See also 2gild
1gild ಗಿಲ್ಡ್‍
ಸಕರ್ಮಕ ಕ್ರಿಯಾಪದ
(ಭೂತಕೃದಂತ gilded, gilt).
  1. ಚಿನ್ನದ ಮುಲಾಮು ಮಾಡು; ಚಿನ್ನದ ಲೇಪ ಹಾಕು; ಚಿನ್ನದ ರೇಕು ಹಚ್ಚು.
  2. ಚಿನ್ನದ ಬಣ್ಣ ಹಾಕು; ಚಿನ್ನದ ಹಾಗೆ ಕಾಣುವಂತೆ ಮಾಡು; ಗಿಲೀಟು ಮಾಡು.
  3. (ಒಂದು ಸ್ಥಿತಿ ಮೊದಲಾದವನ್ನು) ಸಹಿಸಲಾಗುವಂತೆ, ಮರ್ಯಾದಾರ್ಹವಾಗುವಂತೆ ಹಣ ಕೊಟ್ಟು ಏರ್ಪಡಿಸು.
  4. ಹೊಂಬಣ್ಣದ, ಹೊಂಬೆಳಗಿನ – ಛಾಯೆ ಕೊಡು, ಅಲಂಕರಿಸು.
  5. (ಮಾತಿನಿಂದ) ಗಿಲೀಟು ಮಾಡು; ಅಂದವಾದ ಮಾತುಗಳಿಂದ ಹೊರಕ್ಕೆ ಕಳೆ ಕಟ್ಟಿಸು, ಥಳಕು ಮಾಡು.
ನುಡಿಗಟ್ಟು
  1. gild the lily ಕಮಲಕ್ಕೆ ಬಣ್ಣ ಹಚ್ಚು; ಸಹಜವಾಗಿಯೇ ಸುಂದರವಾಗಿರುವ ವಸ್ತುವಿಗೆ ಅನಗತ್ಯ ಅಲಂಕಾರ ಮಾಡು, ಬಣ್ಣ – ಬಳಿ, ಹಚ್ಚು.
  2. gild the pill ಗುಳಿಗೆ ಹಿತವಾಗಿಸು; ಅನಿವಾರ್ಯ ಅಹಿತವನ್ನು ಸಹಿಸಲಾಗುವಂತೆ ಮೃದು ಮಾಡು.
See also 1gild
2gild ಗಿಲ್ಡ್‍
ನಾಮವಾಚಕ

= guild.