1glad
ಗುಣವಾಚಕ
( ತರರೂಪ gladder, ತಮರೂಪ gladdest).
- ( ಆಖ್ಯಾತಕ ಪ್ರಯೋಗ) ಸಂತೋಷಗೊಂಡ; ಹರ್ಷಗೊಂಡ; ಸಂತುಷ್ಟ; ಹರ್ಷಿತ: I am glad of it ಅದರಿಂದ ನಾನು ಹರ್ಷಿತನಾದೆ.
- (ಮುಖಭಾವ, ಮನೋಭಾವ, ಮೊದಲಾದವುಗಳ ವಿಷಯದಲ್ಲಿ) ಗೆಲುವಿನ; ನಲಿವಿನ; ಸಂತೋಷಸೂಚಕ; ಸಂತೋಷದ ಕಳೆಯುಳ್ಳ; ಗೆಲುವು ತುಂಬಿದ; ಸಂತೋಷಭರಿತ; ಹರ್ಷ – ಭರಿತ, ಪೂರಿತ.
- (ಸುದ್ದಿ, ಸಂಗತಿ, ಮೊದಲಾದವುಗಳ ವಿಷಯದಲ್ಲಿ) ಗೆಲುವಿನ; ಹರ್ಷದ; ಸಂತೋಷದ; ಗೆಲುವುಂಟುಮಾಡುವ; ಹರ್ಷದಾಯಕ; ಸಂತೋಷಕರ.
- (ಪ್ರಕೃತಿ ಮೊದಲಾದವುಗಳ ವಿಷಯದಲ್ಲಿ)
- ಕಾಂತಿಯುತ; ಪ್ರಕಾಶಮಾನ.
- ಚೆಲುವಾದ; ಸುಂದರ; ರಮಣೀಯ; ಮನೋಹರ.
ನುಡಿಗಟ್ಟು
the glad eye
- (ಅಶಿಷ್ಟ) ಬೇಟದ ನೋಟ; ಕಾಮುಕ ದೃಷ್ಟಿ.
- ಉಲ್ಲಾಸದ ನೋಟ; ಹರ್ಷದೃಷ್ಟಿ.