2glare
ಗ್ಲೇರ್
ನಾಮವಾಚಕ
- ಝಳಪು; ಚುಚ್ಚುಬೆಳಕು; ತೀಕ್ಷ್ಣಪ್ರಕಾಶ; ಪ್ರಖರಪ್ರಭೆ; ಪ್ರಬಲವಾದ, ಪ್ರಜ್ವಲಿಸುವ ಬೆಳಕು.
- ಝಳ; ಉರಿ ಬಿಸಿಲು; ಸುಡುಬಿಸಿಲು; ಉರಿಯುವ, ಸುಡುವ – ಬಿಸಿಲು; ಸಹಿಸಲಾಗದ, ಎಡೆಬಿಡದ – ಬಿಸಿಲು; ಧಗಧಗಿಸುವ ಸೂರ್ಯತಾಪ.
- ಥಳಕು ಹೊಳಪು; ಕಪಟಕಾಂತಿ; ಹೊರಬೆಡಗು.
- ನೆಟ್ಟನೋಟ; ದಿಟ್ಟಿಸಿನೋಡುವ ನೋಟ.
- ದುರುದುರು ನೋಟ; ಉಗ್ರನೋಟ; ಉರಿನೋಟ; ದುರುಗುಟ್ಟಿ ಯಾ ಉಗ್ರವಾಗಿ ನೋಡುವ ನೋಟ.