಅವನಿಗೆ ಬಾಯಿಗೆ ಬಂದಂತೆ ಬಯ್ಯುತ್ತಲೇ ಇದ್ದಳು.
    5. (ಆಡುಮಾತು) (ರಂಗಸ್ಥಳದಲ್ಲಿ) ಪಾತ್ರವಹಿಸು; ರಂಗದ ಮೇಲೆ – ಬರು, ಕಾಣಿಸಿಕೊ.
    6. (ಕ್ರಿಕೆಟ್‍) ಬೋಲ್‍ ಮಾಡಲು ಪ್ರಾರಂಭಿಸು.
    7. (ಕೆಲಸದಲ್ಲಿ ತನ್ನ ಸರದಿ ಬಂದಾಗ) ಮಾಡು; ನಿರ್ವಹಿಸು.
    8. (ಆಡುಮಾತು) (ವಿಧಿ ರೂಪದಲ್ಲಿ) ಬೊಗಳಬೇಡ! ಬಾಯಿಗೆ ಬಂದ ಹಾಗೆ ಹರಟಬೇಡ!
    9. (ಸಿದ್ಧ ಉಡುಪು ಮೊದಲಾದವುಗಳ ವಿಷಯದಲ್ಲಿ) ಹಾಕಿಕೊಳ್ಳುವವನಿಗೆ ಹಿಡಿಸುವಷ್ಟು ದೊಡ್ಡದಾಗಿರು, ಅಳ್ಳಕವಾಗಿರು.
    10. ವಿಪರೀತ – ಮಾತಾಡು, ಮಾತು ಬೆಳೆಸು; ಅಗತ್ಯವಾದುದಕ್ಕಿಂತ ದೀರ್ಘವಾಗಿ ಮಾತಾಡು.
    11. ಆಗು; ಸಂಭವಿಸು; ಜರುಗು.
    12. (ಜಿಲ್ಲೆ, ಪರಿಹಾರ ನಿಧಿ, ಮೊದಲಾದವುಗಳ) ಬಾಬ್ತಿಗೆ ಬೀಳು; ಖರ್ಚಿಗೆ ಸೇರು: go on the relief fund ಪರಿಹಾರ ನಿಧಿಯ ಖರ್ಚಿಗೆ ಸೇರು.
    13. (ಆಡುಮಾತು) (go upon ಸಹ) ಸಾಕ್ಷ್ಯವಾಗಿ, ಪುರಾವೆಯಾಗಿ – ಬಳಸು: police don’t have anything to go on ಸಾಕ್ಷ್ಯವಾಗಿ ಬಳಸಲು ಪೊಲೀಸರಿಗೆ ಏನೂ ಇಲ್ಲ.
    14. (ಆಡುಮಾತು) (ಮುಖ್ಯವಾಗಿ ನಿಷೇಧ ವಾಕ್ಯದಲ್ಲಿ ಒಂದರ ಬಗ್ಗೆ, ಬಹಳ, ಸ್ವಲ್ಪ, ಮೊದಲಾದ) ಆಸಕ್ತಿ ವಹಿಸು; ಗಮನಕೊಡು; ತಲೆ ಕೆಡಿಸಿಕೊ: don’t go much on red hair ಕೆಂಪು ಕೂದಲಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡ.
    15. (ಆಡುಮಾತು) (go on!) (ಹುರಿದುಂಬಿಸುವಾಗ ಯಾ ಅಪನಂಬಿಕೆ ಸೂಚಿಸುವಾಗ ಬಳಸುವ ಉದ್ಗಾರ).
  41. go on the streets (ಬೀದಿ) ಸೂಳೆಯಾಗು.
  42. go out
    1. (ಕೊಠಡಿ, ಮನೆ, ಮೊದಲಾದವನ್ನು ಬಿಟ್ಟು) ಹೊರಕ್ಕೆ ಹೋಗು; ನಿರ್ಗಮಿಸು.
    2. ದ್ವಂದ್ವಯುದ್ಧ ಮಾಡು.
    3. (ರೇಡಿಯೋ, ಪತ್ರಿಕೆ, ಮೊದಲಾದವುಗಳಲ್ಲಿ) ಪ್ರಸಾರವಾಗು.
    4. ನಂದಿ ಹೋಗು.
    5. ಪ್ರಣಯ ತೋರುತ್ತಿರು. ಹುಡುಗಿಯನ್ನು ಒಲಿಸಿಕೊಳ್ಳಲು ಪ್ರಯತ್ನಿಸಿರು.
    6. (ಸರ್ಕಾರದ ವಿಷಯದಲ್ಲಿ) ಹೋಗು; ಉರುಳು; ಪತನವಾಗು; ಪದಚ್ಯುತವಾಗು; ಅಧಿಕಾರ ಬಿಟ್ಟುಕೊಡು, ತ್ಯಜಿಸು.
    7. (ಹ್ಯಾಷನ್‍ ಮೊದಲಾದವುಗಳ ವಿಷಯದಲ್ಲಿ) ಬಳಕೆ ತಪ್ಪು; ರೂಢಿತಪ್ಪು; ಕಾಲಸ್ಥಿತಿಗೆ ಹಿಂದೆ ಬೀಳು: hero – worship doesn’t seem to have gone out ವ್ಯಕ್ತಿಪೂಜೆ ಈಗ ಬಳಕೆ ತಪ್ಪಿದಂತೆ ಕಾಣುತ್ತಿಲ್ಲ.
    8. ವಸಾಹತಿಗೆ ನೆಲಸಲು ಹೋಗು; ವಲಸೆಹೋಗು.
    9. (ಸಾಮಾನ್ಯವಾಗಿ ಮಕ್ಕಳನ್ನು ನೋಡಿಕೊಳ್ಳುವ ಗವರ್ನೆಸ್‍ಗಳಾಗಿ ಹೋಗುವ ಹುಡುಗಿಯರ ವಿಷಯದಲ್ಲಿ) ಉದ್ಯೋಗಕ್ಕಾಗಿ ಮನೆ ಬಿಟ್ಟು ಹೋಗು.
    10. (ಆಡುಮಾತು) ಸಮಾಜದಲ್ಲಿ ಬೆರೆ, ಕಲೆ.
    11. (ಕೆಲಸಗಾರರ ವಿಷಯದಲ್ಲಿ) ಮುಷ್ಕರ ಹಿಡಿ; ಸಂಪು ಹೂಡು.
    12. (ಹೃದಯ ಮೊದಲಾದವು ಪ್ರೇಮ, ಕರುಣೆ, ಮೊದಲಾದವುಗಳಿಂದ) ಹಿಗ್ಗು; ತುಂಬು; ಉಬ್ಬು: his heart went out for the beautiful girl ಆ ಚೆಲುವೆಗಾಗಿ ಅವನ ಹೃದಯ ಪ್ರೇಮದಿಂದ ಉಬ್ಬಿತು. my heart goes out to them ಅವರ ಬಗ್ಗೆ ನನ್ನ ಹೃದಯ ಕರುಣೆಯಿಂದ ತುಂಬುತ್ತದೆ.
    13. (ಗಾಲ್‍ ಆಟದಲ್ಲಿ) ಸರಣಿಯ ಮೊದಲ ಒಂಬತ್ತು ಕುಳಿಗಳನ್ನು ಆಡು.
    14. (ಆಡುಮಾತು) ಪ್ರಜ್ಞೆತಪ್ಪು; ಮೂರ್ಛೆಹೋಗು.
  43. go over
    1. ಪಕ್ಷಾಂತರ ಮಾಡು ಯಾ ಮತಾಂತರ ಹೊಂದು; (ತನ್ನ) ಪಕ್ಷವನ್ನು ಯಾ ಧರ್ಮವನ್ನು ಬದಲಾಯಿಸು.
    2. (ಆಟ, ನಾಟಕ, ಮೊದಲಾದವುಗಳ ವಿಷಯದಲ್ಲಿ) ಯಶಸ್ವಿಯಾಗು; ಜಯಗಳಿಸು: the drama went over well in Mysore ಮೈಸೂರಿನಲ್ಲಿ ನಾಟಕ ಯಶಸ್ವಿಯಾಯಿತು.
    3. (ಎಚ್ಚರಿಕೆಯಿಂದ) ನೋಡು; ಪರೀಕ್ಷಿಸು; ಪರಿಶೀಲಿಸು: go over the accounts ಲೆಕ್ಕಪತ್ರಗಳನ್ನು ಪರಿಶೀಲಿಸು.
  44. go round
    1. ಸುತ್ತಿಕೊಂಡು ಬರು.
    2. (ಆಡುಮಾತು) ಭೇಟಿ ಮಾಡಹೋಗು.
    3. ಬಳಸು; ಪ್ರದಕ್ಷಿಣೆ ಮಾಡು.
    4. ಕೈ ಬದಲಾಯಿಸು; ಒಂದು ಕೈಯಿಂದ ಇನ್ನೊಂದು ಕೈಗೆ – ಹೋಗು, ದಾಟು.
    5. ಸುತ್ತುಬರುವಷ್ಟು ಇರು.
    6. (ಆಹಾರ ಮೊದಲಾದವು) ನೆರವಿಗೆಲ್ಲ, ಸಮುದಾಯಕ್ಕೆಲ್ಲ – ಸಾಕಾಗು, ಸಾಕಾಗುವಂತಿರು: we have barely enough to go round ಎಲ್ಲರಿಗೂ ಸಾಕಾಗುವಷ್ಟು ನಮ್ಮಲ್ಲಿಲ್ಲ.
    7. = ಪದಗುಚ್ಛ \((13)\).
  45. go sick (ಸೈನ್ಯ) ಕಾಯಿಲೆಯವರ ಪಟ್ಟಿಯಲ್ಲಿ ದಾಖಲಾಗು, ದಾಖಲು ಮಾಡಿಸಿಕೊ.
  46. go slow
    1. (ಮುಖ್ಯವಾಗಿ) ಉದ್ದೇಶಪೂರ್ವಕವಾಗಿ ನಿಧಾನಮಾಡು, ಛಾನಸವಾಗಿ ಕೆಲಸ ಮಾಡು.
    2. (ಸಂಚಾರ ನಿಯಂತ್ರಣದ ಸಂಕೇತ) ನಿಧಾನವಾಗಿ ಚಲಿಸಿ!
  47. go through
    1. ವಿವರವಾಗಿ ಚರ್ಚಿಸು; ತಪಶೀಲಾಗಿ ವಿಚಾರ ಮಾಡು.
    2. (ಎಚ್ಚರಿಕೆಯಿಂದ) ಪರಿಶೀಲಿಸು; ಪರಾಮರ್ಶಿಸು.
    3. (ಸಮಾರಂಭ, ವಾಚನ, ಮೊದಲಾದವನ್ನು) ನಡೆಸು; ನೆರವೇರಿಸು.
    4. ಅನುಭವಿಸು: go through hardships ಕಷ್ಟಗಳನ್ನು ಅನುಭವಿಸು.
    5. (ಪುಸ್ತಕದ ವಿಷಯದಲ್ಲಿ) (ಅನೇಕ ಆವೃತ್ತಿಗಳಲ್ಲಿ) ಪ್ರಕಟವಾಗು.
    6. (ಆಡುಮಾತು) (ಹಣ) ಖರ್ಚು ಮಾಡು.
    7. ಮುಗಿ; ಕೊನೆಗೊಳ್ಳು; ಕೊನೆಮುಟ್ಟು; ಸಮಾಪ್ತವಾಗು: the deal did not go through ವ್ಯವಹಾರ ಮುಗಿಯಲಿಲ್ಲ.
    8. (ಮಸೂದೆ ಮೊದಲಾದವು) ಅಂಗೀಕೃತವಾಗು; ಒಪ್ಪಿಗೆ ಪಡೆ: the bill did not go through ಮಸೂದೆ ಅಂಗೀಕೃತವಾಗಲಿಲ್ಲ.
    9. ಖರ್ಚುಮಾಡಿಬಿಡು; ಬಳಸಿ ಮುಗಿಸು.
    10. ಒಳತೂರು; ತೂತು ಮಾಡು; ರಂಧ್ರ ಕೊರೆ.
    11. ಹುಡುಕು; ಪರೀಕ್ಷಿಸು: the police went through the pockets of the suspected thief ಪೊಲೀಸರು ಅನುಮಾನಕ್ಕೊಳಗಾದ ಕಳ್ಳನ ಕಿಸೆಗಳನ್ನು ಹುಡುಕಿದರು.
    12. ಭಾಗವಹಿಸು; ಪಾಲುಗೊಳ್ಳು: she made him go through both a civil and a religious marriage ಅವಳು ಅವನನ್ನು ಕಾಯಿದೆ ವಿವಾಹ ಹಾಗೂ ಧಾರ್ಮಿಕ ವಿವಾಹ ಇವೆರಡೂ ವಿವಾಹವಿಧಿಗಳಲ್ಲಿ ಪಾಲುಗೊಳ್ಳುವಂತೆ ಮಾಡಿದಳು.
    13. (ಆಸ್ಟ್ರೇಲಿಯ) (ಅಶಿಷ್ಟ) ತಲೆತಪ್ಪಿಸಿಕೊಂಡು ಹೋಗು; ಪರಾರಿಯಾಗು.
  48. go through with ನಿಶ್ಯೇಷವಾಗಿ ಮುಗಿಸು; ಪೂರೈಸು; ಕೊನೆಗೊಳಿಸಿಬಿಡು; ಸಮಾಪ್ತಿಗೊಳಿಸು; ಸಂಪೂರ್ಣಗೊಳಿಸು; ಕೊನೆಗಾಣಿಸು: he is only going through with it as a duty ಅವನು ಅದನ್ನು ಕೇವಲ ಕರ್ತವ್ಯವೆಂದು ಭಾವಿಸಿ ಮುಗಿಸುತ್ತಿದ್ದಾನೆ.
  49. go to
    1. (ವಿಧಿ ರೂಪ) (ಪ್ರಾಚೀನ ಪ್ರಯೋಗ) (ಬುದ್ಧಿ ಹೇಳುವಾಗ, ಅಪನಂಬಿಕೆ ಮತ್ತು ಅಸಹನೆ ಸೂಚಿಸುವಾಗ ಪ್ರಯೋಗ) ಸಾಕು ಸಾಕು! ಸುಮ್ಮನಿರು! ಸರಿ, ಸರಿ! ಬಿಡು, ಬಿಡು!
    2. ಒಟ್ಟು ಮೊತ್ತವಾಗು: twelve inches go to make a foot ಹನ್ನೆರಡು ಅಂಗುಲಗಳು ಸೇರಿ ಒಂದು ಅಡಿ ಆಗುತ್ತದೆ.
    3. go to (or towards) make ಆಗಿಸಲು, ಉಂಟುಮಾಡಲು – ನೆರವಾಗು, ಸಹಾಯಕವಾಗು, ಅನುಕೂಲಿಸು: what qualities go to the making of a statesman? ರಾಜನೀತಿಜ್ಞನನ್ನಾಗಿಸುವ ಗುಣಗಳು ಯಾವುವು? this money can go towards the house you want to buy ನೀನು ಕೊಳ್ಳಬೇಕೆಂದಿರುವ ಮನೆಗೆ ಈ ಹಣ ಅನುಕೂಲವಾಗಬಹುದು.
  50. go together
    1. ಒಟ್ಟಿಗಿರು; ಒಟ್ಟಿಗೆ ಹೋಗು; ಒಡನಿರು; ಸಹವರ್ತಿಯಾಗಿರು; ಅನುಷಂಗವಾಗಿರು.
    2. ಹೊಂದಿಕೆಯಾಗಿರು; ಸಾಮಂಜಸ್ಯದಿಂದಿರು; ಸುಸಂಗತವಾಗಿರು: which of these colours go well together? ಈ ಬಣ್ಣಗಳಲ್ಲಿ ಯಾವುವು ಚೆನ್ನಾಗಿ ಹೊಂದಿಕೊಳ್ಳುತ್ತವೆ?
    3. (ಗಂಡು ಹೆಣ್ಣಿನ ವಿಷಯದಲ್ಲಿ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ) ಜೊತೆಯಲ್ಲಿ ಓಡಾಡು; ಜೊತೆಯಾಗಿ ಅಡ್ಡಾಡು, ಸುತ್ತಾಡು.
  51. go to great expenses (or trouble) ಬಹಳ ಖರ್ಚುಮಾಡು (ಯಾ ಬಹಳ ತೊಂದರೆ ತೆಗೆದುಕೊ).
  52. go to it! (ಆಡುಮಾತು) (ಮುಖ್ಯವಾಗಿ ವಿಧಿರೂಪದಲ್ಲಿ) ಕೆಲಸ ಶುರು ಮಾಡು; ಪ್ರಾರಂಭಿಸು.
  53. go to pieces ಚೂರುಚೂರಾಗು; ಒಡೆದುಹೋಗು (ರೂಪಕವಾಗಿ ಸಹ).
  54. go to school ಶಿಕ್ಷಣ ಪಡೆ.
  55. go to sea ನಾವಿಕನಾಗು.
  56. go to seed
    1. ಬೀಜವಾಗು; ಹೂವು ಬಿಡುವುದು ನಿಲ್ಲು.
    2. (ರೂಪಕವಾಗಿ) ವ್ಯರ್ಥವಾಗು; ಹಾಳಾಗು.
  57. go to show (or prove) ತೋರಿಸಲು (ಯಾ ಸಾಧಿಸಲು) ಸಹಾಯಕವಾಗು.
  58. go to somebody ಒಬ್ಬನ ವಶಕ್ಕೆ, ಸ್ವಾಧೀನಕ್ಕೆ, ಪಾಲಿಗೆ – ಹೋಗು: who did the property go to when the old man died? ಮುದುಕ ಸತ್ತಾಗ ಆಸ್ತಿ ಯಾರ ಪಾಲಿಗೆ ಹೋಯಿತು? the first prize went to Kavya ಮೊದಲನೇ ಬಹುಮಾನ ಕಾವ್ಯಳಿಗೆ ಹೋಯಿತು.
  59. go to stool ಕಕ್ಕಸಿಗೆ ಹೋಗು.
  60. go to the bar ವಕೀಲನಾಗು; ಲಾಯರಾಗು; ನ್ಯಾಯವಾದಿಯಾಗು.
  61. go to the country (ಬ್ರಿಟಿಷ್‍ ಪ್ರಯೋಗ) ಜನಮತ ಅರಸು; ಸಾರ್ವಜನಿಕ ಚುನಾವಣೆಯ ಮೂಲಕ ಜನಾಭಿಪ್ರಾಯ ತಿಳಿದುಕೊ, ಪರೀಕ್ಷಿಸು.
  62. go under
    1. (ವ್ಯಕ್ತಿ, ಹಡಗು, ಮೊದಲಾದವರ ವಿಷಯದಲ್ಲಿ) ಮುಳುಗಿಹೋಗು.
    2. ಮುರಿದು ಬೀಳು.
    3. ಸೋತು ಹೋಗು; ನಾಶವಾಗು.
  63. go up
    1. (ಬ್ರಿಟಿಷ್‍ ಪ್ರಯೋಗ) (ಆಡುಮಾತು) ವಿಶ್ವವಿದ್ಯಾನಿಲಯವನ್ನು – ಹತ್ತು, ಸೇರು, ಪ್ರವೇಶಿಸು.
    2. ಬೆಲೆ ಹೆಚ್ಚಾಗು; ತೇಜಿಯಾಗು.
    3. ಸಿಡಿ; ಸ್ಫೋಟಿಸು.
    4. (ಉರಿ ಹಿಡಿದು ಯಾ ಹೊಗೆಯಿಟ್ಟು) ಆಹುತಿಯಾಗು; ನಾಶವಾಗು.
  64. go well (or ill etc.) (ಸಾಮಾನ್ಯವಾಗಿ with ಒಡನೆ) ಒಳ್ಳೆಯದಾಗಿ (ಯಾ ಕೆಟ್ಟದಾಗಿ) ಪರಿಣಮಿಸು, ಆಗು.
  65. go with
    1. ಜೊತೆಯಲ್ಲಿ ಹೋಗು: I will go with you ನಾನು ನಿನ್ನ ಜೊತೆ ಬರುತ್ತೇನೆ, ಹೋಗುತ್ತೇನೆ.
    2. ಜೊತೆ ಇರು; ಅನುಗತವಾಗಿರು: disease often goes with squalor ರೋಗ ಅನೇಕ ವೇಳೆ ಹೊಲಸಿನ ಜತೆ ಇರುತ್ತದೆ.
    3. ಅದೇ ಪಕ್ಷ ವಹಿಸು, ಅಭಿಪ್ರಾಯಪಡು: I won’t go with you on that ಆ ವಿಷಯದಲ್ಲಿ ನಾನು ನಿನ್ನ ಅಭಿಪ್ರಾಯ ಹೊಂದಿರಲಾರೆ.
    4. ಒಪ್ಪು; ಸಮ್ಮತಿಸು.
    5. ಹೊಂದಿಕೊ; ಅನುಗುಣವಾಗಿರು.
    6. ಸಮರಸದಿಂದಿರು.
    7. ತಾತ್ಪರ್ಯ ಗ್ರಹಿಸು.
    8. (ಆಡುಮಾತು) (ಹುಡುಗನ ಯಾ ಹುಡುಗಿಯ ವಿಷಯದಲ್ಲಿ) (ಪ್ರಾಯಶಃ ಮದುವೆಯ ದೃಷ್ಟಿಯಿಂದ) ಜೊತೆಯಲ್ಲಿ ಓಡಾಡು.
  66. go without
    1. ಇಲ್ಲದೆ – ಹೋಗು, ಇರು.
    2. ಇಲ್ಲದಿದ್ದರೂ ಹೇಗೋ ಅನುಸರಿಸಿಕೊಂಡು, ಸುಧಾರಿಸಿಕೊಂಡು ಹೋಗು: we shall just have to go without ಅದು ಇಲ್ಲದಿದ್ದರೂ ನಾವು ಹೇಗೋ ಅನುಸರಿಸಿಕೊಂಡು ಹೋಗಬೇಕಾಗಿದೆ.
  67. to go
    1. (ಅಮೆರಿಕನ್‍ ಪ್ರಯೋಗ) (ಆಹಾರ, ಉಪಾಹಾರ, ಮೊದಲಾದವುಗಳ ವಿಷಯದಲ್ಲಿ) ಮಾರಾಟ ಮಾಡಿದ ಜಾಗದಲ್ಲಿಲ್ಲದೆ ಬೇರೆಡೆ ತೆಗೆದುಕೊಂಡು ಹೋಗಿ ತಿನ್ನಲು: coffee and doughnuts to go ಹೊರಗಡೆ ತೆಗೆದುಕೊಂಡು ಹೋಗಿ ತಿನ್ನಲು ಕಾಹಿ ಮತ್ತು ಕಜ್ಜಾಯಗಳು.
    2. ಉಳಿದಿರು; ಮಿಕ್ಕಿರು: two pages to go ಇನ್ನೂ ಎರಡು ಪುಟಗಳು ಉಳಿದಿವೆ.
  68. who goes there? (ಕಾವಲುಗಾರನ ಕೂಗು) ಯಾರದು? ಯಾರಲ್ಲಿ ಹೋಗುತ್ತಿರುವವರು?
ನುಡಿಗಟ್ಟು
  1. go all lengths (ಯಾವುದಾದರೂ ಒಂದು ಕೆಲಸದಲ್ಲಿ) ಎಷ್ಟು ದೂರ ಬೇಕಾದರೂ ಹೋಗು, ಮುಂದುವರಿ.
  2. go back on (or upon) one’s word ಮಾತಿಗೆ ತಪ್ಪು; ವಚನಭಂಗಮಾಡು.
  3. go by default (ಕಕ್ಷಿಗಾರನ ತಪ್ಪಿನಿಂದಾಗಿ) ಮೊಕದ್ದಮೆ ವ್ಯತಿರಿಕ್ತವಾಗು, ವಿರೋಧವಾಗು: the case goes by default (ಕಕ್ಷಿದಾರನ) ಗೈರುಹಾಜರಿಯಿಂದಾಗಿ ಮೊಕದ್ದಮೆ ಅವನಿಗೆ ವ್ಯತಿರಿಕ್ತವಾಗಿ ಆಗುತ್ತದೆ.
  4. go by (or under) the name of ಆ ಹೆಸರು ಹೊತ್ತಿರು; -ಅಂತೆ ಕರೆಯಲ್ಪಡು.
  5. go for
    1. ತರಲು ಹೋಗು; ತೆಗೆದುಕೊಂಡು ಬರಲು ಹೋಗು.
    2. ಪಡೆಯಲು ಪ್ರಯತ್ನಿಸು: he is going for the championship (ಸ್ಪರ್ಧೆಯಲ್ಲಿ) ಅವನು ಚ್ಯಾಂಪಿಯನ್‍ಗಿರಿ ಪಡೆಯಲು ಪ್ರಯತ್ನಿಸುತ್ತಿದ್ದಾನೆ.
    3. (ಅಶಿಷ್ಟ) ಕ
      See also 1go  3go  4go
      2go ಗೋ
      ನಾಮವಾಚಕ
      (ಬಹುವಚನ goes ಉಚ್ಚಾರಣೆ ಗೋಸ್‍).
      1. ಹೋಗುವುದು; ಗಮನ.
      2. ನಿರ್ಗಮನ; ನಿಷ್ಕ್ರಮಣ.
      3. ಕೆಚ್ಚು; ಹುರುಪು; ಆಪು; ಸಾಹಸ; ಎದೆಗಾರಿಕೆ; ಸತ್ತ್ವ.
      4. (ಆಡುಮಾತು) ತೀವ್ರ, ಬಿರುಸಿನ, ಜೋರಾದ – ಕೆಲಸ: it’s all go ಅದೆಲ್ಲ ಬಿರುಸಿನ ಕೆಲಸ.
      5. (ಆಡುಮಾತು) ಅನಿರೀಕ್ಷಿತ ತಿರುವು, ಪರಿಸ್ಥಿತಿ: here’s a go! ಇದೊಂದು ಅನಿರೀಕ್ಷಿತ ತಿರುವು. what a go! ಎಂಥ ಪರಿಸ್ಥಿತಿ!
      6. (ಆಡುಮಾತು) ಕಷ್ಟದ ಕೆಲಸ; ಶ್ರಮದ ಕಾರ್ಯ.
      7. (ಆಡುಮಾತು) ಗೆಲುವು; ಯಶಸ್ಸು; ಜಯ: make a go of it ಅದನ್ನು ಗೆಲ್ಲಿಸು, ಯಶಸ್ವಿಗೊಳಿಸು.
      8. (ಆಡುಮಾತು) ಯತ್ನ; ಪ್ರಯತ್ನ; ಸರದಿ; ಸರ್ತಿ; ಸೂಳು: have a go at it ಒಂದು ಕೈ ನೋಡು; ಪ್ರಯತ್ನಿಸಿ ನೋಡು. scored seven at one go ಒಂದೇ ಏಟಿಗೆ ಏಳು ಅಂಕ ಗಿಟ್ಟಿಸಿದ.
      9. (ಆಡುಮಾತು) ಒಂದು ಆವೃತ್ತಿ; ಒಂದು ಸಲಕ್ಕೆ ಬಡಿಸಿದ ಮದ್ಯ ಮೊದಲಾದವು.
      10. ಯಾವುದೇ ಕಾಯಿಲೆಯ ಒಂದು ಸುತ್ತು, ಸೂಳು, ಆವೃತ್ತಿ.
      ಪದಗುಚ್ಛ
      1. all the go (ಆಡುಮಾತು) ಕಾಲಾನುಗುಣವಾದದ್ದು; ರೂಢಿಯಲ್ಲಿರುವುದು; ಫ್ಯಾಷನ್ನು: he becomes all the go in the University ವಿಶ್ವವಿದ್ಯಾನಿಲಯದಲ್ಲಿ ಅವನೇ ಫ್ಯಾಷನ್ನಿನ ಸರ್ವಸ್ವವಾಗಿದ್ದಾನೆ.
      2. at one go ಒಂದೇ ಪ್ರಯತ್ನದಲ್ಲಿ; ಒಂದೇ – ಏಟಿಯಲ್ಲಿ, ಸಲಕ್ಕೆ.
      3. have a go at (ಯಾವುದೇ ಒಂದನ್ನು ಸಾಧಿಸಲು) ಪ್ರಯತ್ನ ಮಾಡು; ಕೈನೋಡು.
      4. it’s a go (ಆಡುಮಾತು) (ಒಪ್ಪಂದ, ಕರಾರು, ಮೊದಲಾದವು) ಸಮ್ಮತ; ಒಪ್ಪಿಗೆಯಾಗಿದೆ.
      5. it’s no go
        1. ಆ ಕೆಲಸ ಅಸಾಧ್ಯ.
        2. ಪರಿಸ್ಥಿತಿ ಶೋಚನೀಯ.
      6. near go (ಆಡುಮಾತು) ಕೂದಲೆಳೆಯಷ್ಟರಲ್ಲಿ ಪಾರಾದದ್ದು; ಸ್ವಲ್ಪದರಲ್ಲಿ ತಪ್ಪಿಸಿಕೊಂಡದ್ದು.
      7. no-go
        1. ಅಸಾಧ್ಯ; ಸಾಧಿಸಲು ಅಸಾಧ್ಯ.
        2. (ಅಡ್ಡಗಟ್ಟು, ಪ್ರತಿಬಂಧಕಾಜ್ಞೆ, ಮೊದಲಾದವುಗಳಿಂದಾಗಿ) ಪ್ರವೇಶಿಸಲು ಅಸಾಧ್ಯ; ದುಷ್ಪ್ರವೇಶ್ಯ; ಅಪ್ರವೇಶ್ಯ.
      8. on the go (ಆಡುಮಾತು)
        1. ಸಂತತ ಗತಿಯಲ್ಲಿ; ಸದಾ ಚಲಿಸುತ್ತಾ; ನಿರಂತರ – ಚಲನೆಯಲ್ಲಿ, ಚಲ ಸ್ಥಿತಿಯಲ್ಲಿ.
        2. ಬೀಳು ಸ್ಥಿತಿಯಲ್ಲಿ; ಇಳಿಗತಿಯಲ್ಲಿ.
      9. quite the go = ಪದಗುಚ್ಛ \((1)\).
      See also 1go  2go  4go
      3go ಗೋ
      ಗುಣವಾಚಕ

      (ಆಡುಮಾತು)

      1. ಸರಿಯಾಗಿ ಕೆಲಸ ಮಾಡುತ್ತಿರುವ, ಸಿದ್ಧವಾಗಿರುವ: the fuel system is go ಇಂಧನ ವ್ಯವಸ್ಥೆ ಸರಿಯಾಗಿ ಕೆಲಸಮಾಡುತ್ತಿದೆ.
      2. ಹ್ಯಾಷನ್ನಿನ: I am not a go person ನಾನೊಬ್ಬ ಹ್ಯಾಷನ್ನಿನ ವ್ಯಕ್ತಿಯಲ್ಲ.
      3. ಪ್ರಗತಿಪರ; ಆಧುನಿಕ.
      See also 1go  2go  3go
      4go ಗೋ
      ನಾಮವಾಚಕ

      ಗೋ; ಮನೆಗಳಿರುವ ಫಲಕದ ಮೇಲೆ ಬಿಳಿ ಮತ್ತು ಕರಿಯ ಕಲ್ಲು ಅಥವಾ ಕಾಯಿಗಳಿಂದ ಆಡುವ ಜಪಾನೀಯರ ಒಂದು ಆಟ.