See also 2gallant  3gallant
1gallant ಗ್ಯಾಲಂಟ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) ಬೆಡಗುಡುಪಿನ; ಆಡಂಬರದ, ಡೌಲಿನ, ಠೀಕು – ಉಡುಪಿನ.
  2. (ಹಡಗು, ಕುದುರೆ, ಮೊದಲಾದವುಗಳ ವಿಷಯದಲ್ಲಿ) ವೈಭವದ; ಘನವಾದ; ಮಹಾ; ಉತ್ಕೃಷ್ಟವಾದ; ಗಂಭೀರವಾದ; ಠೀವಿಯಿಂದ ಕೂಡಿದ.
  3. ಧೀರ; ವೀರ; ವಿಕ್ರಮ; ಪ್ರತಾಪಶಾಲಿ.
  4. ವೀರಧರ್ಮಿ; ದಯಾವೀರ; ದುರ್ಬಲರ ಯಾ ಸ್ತ್ರೀಯರ ಪರವಾಗಿ ಅನುಕಂಪದಿಂದ ಮತ್ತು ಶೌರ್ಯದಿಂದ ವರ್ತಿಸುವ.
  5. ಪಾರ್ಲಿಮೆಂಟಿನಲ್ಲಿ ಸೇನೆಯ ಯಾ ನೌಕಾಬಲದ ಸದಸ್ಯನ ಸಾಂಪ್ರದಾಯಿಕ ವಿಶೇಷಣ, ಬಿರುದು: the honourable and gallant member ಗೌರವಾನ್ವಿತ ಹಾಗೂ ಧೀರ ಸದಸ್ಯ.
  6. ಸ್ತ್ರೀ ಭಕ್ತಿಯ; ಹೆಂಗಸರ ಬಗ್ಗೆ ವಿಶೇಷ ಗೌರವ, ಒಲವು ತೋರುವ.
  7. ಸ್ತ್ರೀ ಪರಾಯಣ; ರಸಿಕ; ಪ್ರಣಯಶೀಲ; ಕಾಮಾಸಕ್ತ.