See also 2gallant  3gallant
1gallant ಗ್ಯಾಲಂಟ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) ಬೆಡಗುಡುಪಿನ; ಆಡಂಬರದ, ಡೌಲಿನ, ಠೀಕು – ಉಡುಪಿನ.
  2. (ಹಡಗು, ಕುದುರೆ, ಮೊದಲಾದವುಗಳ ವಿಷಯದಲ್ಲಿ) ವೈಭವದ; ಘನವಾದ; ಮಹಾ; ಉತ್ಕೃಷ್ಟವಾದ; ಗಂಭೀರವಾದ; ಠೀವಿಯಿಂದ ಕೂಡಿದ.
  3. ಧೀರ; ವೀರ; ವಿಕ್ರಮ; ಪ್ರತಾಪಶಾಲಿ.
  4. ವೀರಧರ್ಮಿ; ದಯಾವೀರ; ದುರ್ಬಲರ ಯಾ ಸ್ತ್ರೀಯರ ಪರವಾಗಿ ಅನುಕಂಪದಿಂದ ಮತ್ತು ಶೌರ್ಯದಿಂದ ವರ್ತಿಸುವ.
  5. ಪಾರ್ಲಿಮೆಂಟಿನಲ್ಲಿ ಸೇನೆಯ ಯಾ ನೌಕಾಬಲದ ಸದಸ್ಯನ ಸಾಂಪ್ರದಾಯಿಕ ವಿಶೇಷಣ, ಬಿರುದು: the honourable and gallant member ಗೌರವಾನ್ವಿತ ಹಾಗೂ ಧೀರ ಸದಸ್ಯ.
  6. ಸ್ತ್ರೀ ಭಕ್ತಿಯ; ಹೆಂಗಸರ ಬಗ್ಗೆ ವಿಶೇಷ ಗೌರವ, ಒಲವು ತೋರುವ.
  7. ಸ್ತ್ರೀ ಪರಾಯಣ; ರಸಿಕ; ಪ್ರಣಯಶೀಲ; ಕಾಮಾಸಕ್ತ.
See also 1gallant  3gallant
2gallant ಗ್ಯಾಲಂಟ್‍, ಗಲ್ಯಾಂಟ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ನೀಟುಗಾರ; ಶಿಸ್ತುಗಾರ; ಸೊಗಸುಗಾರ; ಷೋಕಿಲಾಲ.
  2. ಸ್ತ್ರೀಮೋಹಿ; ಸ್ತ್ರೀಪರಾಯಣ; ಹೆಂಗಸರಲ್ಲಿ ಆಸಕ್ತ.
  3. ಸ್ತ್ರೀಭಕ್ತ; ಹೆಂಗಸರ ಬಗ್ಗೆ ವಿಶೇಷ ಗೌರವಾದರ ಉಳ್ಳವನು, ತೋರುವವನು.
  4. ನಲ್ಲ; ಕಾದಲ.
  5. ಉಪಪತಿ; ವಿಟ; ಮಿಂಡ.
  6. ಸಜ್ಜನ; ಒಳ್ಳೆಯ ವ್ಯಕ್ತಿ.
See also 1gallant  2gallant
3gallant ಗಲ್ಯಾಂಟ್‍
ಸಕರ್ಮಕ ಕ್ರಿಯಾಪದ
  1. (ಹೆಂಗಸಿನೊಡನೆ) ಪ್ರಣಯವಾಡು; ಸರಸವಾಡು; ಪ್ರಣಯಚೇಷ್ಟೆ, ಪ್ರಣಯವಿಲಾಸ – ನಡೆಸು.
  2. (ಮಹಿಳೆಯ) ರಕ್ಷಕನಾಗಿ, ಬೆಂಗಾವಲಾಗಿ – ಜೊತೆಯಲ್ಲಿ ಹೋಗು.
ಅಕರ್ಮಕ ಕ್ರಿಯಾಪದ

ಚೆಲ್ಲಾಟವಾಡು; ಹೆಂಗಸರೊಡನೆ ಸರಸವಾಡು: spent his evenings gallanting with ladies ಹೆಂಗಸರೊಡನೆ ಚೆಲ್ಲಾಟವಾಡುತ್ತಾ ಸಂಜೆಗಳನ್ನು ಕಳೆದ.