See also 2gang  3gang
1gang ಗ್ಯಾಂಗ್‍
ನಾಮವಾಚಕ
  1. (ಕೆಲಸಗಾರರ, ಗುಲಾಮರ ಯಾ ಕೈದಿಗಳ) ಗ್ಯಾಂಗು; ತಂಡ; ಗುಂಪು; ಕೂಟ.
  2. ಗ್ಯಾಂಗು; ಪಟಾಲಂ; ಕಳ್ಳತನ, ದರೋಡೆ, ಮೊದಲಾದ ಅಕೃತ್ಯಗಳಿಗಾಗಿ ಒಂದುಗೂಡುವ ಜನರ ತಂಡ.
  3. ಏಕಕಾಲದಲ್ಲಿ ಕೆಲಸ ಮಾಡುವಂತೆ ಅಳವಡಿಸಿದ ಹತ್ಯಾರ, ಉಪಕರಣ, ಮೊದಲಾದವುಗಳ ತಂಡ.
See also 1gang  3gang
2gang ಗ್ಯಾಂಗ್‍
ಸಕರ್ಮಕ ಕ್ರಿಯಾಪದ

ಒಟ್ಟುಸೇರಿ, ಒಟ್ಟಾಗಿ ಹೊಂದಿಕೊಂಡು – ಕೆಲಸಮಾಡು, ಮಾಡುವಂತೆ (ಉಪಕರಣ ಮೊದಲಾದವುಗಳನ್ನು) ಅಳವಡಿಸು.

ಅಕರ್ಮಕ ಕ್ರಿಯಾಪದ
  1. ಸೇರಿ, ಒಟ್ಟಿಗೆ, ಒಂದುಗೂಡಿ – ಕೆಲಸ ಮಾಡು.
  2. (ಒಬ್ಬನೊಡನೆ ಯಾ ಇತರರೊಡನೆ) ಒಟ್ಟಾಗು; ಒಟ್ಟುಗೂಡು; ಒಂದುಗೂಡು; ಜೊತೆ ಸೇರು.
ಪದಗುಚ್ಛ
  1. gang up on (ಆಡುಮಾತು) (ಒಬ್ಬನ ವಿರುದ್ಧವಾಗಿ) ಗುಂಪುಗೂಡು; ಒಂದುಗೂಡು; ಒಟ್ಟಿಗೆ ಸೇರಿಕೊ; ಒಟ್ಟಾಗು.
  2. gang up with = 2gang ಅಕರ್ಮಕ ಕ್ರಿಯಾಪದ \((2)\).
See also 1gang  2gang
3gang ಗ್ಯಾಂಗ್‍
ಅಕರ್ಮಕ ಕ್ರಿಯಾಪದ

(ಸ್ಕಾಟ್ಲಂಡಿನ ಪ್ರಯೋಗ) ಹೋಗು; ನಡೆ.

ನುಡಿಗಟ್ಟು

gang agley (ಯೋಜನೆ, ಉದ್ದೇಶ, ಮೊದಲಾದವು) ದಾರಿತಪ್ಪು; ಎಣಿಸಿದಂತೆ ನಡೆಯದೆ ಹೋಗು; ತಪ್ಪಾಗು.