See also 2glare  3glare
1glare ಗ್ಲೇರ್‍
ಸಕರ್ಮಕ ಕ್ರಿಯಾಪದ

(ದ್ವೇಷವನ್ನು, ಪ್ರತಿಭಟನೆಯನ್ನು) ಕಣ್ಣಲ್ಲಿ ಸೂಸು; ದೃಷ್ಟಿಯಿಂದ ತೋರಿಸು.

ಅಕರ್ಮಕ ಕ್ರಿಯಾಪದ
  1. ಕಣ್ಣು ಕೋರೈಸು; ಝಳ ಹೊಡೆ; ಕಣ್ಣು ಕೋರೈಸುವಂತೆ ಯಾ ಕಣ್ಣಿಗೆ ಅಹಿತವಾಗುವಂತೆ – ಹೊಳೆ, ಜ್ವಲಿಸು, ಪ್ರಕಾಶಿಸು.
  2. ಅತಿಯಾಗಿ ಗಮನ ಸೆಳೆಯುವಂತಿರು; ಕಣ್ಣಿಗೆ – ರಾಚುವಂತಿರು, ಹೊಡೆಯುವಂತಿರು; ಕಣ್ಣು ಕುಕ್ಕುವಂತಿರು.
  3. ದುರದುರನೆ ಯಾ ಉಗ್ರವಾಗಿ ನೋಡು.
See also 1glare  3glare
2glare ಗ್ಲೇರ್‍
ನಾಮವಾಚಕ
  1. ಝಳಪು; ಚುಚ್ಚುಬೆಳಕು; ತೀಕ್ಷ್ಣಪ್ರಕಾಶ; ಪ್ರಖರಪ್ರಭೆ; ಪ್ರಬಲವಾದ, ಪ್ರಜ್ವಲಿಸುವ ಬೆಳಕು.
  2. ಝಳ; ಉರಿ ಬಿಸಿಲು; ಸುಡುಬಿಸಿಲು; ಉರಿಯುವ, ಸುಡುವ – ಬಿಸಿಲು; ಸಹಿಸಲಾಗದ, ಎಡೆಬಿಡದ – ಬಿಸಿಲು; ಧಗಧಗಿಸುವ ಸೂರ್ಯತಾಪ.
  3. ಥಳಕು ಹೊಳಪು; ಕಪಟಕಾಂತಿ; ಹೊರಬೆಡಗು.
  4. ನೆಟ್ಟನೋಟ; ದಿಟ್ಟಿಸಿನೋಡುವ ನೋಟ.
  5. ದುರುದುರು ನೋಟ; ಉಗ್ರನೋಟ; ಉರಿನೋಟ; ದುರುಗುಟ್ಟಿ ಯಾ ಉಗ್ರವಾಗಿ ನೋಡುವ ನೋಟ.
See also 1glare  2glare
3glare ಗ್ಲೇರ್‍
ಗುಣವಾಚಕ

(ಅಮೆರಿಕನ್‍ ಪ್ರಯೋಗ) (ಮುಖ್ಯವಾಗಿ ಮಂಜುಗಡ್ಡೆಯ ವಿಷಯದಲ್ಲಿ) ನಯವಾದ ಮತ್ತು ಹೊಳೆಯುವ; ನುಣುಪಾದ ಹೊಳಪುಮೈಯಿನ.