See also 2glad  3glad
1glad ಗ್ಲಾಡ್‍
ಗುಣವಾಚಕ
( ತರರೂಪ gladder, ತಮರೂಪ gladdest).
  1. ( ಆಖ್ಯಾತಕ ಪ್ರಯೋಗ) ಸಂತೋಷಗೊಂಡ; ಹರ್ಷಗೊಂಡ; ಸಂತುಷ್ಟ; ಹರ್ಷಿತ: I am glad of it ಅದರಿಂದ ನಾನು ಹರ್ಷಿತನಾದೆ.
  2. (ಮುಖಭಾವ, ಮನೋಭಾವ, ಮೊದಲಾದವುಗಳ ವಿಷಯದಲ್ಲಿ) ಗೆಲುವಿನ; ನಲಿವಿನ; ಸಂತೋಷಸೂಚಕ; ಸಂತೋಷದ ಕಳೆಯುಳ್ಳ; ಗೆಲುವು ತುಂಬಿದ; ಸಂತೋಷಭರಿತ; ಹರ್ಷ – ಭರಿತ, ಪೂರಿತ.
  3. (ಸುದ್ದಿ, ಸಂಗತಿ, ಮೊದಲಾದವುಗಳ ವಿಷಯದಲ್ಲಿ) ಗೆಲುವಿನ; ಹರ್ಷದ; ಸಂತೋಷದ; ಗೆಲುವುಂಟುಮಾಡುವ; ಹರ್ಷದಾಯಕ; ಸಂತೋಷಕರ.
  4. (ಪ್ರಕೃತಿ ಮೊದಲಾದವುಗಳ ವಿಷಯದಲ್ಲಿ)
    1. ಕಾಂತಿಯುತ; ಪ್ರಕಾಶಮಾನ.
    2. ಚೆಲುವಾದ; ಸುಂದರ; ರಮಣೀಯ; ಮನೋಹರ.
ನುಡಿಗಟ್ಟು

the glad eye

  1. (ಅಶಿಷ್ಟ) ಬೇಟದ ನೋಟ; ಕಾಮುಕ ದೃಷ್ಟಿ.
  2. ಉಲ್ಲಾಸದ ನೋಟ; ಹರ್ಷದೃಷ್ಟಿ.
See also 1glad  3glad
2glad ಗ್ಲಾಡ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ gladded, ವರ್ತಮಾನ ಕೃದಂತ gladding).

(ಪ್ರಾಚೀನ ಪ್ರಯೋಗ) ಗೆಲುವುಂಟುಮಾಡು; ಉಲ್ಲಾಸಗೊಳಿಸು; ಸಂತೋಷಪಡಿಸು; ಹರ್ಷಗೊಳಿಸು.

See also 1glad  2glad
3glad ಗ್ಲಾಡ್‍
ನಾಮವಾಚಕ

(ಆಡುಮಾತು, ಸಾಮಾನ್ಯವಾಗಿ ಬಹುವಚನದಲ್ಲಿ) gladiolus.