See also 2glass
1glass ಗ್ಲಾಸ್‍
ನಾಮವಾಚಕ
  1. ಗಾಜು; ಕಾಚ; ಮರಳನ್ನು ಸೋಡಾ ಯಾ ಪೊಟ್ಯಾಷ್‍ ಯಾ ಅವೆರಡರೊಡನೆ ಮತ್ತು ಇತರ ಕೆಲವು ಪದಾರ್ಥಗಳೊಡನೆ ಬೆರೆಸಿ, ಶಾಖದಿಂದ ಕರಗಿಸಿ ತಯಾರಿಸಿದ, ಸಾಮಾನ್ಯವಾಗಿ, ಪಾರದರ್ಶಕವಾಗಿ, ಹೊಳಪುಳ್ಳದ್ದಾಗಿ, ಕಠಿನವಾಗಿ ಮತ್ತು ಭಿದುರವಾಗಿ ಇರುವ ಪದಾರ್ಥ.
  2. ಗಾಜು; ಸಂಯೋಜನದಲ್ಲಿ ಯಾ ಗುಣಗಳಲ್ಲಿ ಗಾಜಿನಂತಹ ವಸ್ತು: glass of antimony ಆಂಟಿಮನಿ ಗಾಜು.
  3. ಗಾಜಿನ – ಪಾತ್ರೆಗಳು, ಒಡವೆಗಳು, ಕಿಟಕಿಗಳು, ಸಸ್ಯರಕ್ಷಕ ಗೃಹ(ಗಳು).
  4. ಗಾಜಿನ ಲೋಟ ಯಾ ಬಟ್ಟಲು.
  5. ಗಾಜಿನ ಲೋಟದ ಯಾ ಬಟ್ಟಲಿನ ತುಂಬ ಇರುವ ಪಾನೀಯದ (ಸಾಮಾನ್ಯವಾಗಿ ಮದ್ಯದ) ಪ್ರಮಾಣ: a friendly glass ಸ್ನೇಹಲೋಟ; ಸ್ನೇಹದ ಕುಡಿತ. fond of his glass ಮದ್ಯಪ್ರಿಯನಾಗಿದ್ದಾನೆ.
  6. = sand-glass.
  7. = hour-glass.
  8. (ಗಾಡಿ ಮೊದಲಾದವುಗಳ) ಕಿಟಕಿ.
  9. ಗಾಜು; ಚಿತ್ರಪಟದ ಮೇಲಿನ ಗಾಜುಹಲಗೆ, ಕನ್ನಡಿ.
  10. (ಸಸಿಗಳಿಗೆ ಕವಿಸುವ) ಗಾಜು ಪೆಟ್ಟಿಗೆ.
  11. (ಗಾಜಿನ) ಕನ್ನಡಿ; ದರ್ಪಣ.
  12. (ಮುಖ್ಯವಾಗಿ ಬಹುವಚನ ದಲ್ಲಿ) ಕನ್ನಡಕ; ಸುಲೋಚನ.
  13. ಲೆನ್ಸ್‍; ಯವ; ಮಸೂರ.
  14. (ಗಡಿಯಾರದ ಮುಖಕ್ಕೆ ಹಾಕಿರುವ) ಗಾಜು ಬಿಲ್ಲೆ.
  15. (ಮುಖ್ಯವಾಗಿ ಬಹುವಚನದಲ್ಲಿ) = field-glasses.
  16. ದೂರದರ್ಶಕ.
  17. = opera-glass.
  18. ಸೂಕ್ಷ್ಮದರ್ಶಕ.
  19. ವಾಯುಭಾರಮಾಪಕ.
ನುಡಿಗಟ್ಟು

has had a glass too much ಸ್ವಲ್ಪ ಹೆಚ್ಚಾಗಿ (ಮದ್ಯ) ಕುಡಿದಿದ್ದಾನೆ; (ಮದ್ಯದ) ಒಂದು ಲೋಟ ಹೆಚ್ಚು ಹಾಕಿದ್ದಾನೆ, ಏರಿಸಿದ್ದಾನೆ.

See also 1glass
2glass ಗ್ಲಾಸ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಭೂತಕೃದಂತದಲ್ಲಿ) ಗಾಜುಹಾಕು; ಗಾಜು ಜೋಡಿಸು.
  2. ಗಾಜಿನಂತೆ – ನುಣುಪುಮಾಡು, ನಯಮಾಡು.
  3. (ಕಣ್ಣನ್ನು) ಕಾಂತಿಗೆಡಿಸು; ನಿಸ್ತೇಜಗೊಳಿಸು; ಗಾಜಿನಂತೆ ಮಂದಗೊಳಿಸು.
  4. ಕನ್ನಡಿಯಂತೆ ಪ್ರತಿಫಲಿಸು, ಪ್ರತಿಬಿಂಬಿಸು: trees glass themselves in the lake ಸರೋವರದಲ್ಲಿ ಮರಗಳು ಪ್ರತಿಬಿಂಬಿಸುತ್ತವೆ.
  5. ದುರ್ಬೀನಿನ ಮೂಲಕ ನೋಡು ಯಾ ಹುಡುಕು.