See also 2gallery
ನಾಮವಾಚಕ
(ಬಹುವಚನ galleries).
  1. ಛನ್ನಪಥ; ಚಾವಣಿಹಾದಿ; ಪಕ್ಕಗಳಲ್ಲಿ ಅರೆ ತೆರೆದಿರುವ, ಮೇಲೆ ಚಾವಣಿಯುಳ್ಳ, ನಡೆದಾಡಲು ಮಾಡಿದ ಹಾದಿ.
  2. ದ್ವಾರಮಂಟಪ; ಮುಖಮಂಟಪ.
  3. ಕಂಬಹಾದಿ; ಸ್ತಂಭಪಥ; ಕಂಬಸಾಲುಳ್ಳ ಹಾದಿ.
  4. (ಕಟ್ಟಡಗಳ ಒಳಭಾಗಕ್ಕೆ ಹೋಗಲು ಹೆಚ್ಚು ಮಂದದ, ದಪ್ಪದ ಗೋಡೆಗಳ ನಡುವೆ ಮಾಡಿದ ಯಾ ಚಾಚು ಊರೆಗಳ ಆಧಾರದ ಮೇಲೆ ಕಟ್ಟಿದ) ಉದ್ದನೆಯ ಕಿರುಹಾದಿ ಯಾ ಓಣಿ.
  5. ಗ್ಯಾಲರಿ; ಉಪ್ಪರಿಗೆಯ ಕೈಸಾಲೆ.
  6. ಚರ್ಚು, ಸಭಾಮಂದಿರ, ಮೊದಲಾದವುಗಳಲ್ಲಿ ಒಳಗೋಡೆಯಿಂದ ಸಭಾಂಗಣದ ಕಡೆಗೆ ಚಾಚಿಕೊಂಡು ಹೆಚ್ಚು ಸಭಿಕರಿಗೆ ಸ್ಥಳ ಒದಗಿಸುವ ಯಾ ಗಾಯಕರು, ವರದಿಗಾರರು, ಆಗಂತುಕರು, ಮೊದಲಾದವರಿಗೆ ಈಸಲಾಗಿಟ್ಟಿರುವ ವೇದಿಕೆ: minstrels’ gallery ಹಾಡು ಕವಿಗಳ ಗ್ಯಾಲರಿ.
  7. (ನಾಟಕಶಾಲೆಯಲ್ಲಿ)
    1. ಗ್ಯಾಲರಿ; ಉಪ್ಪರಿಗೆಯ ಮೆಟ್ಟಿಲು ಪೀಠ; ಸೋಪಾನ ಪೀಠ; ಅತ್ಯಂತ ಮೇಲ್ಭಾಗದಲ್ಲಿನ ಕೈಸಾಲೆ, ವೇದಿಕೆ.
    2. ಗ್ಯಾಲರಿಯಲ್ಲಿ ಕುಳಿತವರು.
    3. ಗ್ಯಾಲರಿ ಪ್ರಭುಗಳು; ಗ್ಯಾಲರಿ ಮಂದಿ; ಗ್ಯಾಲರಿ ಜನ; ಪಾಮರ ಪ್ರೇಕ್ಷಕರು; ಅಸಂಸ್ಕೃತ ಪ್ರೇಕ್ಷಕ ಯಾ ಶ್ರೋತೃ ವರ್ಗ; ಕೆಳದರ್ಜೆಯವರು.
  8. ಕಿರಿಯಗಲದ ನಿಡುಕೋಣೆ.
  9. ಒಳಹಾದಿ; ನಡವೆ; ಹಜಾರ.
  10. ಕಲಾ – ಚಿತ್ರಶಾಲೆ, ಚಿತ್ರಮಂದಿರ; ಕಲಾವಸ್ತುಗಳ ಪ್ರದರ್ಶನ ಮಂದಿರ.
  11. (ದೀಪದ ಮೇಲಿನ) ಚಿಮಣಿಯ ಹಿಡಿಕೆ.
  12. (ಸೈನ್ಯ, ಗಣಿಗಾರಿಕೆ) (ನೇರವಾಗಿ ಸಮತಲದಲ್ಲಿ ಹೋಗುವ) ಸುರಂಗಮಾರ್ಗ.
  13. (ಗಾಲ್‍ ಪಂದ್ಯ ಮೊದಲಾದವುಗಳಲ್ಲಿನ) ಪ್ರೇಕ್ಷಕರು; ಪ್ರೇಕ್ಷಕತಂಡ.
ನುಡಿಗಟ್ಟು
See also 1gallery
ಸಕರ್ಮಕ ಕ್ರಿಯಾಪದ
  1. ಗ್ಯಾಲರಿ(ಗಳನ್ನು) – ಒದಗಿಸು, ಅಳವಡಿಸು; ಸೋಪಾನಪೀಠ ಒದಗಿಸು.
  2. (ಸೈನ್ಯ) ಸುರಂಗಮಾರ್ಗ ರಚಿಸು; ಸುರಂಗಹಾದಿ ಮಾಡು.